Ai ನಿಯಂತ್ರಿತ ಕ್ಯಾಮೆರಾಗಳಿಂದ ಹೋಂಸ್ಟೇ ಗಳಲ್ಲಿ ನಡೆಯುವ ಅಪರಾದ ಕೃತ್ಯಗಳನ್ನು ತಡೆಯಲು ಸಾಧ್ಯ: ನಾಪಂಡ ಮುತ್ತಪ್ಪ
ಹೋಂಸ್ಟೆಗಳ ಬಗ್ಗೆ ಕಠಿಣ ನೀತಿ ರೂಪಿಸುವಂತೆ ಹಾಗೂ Ai ತಂತ್ರಜ್ಞಾನ ಬಳಸುವ ಮೂಲಕ ಕೊಡಗಿನ ಕೆಲವು ಅಧಿಕೃತ ಹಾಗೂ ಅನದಿಕೃತ ಹೋಂಸ್ಟೇ ಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಲ್ಲಿಸಲು ಸಾಧ್ಯವಿದೆ ಎಂದು ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸೋಧ್ಯಮದಲ್ಲಿ ಜನ ಸಾಮಾನ್ಯರ ಪಾಲ್ಗೋಳುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೋಂಸ್ಟೆ ಸ್ಥಳೀಯರ ಆರ್ಥಿಕ ಅಭಿವೃದಿಗೆ ಹೊಸ ದಾರಿಯನ್ನು ತೋರಿಸಿದೆ.
ಆದರೆ ಇಲ್ಲಿ ಸರಕಾರ ಮತ್ತು ಸ್ಥಳೀಯ ಆಡಳಿತ ಹೋಮ್ ಸ್ಟೆಗಳ ನಿರ್ವಹಣೆ ಮತ್ತು ನಿಗ ವಹಿಸುವಲ್ಲಿ ಅತ್ಯಾಧುನಿಕ ತಂತ್ರಜ್ನಾನವನ್ನು ಬಳಸಿಕೊಂಡು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತ ಪಡಿಸಿಕೊಳ್ಳಬೇಕು.
1. AI ನಿಯಂತ್ರಿತ ಕ್ಯಾಮರಗಳನ್ನು ಪ್ರತಿ ಹೋಮ್ ಸ್ಟೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಅಳವಡಿಸಿ ಅದರ ಲಿಂಕನ್ನು ಪೋಲೀಸ್ ಠಾಣೆಗಳಿಗೆ ನೀಡಿ ಅಲ್ಲಿ ಕೂಡ ದತ್ತಾಂಶ ಸಂಗ್ರಹವಾಗುವಂತೆ ಮಾಡಬೇಕು.
2. ನಿರಂತರವಾದ ಕಣ್ಗಾವಲಿಗೆ ಪೊಲೀಸ್, ರೆವೆನ್ಯು ಮತ್ತು ಪ್ರವಾಸೋಧ್ಯಮ ಇಲಾಖೆ ಹಾಗು ನಾಗರೀಕ ಸಂಸ್ಥೆಗಳ ಪ್ರತಿನಿಧಿಗಳನೊಳಗೊಂಡ ಸಮಿತಿ ರಚಿಸಿ ಅವು ನಿರಂತರವಾಗಿ ಕಾರ್ಯಾಚರಿಸಬೇಕು
3 ಎಲ್ಲ ಹೋಮ್ ಸ್ಟೆಗಳಲ್ಲಿ ಸೂಕ್ತ ದಾಖಲಾತಿಗಳ ಲಭ್ಯತೆಯನ್ನು ನಿರಂತರವಾಗಿ ಗಮನಿಸುತ್ತಿರಬೇಕು.
1. ಹೋಮ್ ಸ್ಟೆಗಳಿಗೆ ಪ್ರತಿ ವರ್ಷ ಸಂಬಂದಿಸಿದ ಇಲಾಖೆಗೆ ವಾರ್ಷಿಕ ವರದಿ ನೀಡುವಂತೆ ನಿಯಮ ರೂಪಿಸಬೇಕು!
5 ಕಾಲಕಾಲಕ್ಕೆ ಸಂಬಂದಿಸಿದ
ಇಲಾಖೆಗಳು ಹೋಮ್ ಸ್ಟೇ ಮಾಲೀಕರಿಗೆ ಮತ್ತು ಸಂಬಂದಿಸಿದವರಿಗೆ ಸೂಕ್ತ ಕಾನೂನು ತಿಳುವಳಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.*
*ಇಂತಹ ಮುಂಜಾಗ್ರತ ಕಾರ್ಯಕ್ರಮಗಳು ಮತ್ತು ಕಠಿಣ ನಿಯಮಗಳನ್ನು ರೂಪಿಸುವುದರಿಂದ ಪ್ರವಾಸಿಗಳ ಸುರಕ್ಷತೆಯನ್ನು ಖಾತ್ರಿ ಪಡಿಸಲು ಸಾಧ್ಯವಾಗುತ್ತದೆ.*
ನಾಪಂಡ ಎಂ ಮುತ್ತಪ್ಪ


