
ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.
ವಿರಾಜಪೇಟೆ ನಗರದಲ್ಲಿರುವ ಸಂತ ಅನ್ನಮ್ಮನ ಚರ್ಚ್ ಮೈದಾನದಲ್ಲಿ ಈ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಗೊಂಡಿತ್ತು. ಟೂರ್ನಮೆಂಟನ್ನು ಉದ್ಘಾಟಿಸಿ ಮಾತನಾಡಿದ ಸ್ವತಹ ಕ್ರೀಡಾಪಟು ಆಗಿರುವ ಶಾಸಕರು, ಯುವಜನತೆಯನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ. ಅದರಲ್ಲೂ ವಿಶೇಷವಾಗಿ ವಿಶ್ವ ವ್ಯಪ್ತಿ ಮನ್ನಣೆ ಪಡೆದು ಯುವಜನತೆಯಲ್ಲಿ ಹಾಸು ಹೊಕ್ಕಿರುವ ಕ್ರಿಕೆಟ್ ಪಂದ್ಯಾಟ ಪ್ರತಿಯೊಬ್ಬ ಯುವಕನಿಗೆ ಜೀವಾಳವಾಗಿದೆ.
ಇಂತಹ ಕ್ರೀಡಾಕೂಟಗಳು ಸಮುದಾಯದ ಯುವ ಕ್ರೀಡಾಳುಗಳಿಗೆ ಸ್ಪೂರ್ತಿ ನೀಡಿ ತಮ್ಮ ಮುಂದಿನ ಕ್ರೀಡಾ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸಂತ ಅನ್ನಮ್ಮ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಕಾಲ ಕರಾಟೆ ಶಿಬಿರದಲ್ಲಿ ವಿವಿಧ ಶಾಲೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ ಪ್ರವೀಣ್, ಸಂತೋಷ್, ಎಜೆ ಬಾಬು,ಜೋಕಿಂ, ಮರ್ವಿನ್ ಲೋಬೊ, ರಾಬಿನ್, ಮೆಲ್ರಾಯ್ ಲೋಬೊ, ಮುಕಟೀರ ಸಂದೀಪ್, ಆಪ್ರು ರವೀಂದ್ರ, ಕಾಳಿಮಾಡ ಪ್ರಶಾಂತ್, ಭವಿನ್, ಅಯೂಬ್, ಕರಾಟೆ ಶಿಬಿರದ ತರಬೇತುದಾರರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಕೊಡಗು ನ್ಯೂಸ್

