Close Menu
Kodagu News
    ಹೊಸ ಸುದ್ದಿ

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026

    ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್

    September 10, 2026

    ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ

    September 10, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
    • ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್
    • ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ
    • ಸಾಮರಸ್ಯದ ಕೊಡಗಿಗೆ ಬೆಂಕಿ ಹಚ್ಚುತ್ತಿರುವವರು ಯಾರು?
    • ಲಂಡನ್‌ನಲ್ಲಿ ಕೊಡಗಿನ ಕೊನೆಯ ರಾಜನ ನೆನಪು: ಚಿಕ್ಕವೀರ ರಾಜೇಂದ್ರ ವಾಸಿಸಿದ್ದ ಮನೆಗೆ ಬ್ಲೂ ಪ್ಲೇಕ್‌
    • ಸಿದ್ದಾಪುರ–ಒಂಟಿಅಂಗಡಿ ರಸ್ತೆ ಅಭಿವೃದ್ಧಿಗೆ ಚಾಲನೆ: ₹3 ಕೋಟಿ ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿ
    • ಸಾಂಸ್ಕೃತಿಕ ಹಕ್ಕಿಗೆ ಬೆಂಬಲ, ವಿಭಜನೆಗೆ ವಿರೋಧ: ಕೊಡಗನ ಹರ್ಷ
    • ನೇತ್ರದಾನದಿಂದ ಇಬ್ಬರ ಬದುಕಿಗೆ ಬೆಳಕು: ಮಡಿಕೇರಿಯಲ್ಲಿ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಾಚರಣೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಡುಗೆ ಮನೆ»ಕೊಡಗಿನ ಅಂಗಡಿಗಳತ್ತ ಕೇರಳದ ಕಳಪೆ ತಿನಿಸುಗಳ ನಿಗೂಢ ದಂಡಯಾತ್ರೆ..
    ಅಡುಗೆ ಮನೆ

    ಕೊಡಗಿನ ಅಂಗಡಿಗಳತ್ತ ಕೇರಳದ ಕಳಪೆ ತಿನಿಸುಗಳ ನಿಗೂಢ ದಂಡಯಾತ್ರೆ..

    Updated:September 1, 2026

    ಜಿಲ್ಲೆಯಾದ್ಯಂತ ಹರಡಿದ ಹೊರರಾಜ್ಯದ ಸ್ನ್ಯಾಕ್ಸ್ ಸರಬರಾಜು ಜಾಲ.

    ಪ್ಯಾಕೆಟ್ ಮೇಲಿನ ಲೈಸೆನ್ಸ್ ಯಾರದ್ದು? ಉತ್ಪಾದನೆ ಎಲ್ಲಿ? ಗುಣಮಟ್ಟ ಪರೀಕ್ಷೆ ಆಗಿದೆಯೇ? — ಕೊಡಗು ನ್ಯೂಸ್ ತಂಡ ತನಿಖಾ ವರದಿಯಲ್ಲಿ ಕೊಡಗಿನ ಜನರೇ ಬೆಚ್ಚಿಬೀಳುವ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದೆ. ತನಿಖಾ ವರದಿಯ ತಂಡ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ದಾಖಲೆಗಳಿಗೆ ಪೂರಕವಾಗಿ ಸಂಗ್ರಹಿಸಿದೆ. 

    ಸುರೇಶ್ ಬಿಳಿಗೇರಿ..

