- ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಆಟೋ ಚಾಲಕನ ಬಂಧನ
- ಕೊಡಗಿನ ಕಲಾವಿದ ಐಮಂಡ ರೂಪೇಶ್ ನಾಣಯ್ಯನವರ ಎರಡು ಕಲಾಕೃತಿಗಳು ಅಮೃತಸರದ ಅಖಿಲ ಭಾರತ ಕಲಾಪ್ರದರ್ಶನಕ್ಕೆ ಆಯ್ಕೆ
- 300 ರೂ. ಸಂಬಳದಿಂದ ಬದುಕು ಆರಂಭಿಸಿ ಸಮಾಜ ಸೇವಕರಾಗಿ ಬೆಳೆದ ಹರಪಳ್ಳಿ ರವೀಂದ್ರರ ಬದುಕಿನ ಕಥೆಗೆ ಅಕ್ಷರ ರೂಪ.
- ಯಾಕೂಬ್ ನಿವಾಸಕ್ಕೆ ನಾಪಂಡ ಮುತ್ತಪ್ಪ ಭೇಟಿ: ಕೊಡಗು ಕಾಂಗ್ರೆಸ್ನಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾದ ಮುಖಾಮುಖಿ
- ಮಡಿಕೇರಿ ಜಿಟಿ ವೃತ್ತದಲ್ಲಿ ಪ್ರತಿಭಟನೆ, ಮೆರವಣಿಗೆಗೆ ಜಿಲ್ಲಾಧಿಕಾರಿ ನಿರ್ಬಂಧ: ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಸೋಮಶೇಖರ್ ಆದೇಶ.
- ಎಸ್.ಎಸ್. ಆಸ್ಪತ್ರೆಯ ವಾರ್ಷಿಕೋತ್ಸವದಲ್ಲಿ ಸಮೀರ್ ಹಾಗೂ ಕಲೀಲ್ ಅವರಿಗೆ ಸನ್ಮಾನ
- ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮ: ಪೋಷಕರಿಗೆ ನ್ಯಾಯಾಧೀಶರ ಎಚ್ಚರಿಕೆ
- ಕನ್ನಡ ಎಲ್ಲರ ಹೃದಯದ ಭಾಷೆ; ಉಳಿಸುವ ಹೊಣೆ ಎಲ್ಲರ ಮೇಲಿದದೆ: ಗಣ್ಯರ ಅಭಿಮತ
Author: Kodagu-admin
ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳಿಂದ ಬೂಕರ್ ವಿಜೇತೆ ದೀಪಾ ಭಾಸ್ತಿಗೆ ಅಭಿನಂದನೆ ಹಾಗು ಆಹ್ವಾನ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಮಡಿಕೇರಿಯ ಲೇಖಕಿ ದೀಪಾ ಭಾಸ್ತಿ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪಿ ಎಲ್ ಧರ್ಮ ಮಡಿಕೇರಿಯ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದರು. ಮಡಿಕೇರಿ ನಗರದಲ್ಲಿರುವ ದೀಪಾಭಾಸ್ತಿ ಅವರ ಮನೆಗೆ ಭೇಟಿ ನೀಡಿದ ಕುಲಪತಿ ದೀಪಾ ಭಾಸ್ತಿ ಹಾಗು ಮನೆಯವರೊಡನೆ ಮಾತನಾಡಿ 2004 ರಿಂದ 2006 ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡಿದ ದೀಪಾ ಭಾಸ್ತಿ ಅವರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ. ಕಾಲೇಜಿನ ದಿನಗಳಿಂದಲೂ ಸಾಹಿತ್ಯದ ಆಸಕ್ತಿ ಹೊಂದಿದ್ದ ದೀಪಾ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಬಹಳ ವಿಶೇಷವಾದುದು ಎಂದರು. ದೀಪಾ ಭಾಸ್ತಿಯವರ ಸಾಧನೆಗೆ ಸಹಕಾರ ನೀಡಿದ ಪತಿ ಚೆಟ್ಟೀರ ನಾಣಯ್ಯ ಹಾಗೂ ಪೋಷಕರನ್ನು ಇದೇ ಸಂದರ್ಭ ಕುಲಪತಿ ಅಭಿನಂದಿಸಿದರು. ಹಾಗು ಇದೇ ಸಂದರ್ಭದಲ್ಲಿ ದೀಪಾ ಭಾಸ್ತಿಯವರನ್ನು ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಿದರು. ಫೀಲ್ಡ್ ಮಾರ್ಷಲ್…
ಸಿದ್ದಾಪುರ : ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮ ಸಭೆಯನ್ನು ದಿನಾಂಕ 10-06-2025 ರಂದು ನಡೆಸಲು ಈಗಾಗಲೇ ಪಂಚಾಯತಿ ಆಡಳಿತ ಮಂಡಳಿ ನಿರ್ಧಾರ ಕೈಗೊಂಡು ತಯಾರಿ ನಡೆಸಿದೆ. ಆದರೆ ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ದಿನಗೂಲಿಗಾಗಿ ಕೆಲಸ ಮಾಡುವ ಹಿನ್ನೆಲೆ ವಾರದ ಮಧ್ಯೆ ರಜೆ ಮಾಡಲು ಜನ ಹಿಂದೇಟು ಹಾಕುತ್ತಾರೆ. ಸಭೆಗೆ ಗೈರಾಗುತ್ತಾರೆ ಎಂಬುವುದರ ಅರಿವಿದ್ದರೂ ಗ್ರಾಮಸ್ಥರ ಅನುಪಸ್ಥಿತಿಯಲ್ಲಿ ಗ್ರಾಮ ಸಭೆ ನಡೆಸಲು ಗ್ರಾಮ ಪಂಚಾಯಿತಿ ಮುಂದಾಗಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಭಾಗಗಳಲ್ಲಿ ಭಾನುವಾರ ರಜೆ ದಿನವಾಗಿರುವ ಹಿನ್ನೆಲೆ ಭಾನುವಾರ /ಸೋಮವಾರ ಗ್ರಾಮ ಸಭೆ ನಡೆಸಿದರೆ ಹೆಚ್ಚಿನವರು ಪಾಲ್ಗೊಳ್ಳುತ್ತಾರೆ. ಜತೆಗೆ ಸಮಸ್ಯೆಗಳ ಕುರಿತು ಚರ್ಚೆಗೂ ಅವಕಾಶ ಸಿಗುತ್ತೆ. ಆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ. ನಾವು ಕೂಲಿ ಕೆಲಸವನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ಬೇರೆ ಯಾವುದೇ ಆರ್ಥಿಕ ಮೂಲವಿಲ್ಲ. ಈಗಿರುವಾಗ ವಾರದ ಮಧ್ಯೆ ರಜೆ ಮಾಡುವ ಚಿಂತನೆಯೇ ಇರಲ್ಲ. ಯಾಕೆಂದ್ರೆ…
ಕೊಡಗು ಪತ್ರಕತ೯ರ ಸಂಘದಿಂದ ಬೂಕರ್ ಪ್ರಶಸ್ತಿ ವಿಜೇತ ಲೇಖಕಿಯೊಂದಿಗೆ ಸಂವಾದ – ಅಭಿನಂದನಾ ಕಾಯ೯ಕ್ರಮ ಪದಗಳ ತಜು೯ಮೆಗಿಂತ ಭಾವನೆಗಳನ್ನು ಬಿಂಬಿಸುವ ಭಾವಾನುವಾದಕ್ಕೇ ಮಹತ್ವ – ದೀಪಾಭಾಸ್ತಿ. ಮಡಿಕೇರಿ ಜೂನ್ 8 – ಪದಗಳ ತಜು೯ಮೆಗಿಂತ ಭಾವನೆಗಳನ್ನು ದಾಖಲಿಸುವ ಭಾವಾನುವಾದ ಪ್ರಕಾರವು, ಅನುವಾದ ಸಾಹಿತ್ಯದಲ್ಲಿ ಮಹತ್ವದ್ದಾಗಿರುತ್ತದೆ ಎಂದು ಪ್ರತಿಷ್ಟಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಪತ್ರಕತ೯ರ ಸಂಘದ ವತಿಯಿಂದ ನಗರದ ಲಾಲಿ ಪೆಟಲ್ ಸಭಾಂಗಣದಲ್ಲಿ ಆಯೋಜಿತ ಪತ್ರಕತೆ೯ ದೀಪಾಭಾಸ್ತಿಗೆ ಅಭಿನಂದನಾ ಸಮಾರಂಭ ಮತ್ತು ಸಂವಾದ ಕಾಯ೯ಕ್ರಮದಲ್ಲಿ ಪಾಲ್ಗೊಂಡು ದೀಪಾಭಾಸ್ತಿ ಮಾತನಾಡಿದರು. ಬಾನುಮುಷ್ತಾಕ್ ಅವರ ಎದೆಯ ಹಣತೆ ಕೖತಿ ಸೇರಿದಂತೆ 6 ಕಥಾಸಂಕಲನಗಳಲ್ಲಿನ 12 ಕಥೆಗಳನ್ನು ಆಯ್ಕೆ ಮಾಡಿ ಇಂಗ್ಲೀಷ್ ನಲ್ಲಿ ಬರೆದ ಹಾಟ್೯ ಲ್ಯಾಂಪ್ ಕೖತಿ ಸಂಬಂಧಿತ ಮಾಹಿತಿ ನೀಡಿದ ದೀಪಾಭಾಸ್ತಿ, ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಮಾಡುವಾಗ ಖಂಡಿತವಾಗಿಯೂ ಪದಗಳನ್ನು ತಜು೯ಮೆ ಮಾಡಬಾರದು. ಇದರ ಬದಲಿಗೆ ಮೂಲಕೖತಿಯಲ್ಲಿನ ಪದಗಳ ಭಾವವನ್ನು ಅಥೈ೯ಸಿಕೊಂಡು ತನ್ನದೇ ಶೈಲಿಯಲ್ಲಿ…
ವಿರಾಜಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ದೈವಜ್ಞ ಸಮಾಜದ ಕಟ್ಟಡದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಪಾಲ್ಗೊಂಡರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ದೈವಜ್ಞ ಸಮಾಜದವರ ಕೊಡುಗೆ ಈ ನಾಡಿಗೆ ಅಪಾರವಾದದ್ದು. ನಾಡಿನ ಎಲ್ಲಾ ಪ್ರಮುಖ ಕಾರ್ಯಗಳಲ್ಲಿ ದೈವಜ್ಞ ಸಮಾಜದ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು, ಈ ಸಮಾಜದ ಏಳಿಗೆಗಾಗಿ ತನ್ನ ಕೈಲಾದ ಎಲ್ಲಾ ಸಹಾಯ ಮಾಡಲು ತಾನು ಸಿದ್ಧ ಇರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರುಣ್ ಮಾಚಯ್ಯ, ದೈವಜ್ಞ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಡಿಕೇರಿ : ಬಲಿಜ ಸಮಾಜದ ಏಳಿಗೆಗಾಗಿ ಶ್ರೀ ಯೋಗಿ ನಾರಾಯಣ ಕೊಡಗು ಜಿಲ್ಲಾ ಬಲಿಜ ಸಂಘ ಅಸ್ಥಿತ್ವಕ್ಕೆ ತರಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಗಣೇಶ್ ನಾಯ್ಡು ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಲಿಜ ಸಮಾಜ ಸುಮಾರು ೩೦-೩೫ ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಪ್ರಸ್ತುತ ಸಂಘದಲ್ಲಿ ೪೦ ಮಂದಿ ಸದಸ್ಯತ್ವ ಪಡೆದುಕೊಂಡಿದ್ದು, ಮುಂದಿನ ಒಂದು ವರ್ಷದಲ್ಲಿ ೧೦೦೦ ಸದಸ್ಯತ್ವ ನೋಂದಾಣಿ ಮಾಡುವ ಗುರಿಯಿದೆ. ಸಮಾಜಬಾಂಧವರು ದೂ.