ಇರಾನ್ ನ ಸರ್ವೊಚ್ಚ ಅಧ್ಯಕ್ಷ ಖೊಮೆನೆನಿ ಹತ್ಯೆ ಈ ಪ್ರಪಂಚದ ನವ ದಬ್ಬಾಳಿಕೆ ಯುಗದ ಮುಂದುವರಿದ ಬಾಗ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ನಾಪಂಡ ಮುದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಮುಖಪುಟದಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು “ಎಲ್ಲ ಕಾಲಕ್ಕೂ ಎಲ್ಲ ನಾಯಕರ ಮೇಲೂ ಸ್ಥಳೀಯ ಅಸಮಾಧಾನ ಇದ್ದೇ ಇರುತ್ತದೆ. ಇದಕ್ಕೆ ಯಾವ ಆಢಳಿತಗಾರರೂ ಹೊರತಲ್ಲ. ಸ್ಥಳೀಯ ಅಸಮಾಧಾನಗಳನ್ನೇ ನೆಪ ಮಾಡಿಕೊಂಡು ಬಾಹ್ಯ ಹಸ್ತಕ್ಷೇಪಗಳಿಂದ ಹತ್ಯೆ ಮಾಡುವುದೇ ನ್ಯಾಯ ಸಮ್ಮತವಾದರೆ ಭಾರತದ ಯಾವ ನಾಯಕರೂ ಹೊರತಾಗಲಾರರು.
ಖೊಮೆನೆನಿ ಇರಾನಿನ ರಾಜ ಪ್ರಭುತ್ವದ ವಿರುದ್ದ ನಡೆದ ಸುಧೀರ್ಘ ಎಡಪಂಥೀಯ ಚಳುವಳಿಯ ಲಾಭ ಪಡೆದು ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪಿಸಿ ಮತ್ತೊಂದು ರೀತಿಯ ಸರ್ವಾಧಿಕಾರಕ್ಕೆ ನಾಂದಿ ಹಾಡಿದವರು.
ಪ್ರಪಂಚದ ಅತ್ಯಂತ ಪುರಾತನ ನಾಗರೀಕತೆ ಇರಾನಿನ ಜನರ ದುರ್ಧೈವ ಮತ್ತೆ ರಾಜ ಪ್ರಭುತ್ವ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಅದಲ್ಲದೆ ಅಮೆರಿಕ ಹಾಗೂ ಈಸ್ರೆಲ್ ದಾಳಿಯಲ್ಲಿ ಹತನಾದ ಖೊಮೆನೆನಿ ಕೊನೆವರೆಗೂ ಯಾರಿಗೂ ತಲೆ ಬಾಗದೆ ತನ್ನ ದೇಶದ ಹಿತ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ಖೊಮೆನೆನಿ ನೈಜ ನಾಯಕ ಎಂದು ಹೇಳಿದ್ದಾರೆ.

*ಕೊಡಗು ನ್ಯೂಸ್*

Exit mobile version