    ಮಡಿಕೇರಿ: ಕೊಡಗು ಜಿಲ್ಲೆಯ ಅಂಗಡಿ-ಮುಂಗಟ್ಟುಗಳಲ್ಲಿ ಮಾರಾಟವಾಗುತ್ತಿರುವ ಕುರುಕುಲ್ ತಿಂಡಿಗಳಾದ ಪ್ಯಾಕೆಟ್ ಚಿಪ್ಸ್, ಕೇಕ್, ಬ್ರೆಡ್, ಮಿಕ್ಸ್‌ಚರ್ ಹಾಗೂ ವಿವಿಧ ತಿಂಡಿ-ತಿನಿಸುಗಳು ಎಲ್ಲಿಂದ ಬರುತ್ತಿವೆ? ಅವುಗಳನ್ನು ಯಾರು ತರುತ್ತಿದ್ದಾರೆ? ಯಾವ ವಾಹನಗಳಲ್ಲಿ ಸರಬರಾಜು ಮಾಡಲಾಗುತ್ತಿದೆ? ಪ್ಯಾಕೆಟ್‌ಗಳ ಮೇಲಿರುವ ಆಹಾರ ಸುರಕ್ಷತಾ ಪರವಾನಗಿ ಸಂಖ್ಯೆ ನಿಜವಾಗಿಯೂ ಅದೇ ಉತ್ಪನ್ನಕ್ಕೆ ಸಂಬಂಧಿಸಿದ್ದೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನಮ್ಮ ತಂಡ ನಡೆಸಿದ ರಹಸ್ಯ ಮಾಹಿತಿ ಸಂಗ್ರಹ ಕಾರ್ಯಾಚರಣೆಯಲ್ಲಿ, ಕೊಡಗು ಜಿಲ್ಲೆಯ ಮಾರುಕಟ್ಟೆಗೆ ಕೇರಳದ ವಿವಿಧ ಜಿಲ್ಲೆಗಳಿಂದ ದೊಡ್ಡ ಪ್ರಮಾಣದಲ್ಲಿ ತಿನ್ನಲು ಯೋಗ್ಯವಲ್ಲದ ಪ್ಯಾಕೆಟ್ ಆಹಾರ ಪದಾರ್ಥಗಳು ಸರಬರಾಜಾಗುತ್ತಿರುವ ಮಾಹಿತಿ ಲಭ್ಯವಾಗಿದ್ದು ತನಿಖಾ ತಂಡ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ದಾಖಲೆ ಸಹಿತವಾಗಿ ಸಂಗ್ರಹ ಮಾಡಿದೆ.

    ಕಣ್ಣೂರು, ಕ್ಯಾಲಿಕೇಟ್, ವಯನಾಡು, ಮಲಪ್ಪುರಂ ಸೇರಿದಂತೆ ಕೇರಳದ ವಿವಿಧ ಪ್ರದೇಶಗಳಲ್ಲಿ ತಯಾರಾಗುವ ಉತ್ಪನ್ನಗಳನ್ನು ಕಾರು, ಬೊಲೆರೋ, ಪಿಕಪ್ ವಾಹನ, ವ್ಯಾನ್ ಮತ್ತು ಇತರೆ ವಾಹನಗಳ ಮೂಲಕ ಕೊಡಗಿನ ವಿವಿಧ ಭಾಗಗಳಿಗೆ ತಂದು ವ್ಯಾಪಾರ ನಡೆಸಲಾಗುತ್ತಿದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭ್ಯವಾಗಿದ್ದು ಕೊಡಗಿನ ಜನ ತಿನಿಸುಗಳ ಬದಲು ಭವಿಷ್ಯದಲ್ಲಿ ಕ್ಯಾನ್ಸರ್ ಹರಡುವ ವಿಷವನ್ನೇ ತಿನ್ನುತ್ತಿದ್ದಾರೆ ಎನ್ನುವ ಕಹಿ ಸತ್ಯ ಈಗ ಮತ್ತೊಮ್ಮೆ ಸಾಬೀತಾಗಿದೆ.

    ಕೊಡಗಿಗೇ ಸರಬರಾಜಾಗುವ ಉತ್ಪನ್ನಗಳ ದೊಡ್ಡ ಪಟ್ಟಿಯೇ ಇಲ್ಲಿದೆ

    APSARA BAKERY, APS EVEREST, KODIYERI, ABC, MILKANA, PKK, HERFY, OLIVE, SK CHIPS, MARINO, FINE, THASHU’S, FASCO, AEMS BAKES, EYA, FRESH BAKE, FRESH N TASTY, AS SWEETS ಹಾಗೂ PREMAN’S MADURAM ಸೇರಿದಂತೆ ಹಲವು ಬ್ರ್ಯಾಂಡ್ ಹೆಸರಿನ ಉತ್ಪನ್ನಗಳು ಕೊಡಗು ಮಾರುಕಟ್ಟೆಗೆ ಸರಬರಾಜಾಗುತ್ತಿದ್ದು ಇದರಲ್ಲಿ ಎಷ್ಟು ಉತ್ಪನ್ನಗಳು ತಿನ್ನಲು ಯೋಗ್ಯವಾಗಿದೆ ಎಂಬುವುದು ಯಕ್ಷ ಪ್ರಶ್ನೆ.

