ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿಗೆ ₹5 ಕೋಟಿ ಟೆಂಡರ್ ಆಹ್ವಾನ
ಮಂತರ್ ಗೌಡ ಪ್ರಯತ್ನಕ್ಕೆ ಮತ್ತೊಂದು ಹಂತದ ಯಶಸ್ಸು; ಯೋಜನೆಗೆ ವೇಗ
ಮಡಿಕೇರಿ: ಕೊಡವ ಸಮುದಾಯದ ಇತಿಹಾಸ, ಸಂಸ್ಕೃತಿ, ಸಂಪ್ರದಾಯ ಹಾಗೂ ವಿಶಿಷ್ಟ ಜೀವನಶೈಲಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದ ಕೊಡವ ಹೆರಿಟೇಜ್ ಸೆಂಟರ್ ಯೋಜನೆಗೆ ಮತ್ತಷ್ಟು ವೇಗ ದೊರೆತಿದೆ.
ಮಡಿಕೇರಿ ಸಮೀಪ ನಿರ್ಮಾಣಗೊಳ್ಳುತ್ತಿರುವ ಕೊಡವ ಹೆರಿಟೇಜ್ ಸೆಂಟರ್ನ ಮುಂದುವರಿದ ಕಾಮಗಾರಿಗಾಗಿ ₹5 ಕೋಟಿ ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.
ಕೊಡವ ಸಮುದಾಯದ ಬಹುದಿನಗಳ ಆಶಯವಾಗಿರುವ ಈ ಯೋಜನೆ ಸಾಕಾರಗೊಳಿಸಲು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಆರಂಭವಾಗಿರುವುದು ಕಾಮಗಾರಿ ಮುಂದುವರಿಯುವ ನಿರೀಕ್ಷೆ ಮೂಡಿಸಿದೆ.
ಕೊಡವ ಸಂಸ್ಕೃತಿ, ಕಲೆ, ಇತಿಹಾಸ ಹಾಗೂ ಪರಂಪರೆಯನ್ನು ಒಂದೇ ಸೂರಿನಡಿ ಪರಿಚಯಿಸುವ ಈ ಕೇಂದ್ರವು ಪ್ರವಾಸಿಗರು ಮತ್ತು ಯುವ ಪೀಳಿಗೆಗೆ ಕೊಡಗಿನ ಸಾಂಸ್ಕೃತಿಕ ವೈಭವವನ್ನು ತಿಳಿಸುವ ಪ್ರಮುಖ ತಾಣವಾಗಿ ರೂಪುಗೊಳ್ಳುವ ನಿರೀಕ್ಷೆಯಿದ

