Close Menu
Kodagu News
    ಹೊಸ ಸುದ್ದಿ

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ

    September 20, 2026

    ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ

    September 20, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
    • ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.
    • ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ
    • ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ
    • “ವನ್ಯಜೀವಿಗಳಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?” — ರಂಜಿ ಪೂಣಚ್ಚ ಆಕ್ರೋಶ
    • ಕಾವೇರಿ ಉಳಿವಿಗೆ ಮಳೆನೀರು ಕೊಯ್ಲು, ಮರಗಳ ಸಂರಕ್ಷಣೆ ಅಗತ್ಯ: ಬಿದ್ದಂಡ ಮಾದಯ್ಯ.
    • ಸಂಪಿಗೆಕಟ್ಟೆ ಮಹದೇವಪೇಟೆ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಭಾಗ್ಯ
    • ಕೊಡಗಿನಲ್ಲಿ ರೇವ್ ಪಾರ್ಟಿಗೆ ಖಾಕಿ ಬ್ರೇಕ್! ‘ಕೂರ್ಗ್ ರೇವ್’ ಪ್ರಚಾರ ಬೆನ್ನಲ್ಲೇ ಪೊಲೀಸರ ಎಚ್ಚರಿಕೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಡುಗೆ ಮನೆ»ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
    ಅಡುಗೆ ಮನೆ

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    ಸೆ.25ರ ಮಧ್ಯಾಹ್ನ 2ರಿಂದ ಸೆ.26ರ ಬೆಳಗ್ಗೆ 10ರವರೆಗೆ ಸಂಚಾರ ನಿರ್ಬಂಧ

    ವಿರಾಜಪೇಟೆ ನಗರದಲ್ಲಿ ಗೌರಿ-ಗಣೇಶ ಉತ್ಸವದ ಅಂಗವಾಗಿ ಸೆ.25ರಂದು ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ಸೆ.26ರಂದು ಬೆಳಗ್ಗೆ ಗೌರಿಕೆರೆಯಲ್ಲಿ ಸಾಮೂಹಿಕ ವಿಸರ್ಜನೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ.

    ಉತ್ಸವದಲ್ಲಿ ಸುಮಾರು 20ರಿಂದ 25 ಸಾವಿರ ಮಂದಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಮಂಟಪಗಳ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಆದೇಶದಂತೆ ಸೆ.25ರ ಮಧ್ಯಾಹ್ನ 2ರಿಂದ ಸೆ.26ರ ಬೆಳಗ್ಗೆ 10ರವರೆಗೆ ಹಲವು ರಸ್ತೆಗಳಲ್ಲಿನ ವಾಹನ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.

    ವಿರಾಜಪೇಟೆ ನಗರದ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಬ್ಬನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ.

    ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜು, ಮಗ್ಗುಲ ಜಂಕ್ಷನ್‌ನಿಂದ ದಬ್ಬನಿ ಮೊಹಲ್ಲಾ ಜಂಕ್ಷನ್ ಹಾಗೂ ಖಾಸಗಿ ಬಸ್ ನಿಲ್ದಾಣದಿಂದ ಮಟನ್ ಮಾರ್ಕೆಟ್‌ವರೆಗೂ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.

    ಹೊರಗಿನ ವಾಹನಗಳಿಗೆ ಪರ್ಯಾಯ ಮಾರ್ಗ

    ಕೇರಳದ ಮಾಕುಟ್ಟ ಮಾರ್ಗದಿಂದ ಗೋಣಿಕೊಪ್ಪ ಅಥವಾ ಸಿದ್ದಾಪುರದ ಕಡೆ ತೆರಳುವ ವಾಹನಗಳು ಪೆರುಂಬಾಡಿ–ಬಾಳುಗೋಡು–ಬಿಟ್ಟಂಗಾಲ–ಕೈಕೇರಿ–ಪಾಲಿಬೆಟ್ಟ ಮಾರ್ಗವಾಗಿ ಸಂಚರಿಸಬೇಕು.

    ಸಿದ್ದಾಪುರದಿಂದ ಕೇರಳದ ಕಡೆ ತೆರಳುವ ವಾಹನಗಳು ಸಿದ್ದಾಪುರ–ಬಿಟ್ಟಂಗಾಲ–ಬಾಳುಗೋಡು–ಪೆರುಂಬಾಡಿ ಮಾರ್ಗ ಬಳಸಬೇಕು.

