
ಅಂತರರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ವಿಜೇತೆ ಕೊಡುಗುಮೂಲದ ದೀಪಾ ಬಸ್ತಿ ಮನೆಗೆ ಭೇಟಿ ಮಾಡಿ ಶಾಸಕಮಂತರ್ ಅಭಿನಂದನೆ ಸಲ್ಲಿಸಿದರು
ಬಾನು ಮುಷ್ತಾಕ್ ರವರ ಕನ್ನಡದ :ಎದೆಯ ಹಣತೆ’ ಎಂಬ ಕೃತಿಯನ್ನು ‘Heart Lamp’ ಎಂಬ ಹೆಸರಿನ ಮೂಲಕ ಇಂಗ್ಲಿಷ್ ಗೆ ಅನುವಾದಿಸಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕೊಡಗಿನ ಹೆಮ್ಮೆಯ ಸುಪುತ್ರಿ ದೀಪಾ ಬಸ್ತಿ ರವರನ್ನು ಮಡಿಕೇರಿಯ ನಿವಾಸದಲ್ಲಿ ಶಾಸಕ ಡಾ.ಮಂತರ್ ಗೌಡ ಭೇಟಿ ಮಾಡಿ ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಿಸಿದರು.
ದೀಪಾ ಬಸ್ತಿ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಶಾಸಕ ಡಾ.ಮಂತರ್ ಗೌಡ ರವರು ಕೃತಿ ಬಗೆಗೆ ಮಾಹಿತಿಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ದೀಪಾ ಭಾಸ್ತಿ ತಂದೆ ಪ್ರಕಾಶ್ ಭಾಸ್ತಿ, ತಾಯಿ ಸುಧಾ, ಪತಿ ನಾಣಯ್ಯ, ಕೊಡುಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್ ಟಿ ಉಪಸ್ಥಿತರಿದ್ದರು.


