ರಾಜಕೀಯ ಮೇಲಾಟದಲ್ಲಿ ಧರ್ಮಕ್ಕೆ ಕೊಡಲಿಪೆಟ್ಟು ಬೀಳದಿರಲಿ: ಎಡಿಕೇರಿ ಪ್ರಸನ್ನ
ಮಡಿಕೇರಿ: ರಾಜಕೀಯ ಲಾಭಕ್ಕಾಗಿ ಸಮಸ್ತ ಹಿಂದೂಗಳ ಮೂಲವಾದ ಹಿಂದುತ್ವದ ಆಚರಣೆಗಳಿಗೆ ಅಡ್ಡಿಪಡಿಸುವುದು ಸರಿಯಲ್ಲಈ ರೀತಿಯ ಹಿಂದೂ ವಿರೋಧಿ ಚಟುವಟಿಗೆಗಳನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮ ಹೇಳಿಕೆ ನೀಡಿರುವ ಅವರು ಬಿರುನಾಣಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಬಂಟಿಂಗ್ಸ್ ತೆರವುಗೊಳಿಸಿದ ಘಟನೆಗೆ ಪ್ರತಿಕ್ರಿಯಿಸಿರುವ ಅವರು ಇಡೀ ಸಮಾಜ ಇಂದು ಒಗ್ಗಟ್ಟು ಮತ್ತು ಹಿಂದುತ್ವದ ಉಳಿವಿಗಾಗಿ ಪಣ ತೊಟ್ಟಿರುವ ಸಮಯದಲ್ಲಿ ರಾಜಕೀಯ ಲಾಭಕ್ಕಾಗಿ ಇಂತ ಕಿಡಿಗೇಡಿತನ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಮರಸ್ಯದಿಂದಿದ್ದ ಕೊಡಗಿನ ಸಮುದಾಯಗಳನ್ನು ರಾಜಕೀಯ ಲಾಭಕ್ಕಾಗಿ ಒಡೆದ ಬಳಿಕ ಈಗ ಕೆಲವು ಪಟ್ಟಬದ್ದ ಹಿತಆಸಕ್ತಿಗಳು ಹಿಂದೂ ಸಮಾಜವನ್ನೇ ಕೆಣಕುವ ಕುಚೇಷ್ಟೆ ಖಂಡನೀಯ ಎಂದಿದ್ದಾರೆ. ಎಲ್ಲಾ ಸಮುದಾಯದ ಶುದ್ಧ ಹೃದಯಗಳು ಇಂದು ಹಿಂದುತ್ವವದ ಉಳಿವಿಗಾಗಿ ಉತ್ತಮ ಸಮಾಜವನ್ನು ಕಟ್ಟಿ ನಮ್ಮೊಳಗಿರುವ ಕೆಟ್ಟ ಕ್ರಿಮಿಗಳ ವಿರುದ್ಧ ಎಲ್ಲರೂ ಒಂದಾಗಬೇಕೆಂದು ಹೇಳಿದ ಪ್ರಸನ್ನ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಇಂತ ಘಟನೆಗಳು ಮರುಕಳಿಸದಂತೆ ಎಚ್ಚರವ ವಹಿಸಲು ಅವರು ಇದೆ ವೇಳೆ ಒತ್ತಾಯಿಸಿದ್ದಾರೆ.



