Close Menu
Kodagu News
    ಹೊಸ ಸುದ್ದಿ

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ
    • ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ
    • ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ
    • ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ
    • ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್
    • ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
    • ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.
    • ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಡುಗೆ ಮನೆ»ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ
    ಅಡುಗೆ ಮನೆ

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    ಕೊಡಗಿನ ರಸ್ತೆಗಳಲ್ಲಿ ಆತ್ಮವಿಶ್ವಾಸದಿಂದ ಸಾಗುತ್ತಿರುವ ಮಹಿಳಾ ಆಟೋ ಚಾಲಕಿಯರು

     

    ಸುರೇಶ್ ಬಿಳಿಗೇರಿ. 

    ವಿರಾಜಪೇಟೆ:ಕೈಯಲ್ಲಿ ಸ್ಟೇರಿಂಗ್… ಕಣ್ಣಲ್ಲಿ ಆತ್ಮವಿಶ್ವಾಸ… ಮನಸ್ಸಿನಲ್ಲಿ ಬದುಕು ಕಟ್ಟಿಕೊಳ್ಳುವ ಛಲ…
    ಇದು ಪುರುಷರಿಗಷ್ಟೇ ಸೀಮಿತ ಎನ್ನಲಾಗುತ್ತಿದ್ದ ಆಟೋ ಚಾಲನೆಯ ಕ್ಷೇತ್ರಕ್ಕೆ ಕೊಡಗಿನ ಮಹಿಳೆಯರೂ ಕಾಲಿಟ್ಟಿದ್ದಾರೆ. ತಮ್ಮ ದುಡಿಮೆಯಿಂದ ಕುಟುಂಬಕ್ಕೆ ಆಸರೆಯಾಗುವುದರ ಜೊತೆಗೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುತ್ತಿರುವ ಈ ಮಹಿಳೆಯರು ಇಂದು ಸಮಾಜಕ್ಕೆ ಹೊಸ ಸಂದೇಶವೊಂದನ್ನು ನೀಡುತ್ತಿದ್ದಾರೆ.

    ವಿರಾಜಪೇಟೆ ನಗರದ ರಸ್ತೆಗಳಲ್ಲಿ ನಿತ್ಯ ಆಟೋ ಚಲಾಯಿಸುತ್ತಿರುವ ಅಶ್ವಿನಿ ಹಾಗೂ ಪ್ರಿಯಾ ಇದಕ್ಕೆ ಜೀವಂತ ಉದಾಹರಣೆ. ಕಳೆದ ಎರಡು ವರ್ಷಗಳಿಂದ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆಟೋ ಓಡಿಸುತ್ತಿರುವ ಇವರಿಗೆ, ಈ ವೃತ್ತಿ ಕೇವಲ ಜೀವನೋಪಾಯವಲ್ಲ… ಸ್ವಾಭಿಮಾನದ ಬದುಕಿನ ದಾರಿ.

    ಮನೆಯಿಂದಲೂ ಉತ್ತಮ ಬೆಂಬಲ ದೊರೆಯುತ್ತಿದೆ ಎನ್ನುವ ಅಶ್ವಿನಿ ಮತ್ತು ಪ್ರಿಯಾ, “ನಮ್ಮ ಬದುಕು ನಮ್ಮ ಹಕ್ಕು. ಅದನ್ನು ಗೌರವದಿಂದ ಮುನ್ನಡೆಸುತ್ತಿದ್ದೇವೆ” ಎಂಬ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ.

    ಕೊಡಗಿನ ವಿವಿಧ ಭಾಗಗಳಲ್ಲಿ ಒಟ್ಟು 11 ಮಹಿಳಾ ಆಟೋ ಚಾಲಕಿಯರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಗೋಣಿಕೊಪ್ಪದಲ್ಲಿ ಇಬ್ಬರು, ಸಿದ್ದಾಪುರ–ನೆಲ್ಯಹುದಿಕೇರಿಯಲ್ಲಿ ಮೂವರು, ಸೋಮವಾರಪೇಟೆ, ಮಡಿಕೇರಿ, ಭಾಗಮಂಡಲ ಹಾಗೂ ಏಳನೇ ಹೊಸಕೋಟೆಯಲ್ಲಿ ತಲಾ ಒಬ್ಬರು ಮಹಿಳೆಯರು ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ.

    ಇವರಲ್ಲಿ ಸುಜಾತಾ ಅವರದ್ದು ಮತ್ತೊಂದು ಸ್ಫೂರ್ತಿದಾಯಕ ಕಥೆ. ಕಳೆದ 13 ವರ್ಷಗಳಿಂದ ಆಟೋ ಸ್ಟೇರಿಂಗ್ ಹಿಡಿದು ಗೌರವದ ಬದುಕು ನಡೆಸುತ್ತಿರುವ ಅವರು, ಕಷ್ಟಗಳಿಗೆ ಹೆದರದೆ ದುಡಿದು ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ರಸ್ತೆಯಲ್ಲಿರುವ ಈ ಮಹಿಳೆಯರ ದುಡಿಮೆಯ ಹಿಂದೆ ಹಲವು ಸವಾಲುಗಳಿವೆ. ಸುರಕ್ಷತೆಯ ದೃಷ್ಟಿಯಿಂದ ಮದ್ಯಪಾನ ಮಾಡಿದ ಪ್ರಯಾಣಿಕರ ಬಾಡಿಗೆಗೆ ಹೋಗಲು ಅವರು ಹಿಂದೇಟು ಹಾಕುತ್ತಾರೆ. ಆದರೆ ದೂರದ ಪ್ರಯಾಣ ಎಂದಾಕ್ಷಣ ಹೆದರುವುದಿಲ್ಲ. ಅಗತ್ಯವಿದ್ದರೆ ದೂರದ ಬಾಡಿಗೆಯನ್ನೂ ಆತ್ಮವಿಶ್ವಾಸದಿಂದ ಸ್ವೀಕರಿಸುತ್ತಾರೆ.

