ನೊಖ್ಯ ಗ್ರಾಮದಲ್ಲಿ ನಿರಂತರ ಆನೆ ಹಾವಳಿ

ನೊಖ್ಯ ಗ್ರಾಮದಲ್ಲಿ ಆನೆ ಹಾವಳಿಯು ಹೆಚ್ಚಾಗಿದ್ದು, ಕಾಫಿ ಫಸಲು ಹಾಗೂ ಗದ್ದೆಯನ್ನು ನಾಶ ಮಾಡುವುದರ ಜೊತೆಗೆ, ಚೆಪ್ಪುಡೀರ ಕಾರ್ಯಪ್ಪ ಅವರಿಗೆ ಸೇರಿದ ಸ್ಪ್ರಿಂಕ್ಲರ್ ಪೈಪುಗಳನ್ನು ನಾಶಪಡಿಸಿದೆ. ಕಾಡಾನೆ ಹಾವಳಿಯ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಕೂಡ ಅವರು ಯಾವುದೇ ಕ್ರಮವನ್ನು ಕೈಗೊಳ್ಳದೇ ಇರುವುದು ರೈತರನ್ನು ಕಂಗಾಲು ಮಾಡಿದೆ.

Exit mobile version