ಸಂ: 9591756257 ಸಂಖ್ಯೆಯನ್ನು ಸಂಪರ್ಕಿಸಿ ಸದಸ್ಯತ್ವ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಸದಸ್ಯರ ಶಿಕ್ಷಣ ಅಭಿವೃದ್ಧಿ ಮಾಡುವುದು. ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಸಹಕರಿಸುವುದು. ಜನಾಂಗಬಾಂಧವರ ಪ್ರತಿಭೆ ವ್ಯಕ್ತಪಡಿಸಲು ಸೂಕ್ತ ವೇದಿಕೆ ಕಲ್ಪಿಸುವುದು ಸೇರಿದಂತೆ ಇನ್ನಿತರೆ ಉದ್ದೇಶದಿಂದ ಸಂಘವನ್ನು ಅಸ್ಥಿತಕ್ಕೆ ತರಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಲ್ಪಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಲಾಗುವುದು. ಮಹಿಳಾ ಸಂಘಟನೆ ರಚನೆ ಮಾಡುವುದು ಮತ್ತು ಮಧು ವರರ ಸಮಾವೇಶ ಏರ್ಪಡಿಸಲಾಗುವುದು ಎಂದ ಅವರು,…
ಪೊನ್ನಂಪೇಟೆ ತಾಲೂಕು ಬೆಳ್ಳೂರು ಗ್ರಾಮದಲ್ಲಿರುವ ಮಲ್ಲಂಗಡ ಕುಟುಂಬಸ್ಥರ ಐನ್ ಮನೆಗೆ, ಇಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭೇಟಿ ನೀಡಿದರು. ಐನ್ ಮನೆ ಹಿರಿಯರು ಹಾಗೂ ಪ್ರಮುಖದೊಂದಿಗೆ ಮಾತನಾಡಿದ ಮಾನ್ಯ ಶಾಸಕರು ಮಲ್ಲಂಗಡ ಐನ್ ಮನೆಯ ಇತಿಹಾಸದ ಬಗ್ಗೆ ತಿಳಿದುಕೊಂಡು ಐಎನ್ ಮನೆಗಳನ್ನು ಉಳಿಸಿವುದು ನಮ್ಮ ಜವಾಬ್ದಾರಿಯಾಗಿದ್ದು ಅವುಗಳ ಅಭಿವೃದ್ಧಿಗೆ ತನ್ನ ಕೈಲಾದ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್,ಮಲ್ಲಂಗಡ ಕುಟುಂಬಸ್ಥರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮೃತ ಕುಕ್ಕನೂರು ಪುರುಷೋತ್ತಮ ಅವರ ಅಂತಿಮ ದರ್ಶನ ಪಡೆದ ಪೊನ್ನಣ್ಣ ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಆನೆ ತುಳಿತಕ್ಕೆ ಒಳಗಾಗಿ ದುರಂತ ಸಾವಿಗೀಡಾದ ರೈತರಾದ ಕುಕ್ಕುನೂರು ಪುರುಷೋತ್ತಮ್ ರವರ ಮನೆಗೆ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಬಳಿಕ ಕುಟುಂಬಸ್ಥರಿಗೆ ಸಾಂತ್ವನ ನುಡಿದರು. ಆನೆ ಮಾನವ ಸಂಘರ್ಷ ಇತ್ತೀಚೆಗೆ ಅತಿಯಾಗಿದ್ದು ಶಾಶ್ವತ ಪರಿಹಾರದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಶ್ರೀ ಸಂಕೇತ್ ಪೂವಯ್ಯ ಉಪಸ್ಥಿತರಿದ್ದರು.
