Close Menu
Kodagu News
    ಹೊಸ ಸುದ್ದಿ

    ಗರ್ಭಿಣಿ ಹಾಗೂ ಗರ್ಭದಲ್ಲಿದ್ದ ಅವಳಿ ಮಕ್ಕಳ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ?: ಜಿಲ್ಲಾ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವಿರುದ್ಧ ದೂರು

    July 28, 2026

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಗರ್ಭಿಣಿ ಹಾಗೂ ಗರ್ಭದಲ್ಲಿದ್ದ ಅವಳಿ ಮಕ್ಕಳ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ?: ಜಿಲ್ಲಾ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವಿರುದ್ಧ ದೂರು
    • ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ
    • ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ
    • ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ
    • ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ
    • ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ
    • ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    • ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ದೇವರಕಾಡು ಉಳಿವಿಗಾಗಿ ಪೊನ್ನಂಪೇಟೆಯಲ್ಲಿ ಸಂವಾದ
    ಜಿಲ್ಲೆ

    ದೇವರಕಾಡು ಉಳಿವಿಗಾಗಿ ಪೊನ್ನಂಪೇಟೆಯಲ್ಲಿ ಸಂವಾದ

    ದೇವರಕಾಡು ಉಳಿವಿಗಾಗಿ ಪೊನ್ನಂಪೇಟೆಯಲ್ಲಿ ಸಂವಾದ

    KODAGU NEWS

     

    ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಸುಲೋಚನಾ ಡಾ. ಎಂ.ಜಿ ನಾಗರಾಜ್ ದತ್ತಿ ಆಶಯದಂತೆ ಕೊಡಗಿನ ದೇವರ ಕಾಡುಗಳ ಸಂರಕ್ಷಣೆ ಕುರಿತ ಉಪನ್ಯಾಸದಲ್ಲಿ ಮಾತನಾಡುತಿದ್ದರು.

     

    ಮುಂದುವರೆದ ಅವರು ಕೊಡಗಿನಲ್ಲಿ 1,215 ದೇವರ ಕಾಡುಗಳಿವೆ ಅವುಗಳಲ್ಲಿ 165ಕ್ಕೂ ಹೆಚ್ಚು ಬೇರೆ ಬೇರೆ ದೇವರುಗಳಿವೆ. ಇವು ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಕೊಡಗಿನ ಎಲ್ಲ ಸಮುದಾಯಗಳ ದೇವರು ಕಾಡುಗಳಿದ್ದು ವಿಶೇಷವಾಗಿ ಕೊಡವ ಮಾಪಿಳ್ಳೆ ದೇವರ ಕಾಡುಗಳು ಇದ್ದು ಪಳ್ಳಿಕಾಡು ಎನ್ನುವ ಹೆಸರಿಂದ ಗುರುತಿಸಲ್ಪಡುತ್ತಿದೆ.

     

    ದೇವರ ಕಾಡುಗಳಲ್ಲಿರುವ ಅಯ್ಯಪ್ಪ ಭದ್ರಕಾಳಿ ಮುಂತಾದ ದೇವರುಗಳಿಗೆ ಗುಡಿಗಳಿಲ್ಲ ಅದು ಆಕಾಶಕ್ಕೆ ಮುಖ ಮಾಡಿಕೊಂಡು ಮಳೆ ಕರೆಯುತ್ತಿವೆ ಇವುಗಳ ಜೊತೆಯಲ್ಲಿ ಬೇಟೆ ನಾಯಿಗಳು ಇವೆ ಎಂದರು.

     

    ದೇವರ ಕಾಡುಗಳು ಧಾರ್ಮಿಕ ಸಂಪ್ರದಾಯ, ಸಂಸ್ಕೃತಿ ಉಳಿಸುವ ಜೊತೆಗೆ ಊರಿನ ನ್ಯಾಯ ಪಂಚಾಯಿತಿಯನ್ನು ಮಾಡುವ ತಾಣಗಳಾಗಿವೆ. ಅದೊಂದು ದೈವೀಕ ನೆಲೆಯಾಗಿದೆ ಈ ಕಾರಣದಿಂದಲೇ ಇಡೀ ದೇಶದಲ್ಲಿಯೇ ಒಂದು ವಿಶಿಷ್ಟ ಮಾದರಿಯಾಗಿ ಕೊಡಗಿನ ದೇವರ ಕಾಡುಗಳು ಗುರುತಿಸಲ್ಪಡುತ್ತವೆ ಎಂದರು.