    ಮರಗೆಣಸು ಚಿಪ್ಸ್, ಬಾಳೆಹಣ್ಣು ಚಿಪ್ಸ್, ಪೈಯೋಳಿ ಮಿಕ್ಸ್‌ಚರ್, ಬಿಸ್ಕೇಟ್, ರವೆ ಕೇಕ್, ಬ್ರೆಡ್, ಕಪ್ ಕೇಕ್, ಮಾರ್ಬಲ್ ಕೇಕ್, ಸ್ವೀಟ್ ಕೇಕ್, ಸಾಫ್ಟ್ ಕೇಕ್, ಮಿಲ್ಕ್ ರಸ್ಕ್, ಬಟರ್ ಕುಕೀಸ್, ಕಾಜಾ, ಮಸಾಲೆ ಕಡಲೆ, ಪಿರಿ ಅಡಾ, ಕಣ್ಣೂರಪ್ಪಂ ಹಾಗೂ ಚಕ್ಕುಳಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಫುಡ್ ಮಾಫಿಯಾ ಮೂಲಕ ಕೊಡಗಿಗೆ ತಲುಪುತ್ತಿರುವ ಬಗ್ಗೆ ಮಾಹಿತಿಯಿದ್ದು ಇದರ ಹಿಂದೆ ಯಾರಿದ್ದಾರೆ ಎಂಬುವುದು ಕೂಡ ಪ್ರಶ್ನೇಯಾಗಿದೆ. 

    FSSAI ನಿಯಮವನ್ನು ಗಾಳಿಗೆ ತೂರಿ ವ್ಯಾಪಾರ

    ಹೌದು, ಆಹಾರ ಸುರಕ್ಷತಾ ನಿಯಮವನ್ನು ಇಲ್ಲಿ ಬಹುತೇಕ ಎಲ್ಲಾ ಸಂಸ್ಥೆಗಳು ಗಾಳಿಗೆ ತೂರಿ ವ್ಯಾಪಾರ ನಡೆಸುತ್ತಿವೆ. FSSAI ಸಂಖ್ಯೆಯನ್ನು ವ್ಯಾಪಾರ ಮಾಡಲು ಕೇವಲ ಆಯ್ದ ಜಿಲ್ಲೆಗಳಿಗೆ ನೀಡಲಾಗಿದೆಯೇ? ಇಲ್ಲ ಕೇರಳ ರಾಜ್ಯವ್ಯಾಪಿ ಸರಬರಾಜು ಮಾಡಲು ನೀಡಲಾಗಿದೆಯೇ ಅಥವಾ ದೇಶದಾದ್ಯಂತ ಸರಬರಾಜು ಮಾಡಲು FSSAI ಸಂಖ್ಯೆ ನೀಡಲಾಗಿದೆಯೇ ಎಂಬುವುದು ಇಲ್ಲಿ ತುಂಬಾ ಮುಖ್ಯ. ಜಿಲ್ಲೆಗೆ ರಾಜ್ಯಕ್ಕೆ ಮತ್ತು ಹೊರರಾಜ್ಯಕ್ಕೂ ಸರಬರಾಜು ಮಾಡಬೇಕೆಂದರೆ ಸೆಂಟ್ರಲೈಸ್ಡ್ FSSAI ಸಂಖ್ಯೆ ಪಡೆಯಬೇಕು. ಆದರೆ ಇಲ್ಲಿ ಎಲ್ಲಾ ಸಂಸ್ಥೆಗಳು ಕೇರಳದ ಆಯ್ದ ಜಿಲ್ಲೆಗಳಿಗೆ ಮಾತ್ರFSSAI ಸಂಖ್ಯೆ ಪಡೆದು ಕರ್ನಾಟಕ್ಕೂ ಸರಬರಾಜು ಮಾಡುತ್ತಿರುವುದು ಕಾನೂನು ಅಪರಾಧವಾಗಿದೆ.

