ಕುಶಾಲನಗರ: ಹಾರಂಗಿ ಜಲಾಶಯದ ಬ್ಯಾಕ್ವಾಟರ್ನಲ್ಲಿ ವಾಟರ್ ಬೋಟಿಂಗ್ ವೇಳೆ ದೋಣಿ ಮಗುಚಿಕೊಂಡು ಗುಜರಾತ್ ಮೂಲದ ದಂಪತಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಗುಜರಾತ್ ನಿವಾಸಿಗಳಾದ ಧರ್ಮೇಶ್ ನಾಯಕ್ (50) ಹಾಗೂ ಅವರ ಪತ್ನಿ ನಿಮ್ಮಿ (ಸುಮಾರು 47) ಎಂದು ಗುರುತಿಸಲಾಗಿದೆ.
ಇಂದು ಸಂಜೆ ಸುಮಾರು 6 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ. ದೋಣಿಯಲ್ಲಿದ್ದ ದಂಪತಿಯ ಮಕ್ಕಳಾದ ಮಗಳು ಅವಾಂಶಿ ಹಾಗೂ ಮಗ ಅನುಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