    ಮಡಿಕೇರಿಯಿಂದ ಕೇರಳದ ಕಡೆ ತೆರಳುವ ವಾಹನಗಳು ಮೂರ್ನಾಡು–ಕೊಂಡಂಗೇರಿ–ಅಮ್ಮತ್ತಿ–ಪಾಲಿಬೆಟ್ಟ–ಕೈಕೇರಿ–ಬಿಟ್ಟಂಗಾಲ–ಬಾಳುಗೋಡು–ಪೆರುಂಬಾಡಿ–ಮಾಕುಟ್ಟ ಮಾರ್ಗದಲ್ಲಿ ಸಂಚರಿಸಬೇಕು.

    ಮಡಿಕೇರಿಯಿಂದ ಗೋಣಿಕೊಪ್ಪ ಮೂಲಕ ಮೈಸೂರು–ಬೆಂಗಳೂರು ಕಡೆ ತೆರಳುವ ವಾಹನಗಳು ಮೂರ್ನಾಡು–ಕೊಂಡಂಗೇರಿ–ಅಮ್ಮತ್ತಿ–ಪಾಲಿಬೆಟ್ಟ–ಕೈಕೇರಿ–ಗೋಣಿಕೊಪ್ಪ ಮಾರ್ಗ ಬಳಸಬೇಕು.

    ಮೈಸೂರು–ಬೆಂಗಳೂರು ಕಡೆಯಿಂದ ಮಡಿಕೇರಿಗೆ ತೆರಳುವ ವಾಹನಗಳು ಗೋಣಿಕೊಪ್ಪ–ಪಾಲಿಬೆಟ್ಟ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

    ಮೆರವಣಿಗೆ ವೀಕ್ಷಿಸಲು ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ

    ವಿವಿಧ ದಿಕ್ಕುಗಳಿಂದ ಮೆರವಣಿಗೆ ವೀಕ್ಷಿಸಲು ಆಗಮಿಸುವ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಪೆರುಂಬಾಡಿ ಕಡೆಯಿಂದ ಬರುವ ವಾಹನಗಳನ್ನು ಕೀರ್ತಿ ರೆಸ್ಟೋರೆಂಟ್ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಬೇಕು.

    ಸಿದ್ದಾಪುರ ಕಡೆಯಿಂದ ಬರುವ ವಾಹನಗಳಿಗೆ ಮಗ್ಗುಲ ಜಂಕ್ಷನ್ ಹಾಗೂ ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

    ಗೋಣಿಕೊಪ್ಪ ಕಡೆಯಿಂದ ಬರುವ ವಾಹನಗಳನ್ನು ಕಾವೇರಿ ಕಾಲೇಜು ಬಳಿಯಿಂದ ಬಿಟ್ಟಂಗಾಲ ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ, ಬೇಟೋಳಿ–ಗುಂಡಿಗೆರೆ–ಚಿಟ್ಟಡೆ ಕಡೆಯಿಂದ ಬರುವ ವಾಹನಗಳನ್ನು ಮಹಿಳಾ ಸಮಾಜ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಲು ಸೂಚಿಸಲಾಗಿದೆ.

    ಒಂಟಿಯಂಗಡಿ–ಚೆಂಬೆಬೆಳ್ಳೂರು ಕಡೆಯಿಂದ ಬರುವ ವಾಹನಗಳಿಗೆ ಕೊಡವ ಸಮಾಜ ಜಂಕ್ಷನ್‌ನಿಂದ ಚೆಂಬೆಬೆಳ್ಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಹಾಗೂ ಮಡಿಕೇರಿ ಕಡೆಯಿಂದ ಬರುವ ವಾಹನಗಳಿಗೆ ಚಿಕ್ಕಪೇಟೆಯಿಂದ ಮೂರ್ನಾಡು ಕಡೆಗೆ ಹೋಗುವ ರಸ್ತೆಯ ಎಡಭಾಗದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

    ಸಾರ್ವಜನಿಕರು ಪೊಲೀಸ್ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸುವಂತೆ ಹಾಗೂ ಉತ್ಸವದ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆಗೆ ಸಹಕರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಅಗತ್ಯಕ್ಕೆ ಅನುಗುಣವಾಗಿ ಸಂಚಾರ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿದೆ.

    ಸುದ್ದಿ ಕದ್ದು ಪತ್ರಕರ್ತರಾಗಬೇಡಿ 

     

    Previous Articleಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.

    Related Posts

    ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.

    September 21, 2026

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ

    September 20, 2026

    ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ

    September 20, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ

    September 20, 2026

    ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ

    September 20, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.