    ಕಣ್ಣೂರಿನಿಂದ ಕೊಡಗಿನತ್ತ ಸರಬರಾಜಾಗುತ್ತಿರುವ ಕಲಬೆರಕೆಗಳು

    ಕೊಡಗು ನ್ಯೂಸ್ ತಂಡಕ್ಕೆ ಲಭ್ಯವಾದ ಮಾಹಿತಿ ಪ್ರಕಾರ, ಕೇರಳದ ಕಣ್ಣೂರು, ಮಟ್ಟನೂರು, ಇರಿಟ್ಟಿ, ಪುನ್ನಾಡ್, ಉಳಿಕ್ಕಲ್ ಸೇರಿದಂತೆ ವಿವಿಧ ಪ್ರದೇಶಗಳ ವ್ಯಾಪಾರಿಗಳು ಪಿಕಪ್ ವಾಹನಗಳು ಸೇರಿದಂತೆ ಬೇರೆ ಬೇರೆ ವಾಹನಗಳಲ್ಲಿ ಈ ತಿನಿಸು ಹಾಗೂ ಮನೆ ಬಳಕೆಯ ಉತ್ಪನ್ನಗಳನ್ನು ಸಾಗಿಸುತ್ತಿರುವುದು ಖಚಿತವಾಗಿದೆ. ಇದಲ್ಲದೆ ವಯನಾಡು ಮತ್ತು ಕ್ಯಾಲಿಕೇಟ್ ಜಿಲ್ಲೆಗಳಿಂದಲೂ ಬೇಕರಿ ಉತ್ಪನ್ನಗಳು ಹಾಗೂ ಸ್ನ್ಯಾಕ್ಸ್‌ಗಳು ಕೊಡಗು ಮಾರುಕಟ್ಟೆಗೆ ಯಾವುದೇ ಅಡೆತಡೆಯಿಲ್ಲದೆ ಗಡಿ ದಾಟಿ ಬರುತ್ತಿದೆ.

    ಪ್ಯಾಕೆಟ್ ಮೇಲಿನ FSSAI ಸಂಖ್ಯೆ ಯಾರದ್ದು?

    ಭಾರತೀಯ ಆಹಾರ ಸುರಕ್ಷತಾ ನಿಯಮಗಳ ಪ್ರಕಾರ ಪೂರ್ವಪ್ಯಾಕೇಜ್ಡ್ ಆಹಾರ ಉತ್ಪನ್ನಗಳ ಮೇಲೆ ನಿರ್ದಿಷ್ಟ ಮಾಹಿತಿಗಳು ಇರಬೇಕಾಗುತ್ತದೆ. FSSAI ನಿಯಮಗಳಲ್ಲಿ ಉತ್ಪನ್ನದ ಲೇಬಲ್ ಮೇಲೆ ಸಂಬಂಧಪಟ್ಟ FSSAI ಲೋಗೋ ಮತ್ತು ಲೈಸೆನ್ಸ್ ಸಂಖ್ಯೆ ಪ್ರದರ್ಶಿಸುವುದು ಸೇರಿದಂತೆ ವಿವಿಧ ಲೇಬಲಿಂಗ್ ಅವಶ್ಯಕತೆಗಳನ್ನು ನಿಗದಿಪಡಿಸಲಾಗಿದೆ.