    ದಿನಕ್ಕೆ ಸುಮಾರು 700ರಿಂದ 1100 ರೂಪಾಯಿವರೆಗೆ ದುಡಿಯುವ ಈ ಮೃದು ಕೈಗಳು, ತಮ್ಮ ಬದುಕನ್ನು ಮಾತ್ರವಲ್ಲ, ತಮ್ಮ ಕುಟುಂಬದ ಭವಿಷ್ಯವನ್ನೂ ಗಟ್ಟಿಯಾಗಿ ಕಟ್ಟಲು ನಿರ್ಧರಿಸಿವೆ.

    ಅಚ್ಚರಿಯ ಸಂಗತಿಯೆಂದರೆ, ಮಹಿಳಾ ಆಟೋ ಚಾಲಕಿಯರನ್ನು ಪುರುಷ ಆಟೋ ಚಾಲಕರೂ ಗೌರವದಿಂದ ಕಾಣುತ್ತಿದ್ದಾರೆ. “ಇಲ್ಲಿ ಯಾವುದೇ ತಾರತಮ್ಯವಿಲ್ಲ, ಅವರೊಂದಿಗೆ ನಾವಿದ್ದೇವೆ” ಎನ್ನುವ ಮೂಲಕ ಸಹೋದ್ಯೋಗಿ ಆಟೋ ಚಾಲಕರು ಹಲವು ಸಂದರ್ಭಗಳಲ್ಲಿ ತಮ್ಮ ಮಾನವೀಯತೆಯನ್ನು ತೋರಿಸಿದ್ದಾರೆ.

    ಇಂತಹ ಮಹಿಳೆಯರನ್ನು ಕೇವಲ ಪ್ರಯಾಣಿಕರಾಗಿ ನೋಡುವುದಕ್ಕಿಂತ, ತಮ್ಮ ಕಾಲ ಮೇಲೆ ನಿಂತು ಬದುಕು ಕಟ್ಟಿಕೊಳ್ಳುತ್ತಿರುವ ದುಡಿಯುವ ಮಹಿಳೆಯರಾಗಿ ಸಮಾಜ ಗುರುತಿಸಬೇಕಿದೆ. ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳು ಇವರ ಪರಿಶ್ರಮವನ್ನು ಗುರುತಿಸಿ ಅಗತ್ಯ ಸಹಕಾರ ನೀಡಬೇಕಿದೆ. ಮಹಿಳಾ ಆಟೋ ಚಾಲಕಿಯರ ಸುರಕ್ಷತೆಯ ಬಗ್ಗೆಯೂ ಪೊಲೀಸ್ ಇಲಾಖೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ.

    ಒಂದು ಕಾಲದಲ್ಲಿ “ಮಹಿಳೆ ಆಟೋ ಓಡಿಸುತ್ತಾಳೆ” ಎನ್ನುವುದು ಅಚ್ಚರಿಯ ಸುದ್ದಿಯಾಗಿತ್ತು. ಇಂದು ಕೊಡಗಿನ ರಸ್ತೆಗಳಲ್ಲಿ ಅದು ಬದುಕಿನ ವಾಸ್ತವವಾಗಿದೆ. ಕುಟುಂಬದ ಹೊಣೆಗಾರಿಕೆ, ಸಮಾಜದ ದೃಷ್ಟಿ, ರಸ್ತೆಯ ಸವಾಲುಗಳು… ಯಾವುದಕ್ಕೂ ಜಗ್ಗದೆ ಸ್ಟೇರಿಂಗ್ ಹಿಡಿದು ಮುನ್ನಡೆಯುತ್ತಿರುವ ಈ ಮಹಿಳೆಯರು ಹೇಳುತ್ತಿರುವ ಸಂದೇಶ ಒಂದೇ—

    “ನಮ್ಮ ಬದುಕು ನಮ್ಮ ಹಕ್ಕು… ದುಡಿದು, ಗೌರವದಿಂದ ಬದುಕುತ್ತೇವೆ.”

    ಆಟೋ ಕೇವಲ ವಾಹನವಾಗಿರಬಹುದು.
    ಆದರೆ ಇವರ ಕೈಯಲ್ಲಿರುವ ಸ್ಟೇರಿಂಗ್… ಸ್ವಾಭಿಮಾನದ ಬದುಕಿನ ದಿಕ್ಕು ತೋರಿಸುವ ಹಿಡಿತ. ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಆ ಕೈಗಳಿಗೆ… ಒಂದು ಸಲಾಂ

    Previous Articleಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ
    Next Article ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    Related Posts

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026

    ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ

    September 22, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.