ಪಾಲಿಬೆಟ್ಟದಲ್ಲಿ, ಸುಮಾರು ₹ 2.97 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಡಾ|| ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಅಜ್ಜಿಕುಟ್ಟಿರ ಎಸ್ ಪೊನ್ನಣ ಶನಿವಾರ ಉದ್ಘಾಟನೆಗೊಳಿಸಿದರು. ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿರಾಜಪೇಟೆ ತಾಲೂಕಿನ ಈ ಭಾಗದಲ್ಲಿ ನಿರ್ಮಾಣಗೊಂಡ ಈ ವಿದ್ಯಾರ್ಥಿ ನಿಲಯವು, ಸುತ್ತಮುತ್ತಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂಥ ವಾತಾವರಣ ನಿರ್ಮಿಸಲಿದೆ ಎಂದು ಅಭಿಪ್ರಾಯಿಸಿದರು. ಬಳಿಕ ಇಲಾಖೆಯ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪೊನ್ನಣ್ಣ ಇಲ್ಲಿ ವಿದ್ಯಾರ್ಥಿನಿಯರಿಗೆ ಬೇಕಾದಂತಹ ಎಲ್ಲಾ ಮೂಲಭೂತ ಸೌಕರ್ಯವೂ ಸದಾ ವದವು ಗುರುವಂತೆ ನೋಡಿಕೊಳ್ಳುವುದು ಪ್ರಥಮ ಆದ್ಯತೆ ಆಗಿರಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿನಿಯರಿಗೆ ಸುರಕ್ಷೆ ಹಾಗೂ ಉತ್ತಮ ವಾತಾವರಣ ಇರುವಂತೆ ನೋಡಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಪೊನ್ನಣ್ಣ ಹೇಳಿದರು. ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ, ವಿರಾಜಪೇಟೆ ತಾಲೂಕು ಗ್ಯಾರಂಟಿ…
*ಕೊಡಗಿನಲ್ಲಿ ಮುಂದುವರಿದ ಕಾಡನೆ ದಾಳಿ* *KODAGUNEWS* *ಸಿದ್ದಾಪುರ ಕರಡಿಗೋಡು ಬಳಿ ಆನೆ ತುಳಿತಕ್ಕೆ ಓರ್ವ ಬಲಿ*… ಕೊಡಗು ಜಿಲ್ಲೆಯ ಸಿದ್ದಾಪುರ ಬಳಿಯ ಕರಡಿಗೋಡು ಗ್ರಾಮದಲ್ಲಿ ಇಂದು ಸಂಜೆ 6:30 ಗಂಟೆಗೆ ತಮ್ಮ ಮನೆಯ ಸಮೀಪ ತೋಟಕ್ಕೆ ಕೂಕನೂರು ಪುರುಷೋತ್ತಮ್ (72 ) ಎಂಬುವರು ಹೋದ ಸಂದರ್ಭ ಕಾಡಾನೆ ಅವರ ಮೇಲೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ನವರು ಭೇಟಿ ನೀಡಿದ್ದಾರೆ. ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಸಿದ್ದಾಪುರ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸಿದ್ದಪುರ ಕಾಂಗ್ರೆಸ್ ಪಕ್ಷದ ಮುಖಂಡರಾದ ರತೀಶ್, ವಿರಾಜಪೇಟೆ ವಲಯದ ಮುಖಂಡರಾದ ನರೇಂದ್ರ ಕಾಮತ್, ಮತ್ತಿತರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದರೆ.
ಜೂ.09 ರಂದು ಪಿಂಚಣಿ ಅದಾಲತ್ ಸಭೆ ಅದಾಲತ್ನ ಮುಂದಿನ ಸಭೆಯು ಜೂನ್, 09 ರಂದು ಮಧ್ಯಾಹ್ನ 12 ಗಂಟೆಗೆ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿ, ಸಿದ್ದಾಪುರ ರಸ್ತೆ ಅಶೋಕ್ ಪುರದಲ್ಲಿ ನಡೆಯಲಿದೆ. ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಪೋಸ್ಟಲ್ ಪಿಂಚಣಿ ಸಂಬಂಧಿಸಿದ ಎಲ್ಲಾ ತರಹದ ಅಹವಾಲುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ಅಹವಾಲುಗಳಿದ್ದಲ್ಲಿ ‘ಪಿಂಚಣಿ ಅದಾಲತ್’ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಜೂನ್, 06 ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ನಂತರ ಜೂನ್, 09 ರಂದು ನಡೆಯುವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
