ಮಡಿಕೇರಿ-ದೇವರಕೊಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ಸಿಂಚನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಮದೆನಾಡಿನ ಯುವ ಯೋಗ ಸಾಧಕಿ ಸಿಂಚನಾ ಅವರು ವಿವಿಧ ಬಗೆಯ ಯೋಗಾಸನಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅಲ್ಲದೆ, ವಿದ್ಯಾರ್ಥಿಗಳಿಗೆ ಯೋಗದ ಮಹತ್ವ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸದಾನಂದ, ಅಂಗನವಾಡಿ ಶಿಕ್ಷಕಿ ಶೋಭಾ, ವಿದ್ಯಾರ್ಥಿಗಳ ಪೋಷಕರು, ಸ್ಥಳೀಯರು ಹಾಗೂ ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಯಶೋಧರ ಉಪಸ್ಥಿತರಿದ್ದರು.
ಯೋಗ ಸಾಧಕಿ ಸಿಂಚನಾಳ ಪೋಷಕರಾದ ಕೀರ್ತಿ ಕುಮಾರ್ ಮತ್ತು ರೇಣುಕಾ ಕಾರ್ಯಕ್ರಮದಲ್ಲಿ ಹಾಜರಿ ದ್ದರು.

