ಮಾಲ್ದಾರೆ ಚೌಡಿಕಾಡು ಬಳಿ ದ್ವಿಚಕ್ರವಾನದ ಮೇಲೆ ಒಂಟಿ ಸಲಗ ದಾಳಿ -ಸವಾರರು ಅಪಾಯದಿಂದ ಪಾರು
ಸಿದ್ದಾಪುರ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಿಕಾಡು ಪ್ರದೇಶದಲ್ಲಿ ಒಂಟಿ ಸಲಗ ಒಂದು ಬೈಕ್ ಮೇಲೆ ದಾಳಿ ನಡೆಸಿದ ಪರಿಣಾಮ ಬೈಕ್ ಜಖಂ ಗೊಂಡಿದ್ದು ಸವಾರರು ಪ್ರಾಣಾಪಾಯದಿಂದ ಪಾರದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮಾಲ್ದಾರೆ ವ್ಯಾಪ್ತಿಗೆ ಒಳಪಡುವ ಇವೊಲ್ವೊ ಬ್ಯಾಕ್ ಸಂಸ್ಥೆಯ ಹಿಲ್ ಕಿಲ್ ಗ್ರೂಪ್ ಗೆ ಸೇರಿದ ಚೌಡಿ ಕಾಡು ಕಾಫಿ ತೋಟದಿಂದ ಬೈಕ್ ಮೇಲೆ ಕಾಡನೆ ದಾಳಿ ನಡೆಸಿದೆ ಆಕಸ್ಮಿಕ ದಾಳಿಯಿಂದ ಆತಂಕಗೊಂಡ ಸಿಬ್ಬಂದಿಗಳು ಬೈಕ್ಬಿಟ್ಟು ಓಡಿದ್ದಾರೆ. ಘಟನೆಯಲ್ಲಿ ಬೈಕ್ಗೆ ಹಾನಿಯಾಗಿದ್ದು ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ
ಈ ಭಾಗದಲ್ಲಿ ನಿರಂತರ ಕಾಡಾನೆ ಭೀತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಅರಣ್ಯ ಇಲಾಖೆ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ
ಪದೇ ಪದೇ ಕಾರ್ಮಿಕರು ಹಾಗೂ ವಾಹನ ಸವಾರರ ಮೇಲೆ ಕಾಡಾನೆ ದಾಳಿಗಳ ಮಾಹಿತಿ ಇದ್ದರೂ ಶಾಶ್ವತ ಪರಿಹಾರ ಕಲ್ಪಿಸಲು ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಶೀಘ್ರದಲ್ಲೇ ಸಮಗ್ರ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅರಣ್ಯ ಇಲಾಖೆ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.


