ಸಿದ್ದಾಪುರ : ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮ ಸಭೆಯನ್ನು ದಿನಾಂಕ 10-06-2025 ರಂದು ನಡೆಸಲು ಈಗಾಗಲೇ ಪಂಚಾಯತಿ ಆಡಳಿತ ಮಂಡಳಿ ನಿರ್ಧಾರ ಕೈಗೊಂಡು ತಯಾರಿ ನಡೆಸಿದೆ. ಆದರೆ ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ದಿನಗೂಲಿಗಾಗಿ ಕೆಲಸ ಮಾಡುವ ಹಿನ್ನೆಲೆ ವಾರದ ಮಧ್ಯೆ ರಜೆ ಮಾಡಲು ಜನ ಹಿಂದೇಟು ಹಾಕುತ್ತಾರೆ. ಸಭೆಗೆ ಗೈರಾಗುತ್ತಾರೆ ಎಂಬುವುದರ ಅರಿವಿದ್ದರೂ ಗ್ರಾಮಸ್ಥರ ಅನುಪಸ್ಥಿತಿಯಲ್ಲಿ ಗ್ರಾಮ ಸಭೆ ನಡೆಸಲು ಗ್ರಾಮ ಪಂಚಾಯಿತಿ ಮುಂದಾಗಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಭಾಗಗಳಲ್ಲಿ ಭಾನುವಾರ ರಜೆ ದಿನವಾಗಿರುವ ಹಿನ್ನೆಲೆ ಭಾನುವಾರ /ಸೋಮವಾರ ಗ್ರಾಮ ಸಭೆ ನಡೆಸಿದರೆ ಹೆಚ್ಚಿನವರು ಪಾಲ್ಗೊಳ್ಳುತ್ತಾರೆ. ಜತೆಗೆ ಸಮಸ್ಯೆಗಳ ಕುರಿತು ಚರ್ಚೆಗೂ ಅವಕಾಶ ಸಿಗುತ್ತೆ. ಆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ನಾವು ಕೂಲಿ ಕೆಲಸವನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ಬೇರೆ ಯಾವುದೇ ಆರ್ಥಿಕ ಮೂಲವಿಲ್ಲ. ಈಗಿರುವಾಗ ವಾರದ ಮಧ್ಯೆ ರಜೆ ಮಾಡುವ ಚಿಂತನೆಯೇ ಇರಲ್ಲ. ಯಾಕೆಂದ್ರೆ ನಮ್ಮ ಮಕ್ಕಳ ಭವಿಷ್ಯದ ಬಗ್ಗೆಯೂ ನಾವು ಚಿಂತಿಸಬೇಕಿದೆ. ಇವೆಲ್ಲವನ್ನೂ ಗಮನಿಸಿ ಸ್ಥಳೀಯ ಆಡಳಿತ ಸಭೆಯನ್ನು ನಿರ್ಧರಿಸಬೇಕಿತ್ತು. ಇಲ್ಲಿ ಯಾರು ಇಲ್ಲದಿದ್ದರೂ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಇಲ್ಲಿ ವರೆಗೂ ಸಿದ್ದಾಪುರ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಹಾಗೆ ಪರಿಹಾರವಾಗದೆ ಉಳಿದುಕೊಂಡಿದ್ದೆ. ಗ್ರಾಮಸ್ಥರಿಗೂ ಅನುಕೂಲವಾಗುವ ದಿನ ಸಭೆ ನಡೆಸಿದರೆ ಹಲವು ಸಮಸ್ಯೆಗಳಿಗೆ ಮುಕ್ತಿ ಕಂಡುಕೊಳ್ಳಬಹುದು
ಸ್ಥಳೀಯ ಗ್ರಾಮಸ್ಥರು


