ಮರದಿಂದ ಬಿದ್ದು ವ್ಯಕ್ತಿ ಸಾವು

ವಿರಾಜಪೇಟೆ ಸಮೀಪದ ಚೊಕಂಡಹಳ್ಳಿ ನಲ್ವತೋಕ್ಲು ಬಳಿ ಮರದಿಂದ ಬಿದ್ದು ವ್ಯಕ್ತಿ ಸಾವು.

ಪೊನ್ನಂಪೇಟೆ ಮಹಾತ್ಮ ಗಾಂಧಿ ನಗರದ ನಿವಾಸಿ ಅತ್ತೂರಿನಲ್ಲಿ ನೆಲೆಸಿದ್ದ ಮದು ಅವರ ಏಕಮಾತ್ರ ಪುತ್ರ ರವಿ (30) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಇಂದು ಮಧ್ಯಾಹ್ನ ಮುಸ್ತಫಾ ಅವರ ತೋಟದಲ್ಲಿ ಮರ ಕಾಪತು ಮಾಡುವ ಸಂದರ್ಭದಲ್ಲಿ ಮರದ ಮೇಲೆ ಇದ್ದ ಸಂದರ್ಭದಲ್ಲಿ ಮೂರ್ಛೆ ಗೆ ಒಳಗಾಗಿ ಮರದಿಂದ ಬಿದ್ದು ಮೃತಪಟ್ಟಿದ್ದಾರೆ.

 

ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ಯಲ್ಲಿ ಮೃತ ರವಿ ಅವರ ಮೃತ ದೇಹವನ್ನು ಶವಪರೀಕ್ಷೆಗೆ ಸಾಗಿಸಲಾಗಿದ್ದು ,ವಿರಾಜಪೇಟೆ ಗ್ರಾಮಾಂತರ ಠಾಣೆ ಯಲ್ಲಿ ಮೊಕದ್ದಮೆ ದಾಖಲಾಗಿದೆ.

ಮೃತ ರವಿ ವಿವಾಹಿತ ನಾಗಿದ್ದು ಪತ್ನಿ ,ಏಳು ವರ್ಷಗಳ ಪುತ್ರಿ, ಐದು ತಿಂಗಳ ಗಂಡು ಮಗುವನ್ನು ಅಗಲಿದ್ದಾರೆ.

Exit mobile version