ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಕೆಟ್ಟುನಿಂತ ಪರಿಣಾಮ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದು ಅಲ್ಲದೆ ಅಪಾಯದ ಸೂಚನೆಯನ್ನು ನೀಡುವಂತಿದೆ.
ಮಂಗಳೂರು ರಸ್ತೆಯ ತಾಳತಮನೆ ಬಳಿಯ ತಿರುವೊಂದರಲ್ಲಿ ಮಂಗಳೂರು ಕಡೆಯಿಂದ ಬಂದ ಲಾರಿ ಕೆಟ್ಟು ನಿಂತ ಪರಿಣಾಮ ಏಕಮುಖ ಸಂಚಾರದ ಅನಿವಾರ್ಯತೆ ಎದುರಾಗಿದೆ. ಮಡಿಕೇರಿ ಹಾಗೂ ಮಂಗಳೂರು ಭಾಗದಿಂದ ಏಕಕಾಲಕ್ಕೆ ಲಾರಿಗಳು ಬಂದರೆ ಅಪಾಯ ತಪ್ಪಿದ್ದಲ್ಲ. ವಾಹನ ದಟ್ಟಣೆ ಹೆಚ್ಚುವ ಮುನ್ನವೇ v
ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಂಚಾರಿ ಪೊಲೀಸರಿಗೆ ವಾಹನ ಸವಾರರು ಮನವಿ ಮಾಡಿದ್ದಾರೆ.