     

    ವಿಶ್ವದಲ್ಲಿಯೇ ಅಪರೂಪ ಎನ್ನುವ ರೀತಿಯಲ್ಲಿ ದೇವರ ಹೆಸರಿನಲ್ಲಿ ಉಳಿದಿರುವ ಈ ಕಾಡುಗಳ ಬಗ್ಗೆ ಸಂಶೋಧನೆ ಮಾಡಲು ಎಂಟು ವಿವಿಧ ರಾಷ್ಟ್ರಗಳ ಸಂಶೋಧಕರು ಬಂದು ನಾಲ್ಕು ವರ್ಷಗಳ ಕಾಲ ಇಲ್ಲಿಯೇ ಇದ್ದು ಸಂಶೋಧನೆ ಮಾಡಿ ಹೋಗಿದ್ದಾರೆ. ಅಂತಹ ದೇವರ ಕಾಡು ಇಂದು ಕ್ಷೀಣಿಸುವ ಆತಂಕಕ್ಕೆ ಒಳಗಾಗಿದೆ. ನಮ್ಮ ಮಕ್ಕಳಿಗೆ ದೇವರ ಕಾಡುಗಳ ಬಗ್ಗೆ ಇರುವ ಹಾಡುಗಳು, ಕಥೆಗಳನ್ನು ಹೇಳುವ ಮೂಲಕ ಕಾಡಿನ ಮಹತ್ವವನ್ನು ತಿಳಿಸಿ ಕೊಡಬೇಕಾಗಿದೆ. ಕಾನೂನಿನ ಮೂಲಕ ದೇವರ ಕಾಡು ಉಳಿಸಲು ಸಾಧ್ಯವಿಲ್ಲ. ಸಂಸ್ಕೃತಿ, ಸಂಪ್ರದಾಯಗಳ ಮೂಲಕ ದೇವರು ಕಾಡುಗಳನ್ನು ಉಳಿಸಬೇಕು ಎಂದು ಹೇಳಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ದೇವರ ಹೆಸರಿನಲ್ಲಿ ನಮ್ಮ ಹಿರಿಯರು ಕಾಡನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. 1873 ರಲ್ಲಿ ಬ್ರಿಟಿಷರು ದೇವರ ಕಾಡನ್ನು ಉಳಿಸಲು ಕಾನೂನು ರೂಪಿಸಿದ್ದರು. ಈ ಕಾನೂನು ಕಾಲ ಕ್ರಮೇಣ ಬಿಗಿಯಾಗುತ್ತಾ ಬಂದು ಇಂದಿಗೂ ದೇವರ ಕಾಡು ಉಳಿಯಲು ಸಹಕಾರಿಯಾಗಿದೆ. ದೇವರ ಕಾಡು ಮತ್ತು ಊರಿನ ಜನರ ಮಧ್ಯೆ ಒಂದು ಅವಿನಾಭಾವ ಸಂಬಂಧ ಇದೆ ಎಂದರು.

    ಸಂಶೋಧಕ ಎಂ.ಜಿ ನಾಗರಾಜ್ ದೇವರ ಕಾಡುಗಳ ಚಿತ್ರಣವನ್ನು ಪ್ರಾತ್ಯಕ್ಷತೆ ಮೂಲಕ ವಿವರಿಸುತ್ತಾ ಕೊಡಗಿನ ದೇವರ ಕಾಡುಗಳು ಕೇವಲ ಹಿಂದೂ ಸಂಸ್ಕೃತಿಯಿಂದ ಕೂಡಿಲ್ಲ ಇಲ್ಲಿ ಬೌದ್ಧ ಜೈನ ಸಂಸ್ಕೃತಿಗೆ ಸೇರಿದ ದೇವರುಗಳಿವೆ. ಇಲ್ಲಿನ ತೆರಾಲು ಗ್ರಾಮವು ತೆರೆದಹಾಳ ಎಂದು ಮಂಚಳ್ಳಿ ಗ್ರಾಮವು ಮಂಜುಶ್ರೀ ಎಂದು ಬೌದ್ಧ ನೆಲೆಗಳ ಹೆಸರಿನಲ್ಲಿ ಕಂಡುಬರುತ್ತವೆ ಎಂದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಅರಣ್ಯ ಮಹಾ ವಿದ್ಯಾಲಯದ ಪ್ರಭಾರ ಡೀನ್

