
KODAGU NEWS UPDATE
ಮುಗಿಯದ ಆನೆ ಮಾನವ ಸಂಘರ್ಷ ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ
ಇತ್ತೀಚೆಗಷ್ಟೇ ಪಳ್ಳಕೆರೆ ವ್ಯಾಪ್ತಿಯಲ್ಲಿ ಕಾರ್ಮಿಕರ ಮೇಲೆ ಕಾಡಾನೆ ದಾಳಿಗೆ ಮುಂದಾಗಿತ್ತು.
ಪ್ರಕರಣದ ಗಂಭೀರತೆ ಅರಿತರು ಎಚ್ಚೆತ್ತುಕೊಳ್ಳದ ಇಲಾಖೆ.
ವಾರಗಳೇ ಕಳೆದರು ಆನೆಗಳನ್ನು ಅರಣ್ಯಕಟ್ಟಲು ಕ್ರಮ ಕೈಗೊಂಡಿಲ್ಲ.
ಕಾಫಿ ತೋಟದಲ್ಲಿ ಬೀಡುಬಿಟ್ಟಿರೋ ಕಾಡಾನೆ ಹಿಂಡು.
ಸಂಜೆ ಮನೆಗೆ ವಾಪಸ್ ಹೋಗ್ತೇವೋ, ಇಲ್ಲವೋ ಅನ್ನೋ ಭೀತಿಯಲ್ಲಿ ಕೆಲಸಕ್ಕೆ ತೆರಳಿರೋ ಕಾರ್ಮಿಕರು.
ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ.
ಕಾಡಾನೆಗಳಿಂದ ಪ್ರಾಣ ಹಾನಿ ಸಂಭವಿಸಿದರೆ ಅದಕ್ಕೆ ಅರಣ್ಯ ಇಲಾಖೆ ಹಾಗೂ ಸರಕಾರವೇ ನೇರ ಹೊಣೆ.
ನಿಮ್ಮ ಪರಿಹಾರ ನಮಗೆ ಬೇಡ, ಹೋದ ಜೀವ ನಿಮ್ಮಿಂದ ಕೊಡೋಕೆ ಆಗುತ್ತಾ..
ನಮಗೆ ಆನೆ ಹಾವಳಿಗೆ ಶಾಶ್ವತ ಪರಿಹಾರ ಬೇಕಷ್ಟೇ ಅದನ್ನು ಮಾಡಿಕೊಡಿ.
ಸಾವು ನೋವುಗಳಾದರೂ ಬಡ ಜನರಿಗಷ್ಟೇ ಲಾಸ್.
ಅಧಿಕಾರಿದಲ್ಲಿರುವವರು ಅವರ ಮಕ್ಕಳು ಸೇಫ್ ಇರ್ತಾರೆ ಅದಕ್ಕೆ ಇದರ ಗಂಭೀರತೆ ಅರಿತರು ಕ್ರಮ ಕೈಗೊಳ್ತಾ ಇಲ್ಲ.
ಸರಕಾರವೇ ಕೈಕಟ್ಟಿ ಕುಳಿತರೆ ನಮ್ಮ ಸಮಸ್ಯೆಯನ್ನು ಇನ್ಯಾರ ಬಳಿ ಹೇಳಿಕೊಳ್ಳೋದು ಅಳಲು ತೋಡಿಕೊಂಡಿರೋ ಕಾರ್ಮಿಕರು


