ಪೊನ್ನಂಪೇಟೆ ಮೂಲದ ಯುವತಿಯನ್ನು ಬೆಂಗಳೂರಿನಲ್ಲಿ ಕೇಬಲ್ ವೈಯರ್ ನಿಂದ ಕುತ್ತಿಗೆ ಬಿಗಿದು ಕೊಲೆಗೈದ ಪ್ರಿಯಕರ….!!!!

ಬೆಂಗಳೂರು ರಾಜಧಾನಿಯ ವರ್ತೂರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದೆ.
ಲಿವಿಂಗ್ ಟು ಗೆದರ್ ಸಂಬಂಧದಲ್ಲಿ ಯುವತಿಯನ್ನು ಆಕೆಯ ಪ್ರಿಯಕರನೆ ಕೇಬಲ್ ವೈಯರ್ ನಿಂದ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿದ್ದಾನೆ.
ಎರಡು ದಿನಗಳ ಹಿಂದೆಯೇ ನಡೆದಿದ್ದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಕೊಡಗು ಮೂಲದ ರಂಜಿತ (23) ಕೊಲೆಯಾದ ದುರ್ದೈವಿ ಅದೇ ಊರಿನ ಅಯ್ಯಪ್ಪ ಎಂಬಾತನೇ ಈ ಕೊಲೆ ಮಾಡಿದ ಆರೋಪಿ ಕೊಡಗಿನ ಪೊನ್ನಂಪೇಟೆ ಮೂಲದ ಇವರಿಬ್ಬರು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ವರ್ತೂರ್ ವ್ಯಾಪ್ತಿಯಲ್ಲಿ ಒಟ್ಟಿಗೆ ವಾಸವಿದ್ದರು. ಆರೋಪಿ ಅಯ್ಯಪ್ಪ ನಗರದ ಡ್ರೈಫ್ರೂಟ್ಸ್ ಅಂಗಡಿ ಒಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದನು.
ಆರೋಪಿ ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿದ್ದು ಪತ್ನಿಯ ಜೊತೆಗೆ ಜಗಳದಿಂದಾಗಿ ಕೆಲವು ವರ್ಷಗಳ ಹಿಂದೆ ಆಕೆಯಿಂದ ದೂರವಾಗಿದ್ದನು ನಂತರ ತನ್ನದೇ ಊರಿನ ರಂಜಿತಾಳನ್ನು ಪ್ರೀತಿಸಿದ್ದನು. ಇಬ್ಬರ ಜಾತಿ ಬೇರೆಯಾಗಿದ್ದರೂ ಸಹ ನಾನೇ ನಿನ್ನ ಮದುವೆಯಾಗುತ್ತೇನೆ ಎಂದು ಯುವತಿಯ ಪೋಷಕರನ್ನು ನಂಬಿಸಿ ಆಕೆಯನ್ನು ಬೆಂಗಳೂರಿಗೆ ಕರೆತಂದು ಸಂಸಾರ ಹೂಡಿದ್ದನು. ಕೆಲವು ತಿಂಗಳುಗಳಿಂದ ಒಟ್ಟಿಗೆ ಇದ್ದ ಇವರ ನಡುವೆ ಇತ್ತೀಚಿಗೆ ಸಣ್ಣಪುಟ್ಟ ವಿಷಯಕ್ಕೆ ಜಗಳಗಳು ಶುರುವಾಗಿದ್ದವು.
ಆರೋಪಿ ಅಯ್ಯಪ್ಪ ರಂಜಿತಾಳಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸುತ್ತಿದ್ದನು ಎನ್ನಲಾಗಿದೆ ಈ ಬಗ್ಗೆ ರಂಜಿತಾ ತನ್ನ ಪೋಷಕರಿಗೂ ದೂರು ನೀಡಿದಳು ಎರಡು ದಿನಗಳ ಹಿಂದೆ ಗಲಾಟೆ ವಿಕೋಪಕ್ಕೆ ತಿರುಗಿ ಮನೆಯಲ್ಲೇ ಇದ್ದ ಕೇಬಲ್ ವೈರ್ ನಿಂದ ರಂಜಿತಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಏನು ಅರಿಯದಂತೆ ನಟಿಸಿದ ಅಯ್ಯಪ್ಪ ರಂಜಿತಾಳ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಮಾಹಿತಿ ನೀಡಿದ್ದನು ಸ್ಥಳಕ್ಕೆ ಬಂದ ರಂಜಿತಾಳ ಕುಟುಂಬಸ್ಥರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ವರ್ತೂರು ಭಾಗದ ಪೊಲೀಸರು ತನಿಖೆ ಕೈಗೊಂಡಾಗ ಅಸಲಿ ಸತ್ಯ ಹೊರಬಂದಿದೆ ಮರಣೋತ್ತರ ಪರೀಕ್ಷೆ ಹಾಗೂ ತನಿಖೆ ವೇಳೆ ಇದು ಆತ್ಮಹತ್ಯೆ ಅಲ್ಲ ಕೇಬಲ್ ವೈಯರ್ ಬಿಗಿದು ಕೊಲೆ ಮಾಡಿದ್ದಾನೆ ಎಂಬುದು ದೃಢಪಟ್ಟಿದೆ ಸದ್ಯ ಪೊಲೀಸರು ಆರೋಪಿ ಅಯ್ಯಪ್ಪನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದ್ದು ಕುಟುಂಬಸ್ಥರು ಅಂತಿಮ ಸಂಸಾರಕ್ಕಾಗಿ ಕೊಡಗಿನ ಪೊನ್ನಂಪೇಟೆಗೆ ಕೊಂಡೊಯ್ದಿದ್ದಾರೆ.

