
ಮಡಿಕೇರಿ: ಕೊಡಗು ಜಿಲ್ಲೆಯ ಜನರಿಗೆ ಹೃದಯ ಸಂಬಂಧಿತ ಸುಧಾರಿತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ಥಾಪಿಸಲಾಗುತ್ತಿರುವ ಕ್ಯಾಥ್ ಲ್ಯಾಬ್ ಘಟಕದ ಕಾರ್ಯಾರಂಭಕ್ಕೆ ವೇಗ ನೀಡಲಾಗಿದೆ.
ಈ ಸಂಬಂಧ ಶಾಸಕ ಡಾ. ಮಂತರ್ ಗೌಡ ಅವರು ವಿಧಾನಸೌಧದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯೋಜನೆಯ ಪ್ರಗತಿ ಪರಿಶೀಲಿಸಿದರು.
ಕ್ಯಾಥ್ ಲ್ಯಾಬ್ ಸ್ಥಾಪನೆ, ಅಗತ್ಯ ಸಿದ್ಧತೆಗಳು ಹಾಗೂ ಕಾರ್ಯಾರಂಭಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಯೋಜನೆಯನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.
ಪಿಪಿಪಿ ಮಾದರಿಯಲ್ಲಿ ಸ್ಥಾಪನೆಯಾಗುತ್ತಿರುವ ಈ ಘಟಕ ಕಾರ್ಯಾರಂಭಿಸಿದರೆ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಸೇರಿದಂತೆ ಹೃದಯ ಸಂಬಂಧಿತ ಪ್ರಮುಖ ಚಿಕಿತ್ಸೆಗಳು ಮಡಿಕೇರಿಯಲ್ಲೇ ಲಭ್ಯವಾಗಲಿವೆ. ಇದರಿಂದ ಹೃದಯ ಚಿಕಿತ್ಸೆಗಳಿಗಾಗಿ ಮೈಸೂರು, ಮಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಕಡಿಮೆಯಾಗಲಿದೆ.
ವಿಶೇಷವಾಗಿ ತುರ್ತು ಹೃದಯ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಈ ಘಟಕ ವರದಾನವಾಗಲಿದೆ. ಬಡ

