ಬಲ್ಲಮಾವಟಿ ಪೇರೂರು ಗ್ರಾಮದಲ್ಲಿ ಭಾರಿ ಮಳೆಗೆ ಅಡುಗೆಮನೆ ಗೋಡೆ ಕುಸಿದು ಹಾನಿ

ನಾಪೋಕ್ಲು :ನಾಪೋಕ್ಲು ಬಳಿಯ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಮನೆಯ ಅಡುಗೆ ಮನೆಯ ಒಂದು ಭಾಗ ಕುಸಿದು ಹಾನಿಯಾಗಿದೆ.
ಪೇರೂರು ಗ್ರಾಮದ ನಿವಾಸಿ ಬಿ.ಮೊಣ್ಣಪ್ಪ ಎಂಬುವವರ ವಾಸದ ಮನೆಯ ಅಡುಗೆ ಮನೆಯ ಒಂದು ಭಾಗದ ಗೋಡೆಯು ಭಾರಿ ಮಳೆಗೆ ಕುಸಿದಿದ್ದು ಹಾನಿಸಂಭವಿಸಿ ನಷ್ಟ ಉಂಟಾಗಿದೆ.
ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿ ಕುಮಾರ್, ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