    * ಪ್ಯಾಕೆಟ್ ಮೇಲಿನ FSSAI ಲೈಸೆನ್ಸ್ ಸಂಖ್ಯೆ ಯಾರ ಹೆಸರಿನಲ್ಲಿದೆ?
    * ಲೈಸೆನ್ಸ್ ಹೊಂದಿರುವ ಸಂಸ್ಥೆಯ ವಿಳಾಸ ಯಾವುದು?
    * ಉತ್ಪನ್ನ ತಯಾರಾಗುತ್ತಿರುವ ಸ್ಥಳ ಯಾವುದು?
    * ಬ್ರ್ಯಾಂಡ್ ಮಾಲೀಕರು ಮತ್ತು ಉತ್ಪಾದಕರು ಒಂದೇ ಸಂಸ್ಥೆಯವರೇ?
    * ಬೇರೆ ಕಂಪನಿಯ ಲೈಸೆನ್ಸ್ ಅಥವಾ ಉತ್ಪಾದನಾ ಘಟಕದ ಮೂಲಕ ಉತ್ಪನ್ನ ತಯಾರಿಸಲಾಗುತ್ತಿದೆಯೇ?
    * ಪ್ಯಾಕೆಟ್ ಮೇಲಿನ ಬ್ಯಾಚ್ ಸಂಖ್ಯೆ ಮತ್ತು ಉತ್ಪಾದನಾ ವಿವರಗಳು ದಾಖಲೆಗಳಿಗೆ ಹೊಂದಿಕೆಯಾಗುತ್ತಿವೆಯೇ?
    * ಸರಬರಾಜುದಾರರ ಬಳಿ ಖರೀದಿ ಮತ್ತು ಮಾರಾಟದ ಅಧಿಕೃತ ಬಿಲ್‌ಗಳಿವೆಯೇ? ಇವುಗಳಿಗೆ ಅಧಿಕೃತ ತನಿಖೆಯಿಂದ ಮಾತ್ರ ಸ್ಪಷ್ಟ ಉತ್ತರ ಸಿಗಬೇಕಿದೆ.

    ಒಂದೇ ವಾಹನದಲ್ಲಿ ನೂರಾರು ಪ್ಯಾಕೆಟ್‌ಗಳು?

    ಮಾಹಿತಿಯ ಪ್ರಕಾರ, ವಿವಿಧ ರೀತಿಯ ಪ್ಯಾಕೆಟ್ ತಿಂಡಿ-ತಿನಿಸುಗಳನ್ನು ಒಂದೇ ವಾಹನದಲ್ಲಿ ತುಂಬಿಕೊಂಡು ಕೊಡಗಿನ ವಿವಿಧ ಪ್ರದೇಶಗಳಿಗೆ ಸಾಗಿಸಿ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆಹಾರ ಪದಾರ್ಥಗಳ ಸಾಗಾಟದ ಸಂದರ್ಭದಲ್ಲಿ ಸ್ವಚ್ಛತೆ, ಸುರಕ್ಷತೆ ಮತ್ತು ಸಂಗ್ರಹಣೆಯ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸಿದೆ.

    ಬೇಕರಿ ಉತ್ಪನ್ನಗಳು ಮತ್ತು ಸುಲಭವಾಗಿ ಹಾಳಾಗುವ ಆಹಾರ ಪದಾರ್ಥಗಳ ಸಾಗಾಟಕ್ಕೆ ಸೂಕ್ತ ಪರಿಸ್ಥಿತಿ ಇದೆಯೇ? ವಾಹನಗಳಲ್ಲಿ ಆಹಾರ ಪದಾರ್ಥಗಳೊಂದಿಗೆ ಇತರೆ ವಸ್ತುಗಳನ್ನು ಸಾಗಿಸಲಾಗುತ್ತಿದೆಯೇ? ಉತ್ಪನ್ನಗಳನ್ನು ಎಷ್ಟು ಸಮಯ ಸಂಗ್ರಹಿಸಲಾಗುತ್ತಿದೆ? ಎಂಬುದರ ಪರಿಶೀಲನೆಯೂ ಅಗತ್ಯವಾಗಿದೆ.

    ಕೊಡಗಿನಲ್ಲಿ ಯಾರು ಪರಿಶೀಲಿಸುತ್ತಿದ್ದಾರೆ? 

    1. ಹೊರರಾಜ್ಯದಿಂದ ಕೊಡಗಿಗೆ ಆಗಮಿಸುತ್ತಿರುವ ಎಲ್ಲಾ ಆಹಾರ ಉತ್ಪನ್ನಗಳ ಮೂಲವನ್ನು ಪರಿಶೀಲಿಸಲಾಗುತ್ತಿದೆಯೇ?

    2. ಪ್ರತಿಯೊಂದು ಪ್ಯಾಕೆಟ್‌ನಲ್ಲಿರುವ FSSAI ಲೈಸೆನ್ಸ್ ಸಂಖ್ಯೆ ನಿಜವಾದ ಉತ್ಪಾದಕ ಅಥವಾ ಬ್ರ್ಯಾಂಡ್ ಮಾಲೀಕರಿಗೆ ಸಂಬಂಧಿಸಿದ್ದೇ?

