Close Menu
Kodagu News
    ಹೊಸ ಸುದ್ದಿ

    ದರೋಡೆಗೆ ಐದು ವರ್ಷ… ಆರೋಪಿಗಳು ಪತ್ತೆಯಾಗಿಲ್ಲ, ನ್ಯಾಯವೂ ಸಿಕ್ಕಿಲ್ಲ!

    August 6, 2026

    ಆ. 08 ರಂದು ಪತ್ರಕತ೯ರ ಸಂಘದ ವಾಷಿ೯ಕ ಮಹಾಸಭೆ – ಸಾಧಕ ಪತ್ರಕತ೯ರಿಗೆ ಸನ್ಮಾನ

    August 6, 2026

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಗದ್ದೆಯಂತಾದ ರಸ್ತೆ

    August 6, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ದರೋಡೆಗೆ ಐದು ವರ್ಷ… ಆರೋಪಿಗಳು ಪತ್ತೆಯಾಗಿಲ್ಲ, ನ್ಯಾಯವೂ ಸಿಕ್ಕಿಲ್ಲ!
    • ಆ. 08 ರಂದು ಪತ್ರಕತ೯ರ ಸಂಘದ ವಾಷಿ೯ಕ ಮಹಾಸಭೆ – ಸಾಧಕ ಪತ್ರಕತ೯ರಿಗೆ ಸನ್ಮಾನ
    • ಮಡಿಕೇರಿಯ ಜಿಟಿ ರಸ್ತೆಯಲ್ಲಿ ಗದ್ದೆಯಂತಾದ ರಸ್ತೆ
    • ಕೊಡಗಿನಲ್ಲಿ ಶೇ.37ರಷ್ಟು ಮಳೆ ಕೊರತೆ: ಸರ್ಕಾರಕ್ಕೆ ವರದಿ – ಸಚಿವ ನರೇಂದ್ರಸ್ವಾಮಿ
    • ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು
    • ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಕುಶಾಲನಗರ ತಾಲೋಕು ಸಾಮಾನ್ಯ ಸಭೆ*
    • ಸಾವಿರಾರು ಜನರ ಸಂಪರ್ಕ ಕೊಂಡಿಯಲ್ಲಿ ನೂರಾರು ಗುಂಡಿಗಳು
    • ಅತಿವೃಷ್ಟಿ, ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲೆಗಳ ಹೊಣೆ: ಕೊಡಗಿಗೆ ನರೇಂದ್ರ ಸ್ವಾಮಿ.
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ದರೋಡೆಗೆ ಐದು ವರ್ಷ… ಆರೋಪಿಗಳು ಪತ್ತೆಯಾಗಿಲ್ಲ, ನ್ಯಾಯವೂ ಸಿಕ್ಕಿಲ್ಲ!
    ಅಂತರರಾಷ್ಟ್ರೀಯ

    ದರೋಡೆಗೆ ಐದು ವರ್ಷ… ಆರೋಪಿಗಳು ಪತ್ತೆಯಾಗಿಲ್ಲ, ನ್ಯಾಯವೂ ಸಿಕ್ಕಿಲ್ಲ!

    Screenshot

     

    ಮಡಿಕೇರಿ: ಕಷ್ಟಪಟ್ಟು ದುಡಿದು ಸಂಪಾದಿಸಿದ್ದ ಹಣ ಹಾಗೂ ಚಿನ್ನಾಭರಣವನ್ನು ಕಳೆದುಕೊಂಡು ಐದು ವರ್ಷ ಕಳೆದರೂ ನ್ಯಾಯ ಸಿಗದ ನೋವಿನಲ್ಲಿ ದರೋಡೆ ಪ್ರಕರಣದ ಸಂತ್ರಸ್ತೆ ಕಣ್ಣೀರಿಟ್ಟಿದ್ದಾರೆ. ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಬೇಕಾದ ಪೊಲೀಸರು ಇದುವರೆಗೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸುಂಟಿಕೊಪ್ಪ ಸಮೀಪದ ಹಾರಬೈಲು ಗ್ರಾಮದ ಸರೋಜಿನಿ ಆರೋಪಿಸಿದ್ದಾರೆ.

    ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2021ರ ಏಪ್ರಿಲ್ 27ರಂದು ಸಂಜೆ ಸುಮಾರು 7.30ರ ವೇಳೆಗೆ ಮನೆಯ ಹಿಂಭಾಗದಿಂದ ಒಳನುಗ್ಗಿದ ಮೂವರು ಅಪರಿಚಿತ ವ್ಯಕ್ತಿಗಳು ತನ್ನನ್ನು ಗೋಡೆಗೆ ಒತ್ತಿ ಹಿಡಿದು, ಬಾಯಿಗೆ ಬಟ್ಟೆ ತುರುಕಿ ಹಿಂಸೆ ನೀಡಿದ್ದರು ಎಂದು ಆರೋಪಿಸಿದರು.

    ಈ ವೇಳೆ ತಾನು ಪ್ರಜ್ಞಾಹೀನಳಾಗಿ ಬಿದ್ದಿದ್ದು, ನಂತರ ಎಚ್ಚರಗೊಂಡಾಗ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಸುಮಾರು ₹3.90 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವಾಗಿರುವುದು ಗಮನಕ್ಕೆ ಬಂದಿತ್ತು ಎಂದು ಹೇಳಿದರು.

    ಘಟನೆ ನಡೆದ ದಿನವೇ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ, ಐದು ವರ್ಷ ಕಳೆದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ದೊರೆತಿಲ್ಲ ಎಂದು ಸರೋಜಿನಿ ಅಸಮಾಧಾನ ವ್ಯಕ್ತಪಡಿಸಿದರು.

    “ಕಷ್ಟಪಟ್ಟು ದುಡಿದು ಸಂಪಾದಿಸಿದ್ದ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡಿದ್ದೇನೆ. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬುದೂ ನನಗೆ ಸ್ಪಷ್ಟವಾಗಿಲ್ಲ. ಐದು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದೇನೆ” ಎಂದು ಅವರು ಕಣ್ಣೀರಿಟ್ಟರು.

    ಸಾಮಾನ್ಯ ನಾಗರಿಕಳಾಗಿ ಕಾನೂನಿನ ಮೇಲೆ ನಂಬಿಕೆ ಹೊಂದಿದ್ದೇನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ತನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸರೋಜಿನಿ ಮನವಿ ಮಾಡಿದರು.

    ಸುದ್ದಿಗೋಷ್ಠಿಯಲ್ಲಿ ಸರೋಜಿನಿ ಅವರ ಮೈದುನ ಬಿ.ಕೆ. ದಿನೇಶ್ ಉಪಸ್ಥಿತರಿದ್ದರು.

    Previous Articleಆ. 08 ರಂದು ಪತ್ರಕತ೯ರ ಸಂಘದ ವಾಷಿ೯ಕ ಮಹಾಸಭೆ – ಸಾಧಕ ಪತ್ರಕತ೯ರಿಗೆ ಸನ್ಮಾನ

    Related Posts

    ಆ. 08 ರಂದು ಪತ್ರಕತ೯ರ ಸಂಘದ ವಾಷಿ೯ಕ ಮಹಾಸಭೆ – ಸಾಧಕ ಪತ್ರಕತ೯ರಿಗೆ ಸನ್ಮಾನ

    August 6, 2026

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಗದ್ದೆಯಂತಾದ ರಸ್ತೆ

    August 6, 2026

    ಕೊಡಗಿನಲ್ಲಿ ಶೇ.37ರಷ್ಟು ಮಳೆ ಕೊರತೆ: ಸರ್ಕಾರಕ್ಕೆ ವರದಿ – ಸಚಿವ ನರೇಂದ್ರಸ್ವಾಮಿ

    August 5, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ದರೋಡೆಗೆ ಐದು ವರ್ಷ… ಆರೋಪಿಗಳು ಪತ್ತೆಯಾಗಿಲ್ಲ, ನ್ಯಾಯವೂ ಸಿಕ್ಕಿಲ್ಲ!

    August 6, 2026

    ಆ. 08 ರಂದು ಪತ್ರಕತ೯ರ ಸಂಘದ ವಾಷಿ೯ಕ ಮಹಾಸಭೆ – ಸಾಧಕ ಪತ್ರಕತ೯ರಿಗೆ ಸನ್ಮಾನ

    August 6, 2026

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಗದ್ದೆಯಂತಾದ ರಸ್ತೆ

    August 6, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.