ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಯ ಕಣ್ಣಾ ಮುಚ್ಚಾಲೆ

ಕುಶಾಲನಗರ ಜೂ.6: ವಾರದ ಬಹುತೇಕ ದಿನಗಳಲ್ಲಿ ದಟ್ಟ ಕರಿಮೋಡ. ಆದರೆ ನಿರೀಕ್ಷಿತ ಮಳೆ ಶೂನ್ಯ . ಕುಶಾಲನಗರ ವ್ಯಾಪ್ತಿಯ ರೈತರಿಗೆ ಭ್ರಮನಿರಸನ.
ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮಾರ್ಚ್ 1ರಿಂದ ಮೇ 31ರವರೆಗೆ ಶೇಕಡ 20% ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ. ‘ಎಲ್ ನಿನೊ’ ವಿದ್ಯಮಾನದಿಂದ ಉಷ್ಣಾಂಶ ಹೆಚ್ಚಿದ್ದು ವಾತಾವರಣದಲ್ಲಿ ತ್ವರಿತ ಏರಿಳಿತವಿದ್ದು ರೈತರು ಸೂಕ್ತ ಮುಂಜಾಗ್ರತೆ ವಹಿಸಬೇಕೆಂದು ಇಲಾಖೆ ತಿಳಿಸಿದೆ.
ಈ ವಾತಾವರಣದ ವ್ಯತ್ಯಾಸ ಕಾಫಿ ಮತ್ತು ಸಾಂಬಾರು ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದೆಂದು ಅಂದಾಜಿಸಿದ್ದಾರೆ.
ವರದಿ: ಶ್ರೀಧರ್ ನಾರಾಯಣ್, ಕುಶಾಲನಗರ