    3. ಉತ್ಪನ್ನದ ಉತ್ಪಾದನಾ ದಿನಾಂಕ, Best Before ದಿನಾಂಕ ಮತ್ತು ಬ್ಯಾಚ್ ಸಂಖ್ಯೆಗಳನ್ನು ಪರಿಶೀಲಿಸಲಾಗುತ್ತಿದೆಯೇ?

    4. ವಿವಿಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟವಾಗುತ್ತಿರುವ ಉತ್ಪನ್ನಗಳು ವಾಸ್ತವವಾಗಿ ಎಲ್ಲಿ ತಯಾರಾಗುತ್ತಿವೆ?

    5. ಆಹಾರ ಪದಾರ್ಥಗಳನ್ನು ಕೊಡಗಿಗೆ ತರುವ ವಾಹನಗಳ ಸ್ವಚ್ಛತೆ ಮತ್ತು ಆಹಾರ ಸಾಗಾಟದ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆಯೇ?

    6. ಕೊಡಗು ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳು ಈ ಸರಬರಾಜು ಜಾಲದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುತ್ತಾರೆಯೇ?

    ಇನ್ನು ಹಲವು ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ನೀಡುವ ಅನಿವಾರ್ಯತೆ ಇದೆ. ಕೊಡಗು ಜಿಲ್ಲೆಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯದ ಪ್ಯಾಕೇಜ್ಡ್ ಆಹಾರ ಉತ್ಪನ್ನಗಳ ಸರಬರಾಜು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತಾ ಇಲಾಖೆ ಮತ್ತು ಸಂಬಂಧಪಟ್ಟ ಜಿಲ್ಲಾಡಳಿತವು ಸ್ವಯಂಪ್ರೇರಿತವಾಗಿ ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ.

    ಪ್ರತಿಯೊಂದು ಉತ್ಪನ್ನದ ಮಾದರಿ ಸಂಗ್ರಹಿಸಿ ಗುಣಮಟ್ಟ ಪರೀಕ್ಷೆ ನಡೆಸಬೇಕು. ಪ್ಯಾಕೆಟ್ ಮೇಲಿನ FSSAI ಸಂಖ್ಯೆ, ಉತ್ಪಾದನಾ ಘಟಕ, ಬ್ರ್ಯಾಂಡ್ ಮಾಲೀಕತ್ವ, ಬಿಲ್ ಮತ್ತು ಸರಬರಾಜು ಸರಪಳಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು. ಚಿಪ್ಸ್ ಪಾಕೆಟ್ ಗಳಲ್ಲಿ ಹಾಗೂ ಮಿಕ್ಸರ್ ಗಳಲ್ಲಿ 60 ದಿನದವರೆಗೂ ಬಳಸಲು ಯೋಗ್ಯವಿದೆ ಎಂದು ಉಲ್ಲೇಖಿಸಲಾಗಿದ್ದು ಎಣ್ಣೆಯಿಂದ ಕರಿದ ತಿಂಡಿಗಳನ್ನು 60 ದಿನದವರೆಗೂ ಶೇಖರಿಸಿ ತಿನ್ನಲು ಯೋಗ್ಯವಿದೆಯೇ ಎಂಬುವುದು ಕೂಡ ಪ್ರಶ್ನಾರ್ಥವಾಗಿದೆ.

    ಇದು ಕೇವಲ ವ್ಯಾಪಾರದ ಪ್ರಶ್ನೆಯಲ್ಲ… ಕೊಡಗಿನ ಜನರ ಜೀವದ ಪ್ರಶ್ನೆ..

    Previous Articleಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಕೊಡಗಿನ ದಿಯಾ ಭೀಮಯ್ಯಗೆ ಬೆಳ್ಳಿ ಪದಕ
    Next Article ಗೋಣಿಕೊಪ್ಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ : 57ರ ಆರೋಪಿ ಬಂಧನ

    Related Posts

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026

    ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್

    September 10, 2026

    ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ

    September 10, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026

    ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್

    September 10, 2026

    ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ

    September 10, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.