Close Menu
Kodagu News
    ಹೊಸ ಸುದ್ದಿ

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ
    • ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ
    • ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ
    • ಕುಶಾಲನಗರದಲ್ಲಿ 84ನೇ ಇಎಂಇ ಕಾರ್ಪ್ಸ್ ಡೇ ಸಂಭ್ರಮ
    • ಭಾಗಮಂಡಲ, ತಲಕಾವೇರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾನಂಡ ಪ್ರಥ್ಯು ಆಯ್ಕೆ
    • ₹48 ಲಕ್ಷದ ರಸ್ತೆ ನಿರ್ಮಾಣ, ಮಳೆ ನೀರಿಗೆ ಮಾತ್ರ ದಾರಿಯಿಲ್ಲ!
    • ತುಲಾ ಸಂಕ್ರಮಣ, ವಿಜಯದಶಮಿಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಸಾರ್ವಜನಿಕರ ಮನವಿ
    • ತುಲಾ ಸಂಕ್ರಮಣ, ವಿಜಯದಶಮಿಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಸಾರ್ವಜನಿಕರ ಮನವಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ದುಬಾರೆ ಆನೆ ಶಿಬಿರದಲ್ಲಿ 19 ವರ್ಷದ ಗಂಡಾನೆ ಸಾವು
    ಅಂತರರಾಷ್ಟ್ರೀಯ

    ದುಬಾರೆ ಆನೆ ಶಿಬಿರದಲ್ಲಿ 19 ವರ್ಷದ ಗಂಡಾನೆ ಸಾವು

    ದುಬಾರೆ ಆನೆ ಶಿಬಿರದಲ್ಲಿ 19 ವರ್ಷದ ಗಂಡಾನೆ ಸಾವು

    ಐದು ತಿಂಗಳಿಗೂ ಹೆಚ್ಚು ಕಾಲ ಚಿಕಿತ್ಸೆ ನೀಡಿದರೂ ಬದುಕುಳಿಯದ ಆನೆ

    ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿ ಕಳೆದ ಏಪ್ರಿಲ್‌ನಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ.

    ಕಾದಾಟದ ವೇಳೆ ಗಾಯಗೊಂಡು, ಮುರಿದ ದಂತದೊಂದಿಗೆ ಆನೆ ದುಬಾರೆ ಶಿಬಿರಕ್ಕೆ ಬಂದಿತ್ತು. ಅರಣ್ಯ ಇಲಾಖೆಯ ಪಶುವೈದ್ಯರು ಆನೆಯನ್ನು ಪ್ರತ್ಯೇಕವಾಗಿರಿಸಿ, ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ವಿಶೇಷ ಕಾಳಜಿ ವಹಿಸಿದ್ದರು. ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರವಾಗಿ ಆ್ಯಂಟಿಬಯೋಟಿಕ್ಸ್, ನೋವು ನಿವಾರಕಗಳು, ಗಾಯಗಳಿಗೆ ಔಷಧೋಪಚಾರ ಹಾಗೂ ಅಗತ್ಯ ಪೋಷಕಾಂಶಗಳನ್ನು ನೀಡಲಾಗುತ್ತಿತ್ತು.

    ಹೆಚ್ಚಿನ ತಜ್ಞ ಚಿಕಿತ್ಸೆಗಾಗಿ ‘ವೈಲ್ಡ್‌ಲೈಫ್ ಎಸ್‌ಒಎಸ್’ ಸಂಸ್ಥೆಯ ನುರಿತ ವನ್ಯಜೀವಿ ಪಶುವೈದ್ಯರ ತಂಡವನ್ನು ಕರೆಸಿ ಜಂಟಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಡಿಜಿಟಲ್ ಎಕ್ಸ್‌ರೇ ಪರೀಕ್ಷೆಯಲ್ಲಿ ಆನೆಯ ಎಡ ಮೊಣಕೈ ಮೂಳೆಯಲ್ಲಿ ಬಿರುಕು ಇರುವುದು ದೃಢಪಟ್ಟಿತ್ತು.

    ತಜ್ಞ ವೈದ್ಯರ ಸಲಹೆಯಂತೆ ಸುಧಾರಿತ ಚಿಕಿತ್ಸೆಯನ್ನು ಮುಂದುವರಿಸಲಾಗಿದ್ದು, ಕಾಲಿನ ಮೇಲಿನ ಒತ್ತಡ ಕಡಿಮೆ ಮಾಡಲು ಆನೆಯನ್ನು ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಗಾಯಗೊಂಡ ಕಾಲನ್ನು ಸ್ಥಿರವಾಗಿಡಲು ಸೆಪ್ಟೆಂಬರ್ 27ರಂದು ತಜ್ಞರ ಮೂಲಕ ಫೈಬರ್ ಕ್ಯಾಸ್ಟಿಂಗ್ ಮಾಡಲಾಗಿತ್ತು.

    ಆದರೆ ಸೆಪ್ಟೆಂಬರ್ 29ರಂದು ಆನೆ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣವೇ ಐವಿ ದ್ರವ ಚಿಕಿತ್ಸೆ ಹಾಗೂ ತೀವ್ರ ನಿಗಾ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

    ಆನೆಯ ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಾಥಮಿಕ ಪಶುವೈದ್ಯಕೀಯ ವರದಿಗಳ ಪ್ರಕಾರ ದೀರ್ಘಕಾಲದ ಮೂಳೆ ಮುರಿತದ ತೊಂದರೆ, ನಿರಂತರ ಅನಾರೋಗ್ಯ ಹಾಗೂ ದೈಹಿಕ ದೌರ್ಬಲ್ಯದಿಂದಾಗಿ ಆನೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

    Previous Articleಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಸನ್ನ ಎಡಿಕೇರಿ ಸಾಂತ್ವನ
    Next Article ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ: ವಾಹನ ಸವಾರರಿಗೆ ಕಿರಿಕಿರಿ

    Related Posts

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Demo
    Demo
    ಪ್ರಮುಖ ಸುದ್ದಿ

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Big News

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.