ಪಲ್ಸ್ ಪೊಲಿಯೊ ಮನೆ ಮನೆ ಭೇಟಿ

ನಿನ್ನೆ ನಡೆದ ರಾಷ್ಟ್ರೀಯ ಪಲ್ಸ್ ಪೆÇೀಲಿಯೊ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯದೆ ವಂಚಿತರಾದ ಮಕ್ಕಳಿಗೆ ಪತ್ತೆ ಹಚ್ಚಲು 2 ದಿನ ಮನೆ ಮನೆಗಳಿಗೆ ಭೇಟಿ ಮಾಡುವ 2ನೇ ದಿನ ಮೂರ್ನಾಡು ವ್ಯಾಪ್ತಿಯ ಹೂಕಾಡು ಪೈಸಾರಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಲಸಿಕೆ ಪಡೆಯಾದ ಮಕ್ಕಳಿಗೆ ಪತ್ತೆ ಹಚ್ಚಿ ಲಸಿಕೆ ನೀಡುವ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿ ತಂಡಗಳು ಕಾರ್ಯನಿರ್ವಹಿಸಿದರು.

ತಂಡಗಳ ಕಾರ್ಯವನ್ನು ಮೇಲ್ವಿಚಾರಣೆಗಾಗಿ ಡಾ.ಸನತ್ ಕುಮಾರ್ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಮತ್ತು ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು.

ಜೊತೆಯಲ್ಲಿ ಟಿ.ಎನ್.ಪಾಲಾಕ್ಷ ಆರೋಗ್ಯ ಶಿಕ್ಷಣಾಧಿಕಾರಿ, ಜಿ.ವಿ.ಶ್ರೀನಾಥ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ನಿಲಿಮ್ ಕಾರ್ಯಕ್ರಮ ವ್ಯವಸ್ಥಾಪಕರು, ಹಾಗೂ ಶಿಲ್ಪಾ ಪ್ರಾ.ಆ.ಸುರಕ್ಷಾಧಿಕಾರಿ ಜಯಶ್ರೀ ಅಂಗನವಾಡಿ ಕಾರ್ಯಕರ್ತೆ ಹಾಜರಿದ್ದರು.

Exit mobile version