- ರಸ್ತೆ ಬದಿ ಮದ್ಯದ ಬಾಟಲಿ ಬಾಕ್ಸ್ ಎಸೆದ ಆಸ್ಪತ್ರೆ ಸಿಬ್ಬಂದಿ?
- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
- ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
- ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ
- ವರ್ಷವಾದರೂ ತಡೆಗೋಡೆ ನಿರ್ಮಿಸದ ಜಿಲ್ಲಾಡಳಿತ; ಅಪಾಯದ ತಿರುವಿನಲ್ಲಿ ವಾಹನ ಸವಾರರ ಪರದಾಟ!
- ಕೊಡಗು ಸೇರಿದಂತೆ ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ಮಹಮ್ಮದ್ ಯಾಸೀನ್ಗೆ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ
- ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
Author: Kodagu-admin
#ರಾಜ್ಯ_ಸರ್ಕಾರದ_ವಿರುದ್ದ_ಸೋಮವಾರಪೇಟೆ_ಮಂಡಲ_ಬಿಜೆಪಿ_ಪ್ರತಿಭಟನೆ. ಸೋಮವಾರಪೇಟೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಇತ್ತೀಚಿಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ಇಂದು ಸೋಮವಾರಪೇಟೆ ನಗರದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು, ಮಾಜಿ ಶಾಸಕರು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು, ಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
#ಮೋದಿ_ಸರ್ಕಾರದ_ಸಾಧನೆಯ_ಬಗ್ಗೆ_11ನೇ_ವರ್ಷದ_ನಗರ_ಕಾರ್ಯಗಾರ_ನಡೆಸಿದ_ಮಡಿಕೇರಿ_ನಗರ_ಬಿಜೆಪಿ. ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ, ಮೋದಿ ಸರ್ಕಾರದ ಸಾಧನೆಯ ಬಗ್ಗೆ 11ನೇ ವರ್ಷದ ನಗರ ಕಾರ್ಯಗಾರ ಮಡಿಕೇರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಡಿಕೇರಿ ನಗರ ಮಂಡಲ ಅಧ್ಯಕ್ಷರಾದ ಉಮೇಶ್ ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ರವಿ ಕಾಳಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ,ಜಿಲ್ಲಾ ಕಾರ್ಯದರ್ಶಿಗಳಾದ ಪ್ರಶಾಂತ್ ಭೀಮಯ್ಯ ಹಾಗೂ ಕನ್ನಿಕೆ, ಜಿಲ್ಲಾ ವಕ್ತರರಾದ ಅರುಣ್ ಕುಮಾರ್,ಜಿಲ್ಲಾ ಉಪಾಧ್ಯಕ್ಷರು ಹಾಗೂ ಸಹ ಸಂಚಾಲಕರುಗಳಾದ ಕಾಂಗೀರ ಸತೀಶ್ ಅಶ್ವಿನ್,ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಗಳಾದ ಜಗದೀಶ್ ,ನಗರ ಸಭಾ ಅಧ್ಯಕ್ಷರುಗಳಾದ ಕಲಾವತಿ,ನಗರ ಮಂಡಲ ಯುವ ಮೋರ್ಚಾದ ಅಧ್ಯಕ್ಷರುಗಳಾದ ಪಾಂಡಿರ ಪೂಣಾಚ್ಚ, ಹಾಗೂ ನಗರ ಮಂಡಲದ ಸಂಚಾಲಕರು ಗಳಾದ ಪ್ರಶಾಂತ್ ಹಾಗೂ ಜೀವನ್, ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರುಗಳು ಹಾಗೂ ಪಕ್ಷದ ಪ್ರಮುಖರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಕೊಡ್ಲಿಪೇಟೆಯಲ್ಲಿ ಪಂಚಾಯಿತಿಯ ಬೇಜವಾಬ್ದಾರಿತನದಿಂದ ಸ್ಥಳೀಯರು ಕಸವನ್ನು ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದರಿಂದ ಶಾಲಾ ಮಕ್ಕಳಿಗೆ, ನಾಡಾ ಕಛೇರಿಗೆ ತೆರಳುವವರಿಗೆ ಅದೇ ರೀತಿ ಆರಕ್ಷಕ ಠಾಣೆಗೆ ಹೋಗುವವರಿಗೆ ದುರ್ವಾಸನೆಯಿಂದ ಬಾರೀ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಕೊಡ್ಲಿಪೇಟೆ ಪೊಲೀಸ್ ಉಪ ಠಾಣೆಯ ಸಿಬ್ಬಂದಿ #ಉದಯ್_ಉಪ್ಪಾರ್ ಅವರು ಶಾಲಾ ಕಾಂಪೌಂಡ್ ಮೇಲೆ #ಇಲ್ಲಿ_ಕಸ_ಕಡ್ಡಿ_ಹಾಕಬಾರದು ಎಂದು ಬರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫೈಸಲ್ ಪದಾಯತ್
ಬಿರುನಾಣಿ ಪಟ್ಟಣದಲ್ಲಿ ಗ್ರಾಮ ಪಂಚಾಯತ್ ನಿರ್ವಹಣೆ ಮಾಡುವ ಶೌಚಾಲಯ ಅತ್ಯಂತ ದುರ್ವಾಸನೆಯಿಂದ ನಿರ್ವಹಣೆ ಇಲ್ಲದೆ ಹಾಗೂ ಸಾರ್ವಜನಿಕರಿಗೆ ಬಳಸಲು ಯೋಗ್ಯವಲ್ಲದ ರೀತಿಯಲ್ಲಿ ಸ್ವಾಗತಿಸುತ್ತಿದೆ. ಬಿರುನಾಣಿ ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪವೇ ಇರುವ ಈ ಶೌಚಾಲಯ ಸಮೀಪ ಮಹಿಳಾ ಸಮಾಜ, ಒಂದು ಕಡೆ ಅಂಗನವಾಡಿ, ಇನ್ನೊಂದು ಕಡೆ ಶಾಲೆ ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಶೌಚಾಲಯದ ಸಮೀಪ ಸಾರ್ವಜನಿಕರ ಒಡನಾಟ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಗೆ ಪಟ್ಟಣದಲ್ಲಿ ಒಂದೇ ಒಂದು ಶೌಚಾಲಯವಿದ್ದು ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಗಬ್ಬೆದ್ದು ಹೋಗಿದೆ. ಸರಿಯಾಗಿ ನೀರಿಲ್ಲ ಸ್ವಚ್ಛಗೊಳಿಸುತ್ತಿಲ್ಲ ಆದ್ದರಿಂದ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಆತಂಕ ಎದುರಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಪಿಡಿಓ ಇದನ್ನು ಕಂಡರೂ ಕಾಣದಂತೆ ಬಿಟ್ಟಿರುವುದು ದುರದೃಷ್ಟಕರ. ಇನ್ನಾದರೂ ಈ ಬಗ್ಗೆ ವಿಶೇಷ ಗಮನಹರಿಸಿ ಶೌಚಾಲಯವನ್ನು ದುರಸ್ತಿಪಡಿಸಿ ಅತ್ಯಂತ ಸ್ವಚ್ಛವಾಗಿ ಇಟ್ಟುಕೊಳ್ಳಲು ಮುಂದಾಗಲಿ ಈ ಮೂಲಕ ಸಾರ್ವಜನಿಕರಿಗೂ ಬಳಸಲು ಉತ್ತಮವಾಗಿ ನಿರ್ವಹಿಸುವಂತಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ ಪೈಸಲ್ ಪದಾಯತ್
ಪೊನ್ನಂಪೇಟೆ ತಾಲ್ಲೂಕು ಪೊನ್ನಂಪೇಟೆ ಹೋಬಳಿ ಹುದೂರು ಗ್ರಾಮದ ನಿವಾಸಿಯಾದ ಹೆಚ್ ಕೆ ರವಿ ರವರ ವಾಸದ ಮನೆಯು ಇಂದು ವಿಪರೀತ ಗಾಳಿ ಮಳೆಯಿಂದ ಮನೆಯ ಗೊಡೆಯು ಕುಸಿದು ತೀವ್ರ ಹಾನಿಯಾಗಿದೆ.
ಮಡಿಕೇರಿ : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2851.73 ಅಡಿಗಳು. ಇಂದಿನ ನೀರಿನ ಒಳಹರಿವು 3208 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು 1800 ಕ್ಯೂಸೆಕ್ ನದಿಗೆ 3750 ಕ್ಯುಸೆಕ್.
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿರುವ ಹಿನ್ನೆಲೆ ನಾಳೆ (ಜೂನ್ 16) ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ರಜೆ ನೀಡಲಾಗಿದೆ (ದ್ವಿತೀಯ ಪಿಯು ಪರೀಕ್ಷೆ 3 ನಿಗದಿಯಂತೆ ನಡೆಯಲಿದೆ) ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.
*ಜಾತಿಯೇ ಇರಲಿ, ಧರ್ಮವೇ ಇರಲಿ ಅದೆಲ್ಲಾ ಮನೆಯೊಳಗೆ ಆಚರಣೆಯಾಗಲಿ. ಹೊರಗೆ ಬಂದ ಕೂಡಲೇ ನಾವೆಲ್ಲರೂ ಭಾರತೀಯರಾಗಬೇಕು: ಸಿ.ಎಂ ಸಿದ್ದರಾಮಯ್ಯ ಕರೆ *ಮಂಥರ ಗೌಡ ಮತ್ತು ಪೊನ್ನಣ್ಣ ಇಬ್ಬರಿಗೂ ಉತ್ತಮ ರಾಜಕೀಯ ಭವಿಷ್ಯ ಇದೆ: ಸಿ.ಎಂ ಭರವಸೆ* ಪೊನ್ನಣ್ಣ ಅವರಿಗೆ ಉತ್ತಮ ಭವಿಷ್ಯವಿದೆ. ಇವರನ್ನು ಬೆಂಬಲಿಸಿ ಪೊನ್ನಣ್ಣ ರಾಜ್ಯದ ಆಸ್ತಿ ಆಗ್ತಾರೆ. ಕೊಡವ ಸಮಾಜದ ಆಸ್ತಿ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೊಡವರು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, ದೇಶ ರಕ್ಷಣೆಗೆ, ಕ್ರೀಡೆಗೆ, ರಾಜಕಾರಣಕ್ಕೆ ಕೊಡವರ ಕೊಡುಗೆ ಅಪಾರ ಎಂದು ಮೆಚ್ಚುಗೆ ಸೂಚಿಸಿದರು. ಎ.ಕೆ.ಸುಬ್ಬಯ್ಯ ಮ ಮತ್ತು ಎಂ.ಸಿ.ನಾಣಯ್ಯ ಉತ್ತಮ ಸಂಸದೀಯ ಪಟುಗಳು. ಇವರು ಸದನದಲ್ಲಿ ಸಮಾಜಮುಖಿಯಾಗಿ ಮಾತನಾಡಿದ ಫೈರ್ ಬ್ರಾಂಡ್ ಗಳು. ಪೊನ್ನಣ್ಣ ಅವರಿಗೂ ಫೈರ್ ಬ್ರಾಂಡ್ ಆಗುವ…
ವಿರಾಜಪೇಟೆಯ ಎಫ್ಎಂಸಿ ರಸ್ತೆಯಲ್ಲಿರುವ ಟೀಚರ್ಸ್ ಸ್ಟೋರ್ ಕಟ್ಟಡ ಸಭಾಂಗಣದಲ್ಲಿ, ಸಹಾರ ಫ್ರೆಂಡ್ಸ್ ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡ ಬೃಹತ್ ರಕ್ತದಾನ ಶಿಬಿರ ಹಾಗೂ ವಿಶ್ವ ರಕ್ತದಾನಿಗಳ ದಿನಾಚರಣೆ 2025 ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪೊನ್ನಣ್ಣಇಂದಿನ ಯುಗದಲ್ಲಿ ರಕ್ತದಾನ ಎಂಬುದು ಎಲ್ಲಾ ದಾನಗಳಲ್ಲಿಯೂ ಶ್ರೇಷ್ಠ ಎನಿಸಿಕೊಂಡಿದೆ. ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ಅಮೂಲ್ಯ ಬೆಲೆ ಕೊಡುವುದರೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು. ಇಂತಹ ಉತ್ತಮ ಕಾರ್ಯಕ್ರಮಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುವಂತಿದ್ದು ಇದರಿಂದ ಸಮಾಜ ಉತ್ತಮ ದಿಕ್ಕಿನಲ್ಲಿ ಚಲಿಸುವುದಕ್ಕೆ ಸಹಾಯವಾಗಲಿದೆ ಎಂದು ಬಣ್ಣಿಸಿದರು. ರಕ್ತದಾನ ಶಿಬಿರದ ಆಯೋಜಕರನ್ನು ಅಭಿನಂದಿಸಿದ ಮಾನ್ಯ ಶಾಸಕರು ಇವರುಗಳ ಪ್ರಯತ್ನ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಹಾಗೂ ಪಕ್ಷದ ಪ್ರಮುಖರು…
*ಹುದಕೇರಿಯಲ್ಲಿ 66/11 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಭೂಮಿ ಪೂಜೆ ಹುದಿಕೇರಿಯಲ್ಲಿ 66/11 ಕೆವಿ ವಿದ್ಯುತ್ಅ ಉಪಕೇಂದ್ರಕ್ಕೆ ಶಾಸಕ a e ಎಸ್ ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು, ಈ ಭಾಗದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಒದಗಿಸುವ ಸಲುವಾಗಿ, ಇಂದು ಹುದಕೇರಿಯಲ್ಲಿ ನೂತನ ವಿದ್ಯುತ್ ಪ್ರಸರಣ ಉಪ-ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಇಂದು ಭೂಮಿ ಪೂಜೆ ನೆರವೇರಿಸಲಾಯಿತು . ಈ ಉಪ ಕೇಂದ್ರದಿಂದ *11 ಕೆವಿಯ 12 ಮಾರ್ಗ ಪೊನ್ನಂಪೇಟೆಯಿಂದ ಹುದಿಕೇರಿವರೆಗ ಹೊರಹೋಗಲಿದೆ. ಸುಮಾರು ₹ 19.34 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯ ಒಂದು ವರ್ಷದ ಕಾಲಾವಧಿಯಲ್ಲಿ ಪೂರ್ಣಗೊಳ್ಳಲಿದೆ* ಎಂದು ಚೀಫ್ ಎಲೆಕ್ಟ್ರಿಕ್ ಆಫೀಸರ್ ರೋಷನ್ ಅಪ್ಪಚ್ಚು ತಿಳಿಸಿದರು. ಮಾನ್ಯ ಶಾಸಕರ ಪ್ರಯತ್ನದಿಂದಾಗಿ ಕ್ಷೇತ್ರಾದ್ಯಂತ ಹಲವು ವಿದ್ಯುತ್ ಉಪ-ಕೇಂದ್ರಗಳು ಸ್ಥಾಪನೆಗೊಳ್ಳುತ್ತಿದ್ದು, ಹುದಕೇರಿಯಲ್ಲಿ ಇಂದು ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ಅತಿ ಶೀಘ್ರದಲ್ಲೇ ಇದನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಚೆಸ್ಕಾಂ ಅಧಿಕಾರಿಗಳು, ಪೊನ್ನಂಪೇಟೆ…