    ಪ್ರೊಫೆಸರ್ ಶಿವಕುಮಾರ್ ಮಾತನಾಡುತ್ತಾ ದೇಶದಲ್ಲಿಯೇ ವಿಶಿಷ್ಟ ಪರಿಸರ ಹೊಂದಿರುವ ಪ್ರದೇಶ ಕೊಡಗಾಗಿದ್ದು ದೈವಭಯದಿಂದಾದರು ಕೊಡಗಿನ ದೇವರ ಕಾಡುಗಳು ಉಳಿದಿರುವುದುc ಶ್ಲಾಘನೀಯ. ವಿಜ್ಞಾನ, ದೈವ, ಪರಿಸರ ಇವುಗಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಇಂದಿನ ಪೀಳಿಗೆಗೆ ಇದರ ಅರಿವನ್ನು ಮೂಡಿಸಿ ಅರಣ್ಯವನ್ನು ಉಳಿಸಬೇಕಾಗಿದೆ ಎಂದರು.

    ಬೆಂಗಳೂರಿನ ನಿವೃತ್ತ ಕೃಷಿ ವಿಜ್ಞಾನಿ, ಜಿಕೆವಿಕೆ ಸಂಸ್ಥೆಯ ನಿವೃತ್ತ ಡೀನ್ ಆಗಿದ್ದ ಡಾ. ಎಂ.ಜಿ ಚಂದ್ರಕಾಂತ್ ಮಾತನಾಡಿ ವಿಶ್ವಕ್ಕೆ ಮಾದರಿಯಾಗಿರುವ ದೇವರ ಕಾಡನ್ನು ಉಳಿಸಿಕೊಳ್ಳಬೇಕು. ಕಾಡು ಉಳಿದರೆ ಸಂಸ್ಕೃತಿ ಉಳಿದಿತ್ತು ದೇವರ ಕಾಡು ಉಳಿಸಬೇಕಾದದ್ದು ಎಲ್ಲರ ಕರ್ತವ್ಯ ಎಂದರು.

    ಹಾತೂರು ವನಭದ್ರಕಾಳಿ ದೇವಸ್ಥಾನದ ಅಧ್ಯಕ್ಷ ಕೊಕ್ಕಂಡ ಗಿಣಿ ಗಣಪತಿ ಸಂವಾದದಲ್ಲಿ ಮಾತನಾಡುತ್ತಾ ಹಿಂದೆ ಕೊಡಗಿನಲ್ಲಿ 11,000 ಎಕರೆ ದೇವರ ಕಾಡಿತ್ತು ಇಂದು ಅದು 9,000 ಎಕರೆಗೆ ಇಳಿದಿದೆ. ದೇವರ ಕಾಡಿನ ರಕ್ಷಕರೇ ಭಕ್ಷಕರಾಗಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ರಿಜಿಸ್ಟಾರ್ ಪ್ರೊ. ಕೋಡಿರ ಲೋಕೇಶ್ ಮಾತನಾಡುತ್ತಾ ಕೊಡಗಿನಲ್ಲಿ ಶೇಕಡ 33 ರಷ್ಟು ಅರಣ್ಯ ಇರಲೇಬೇಕು ಎಂದು ಬ್ರಿಟಿಷರು ಕಾಯ್ದೆ ರೂಪಿಸಿದರು ನಾವು ಅರಣ್ಯವನ್ನು ಉಳಿಸಿ ಬೆಳೆಸಿ ಕಾಪಾಡಿ ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ ಎಂದರು.

    ನಿವೃತ್ತ ಪ್ರಾಂಶುಪಾಲರಾದ ಡಾ. ಜೆ. ಸೋಮಣ್ಣ ಮಾತನಾಡುತ್ತಾ ಕೊಡಗಿನ ಹಚ್ಚ ಹಸಿರನ್ನು ಉಳಿಸಿಕೊಂಡು ಕೃಷಿಯೇತರ ಚಟುವಟಿಕೆಗಳನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಬೇಕಾಗಿದೆ ಎಂದರು ಸಂವಾದದಲ್ಲಿ ಮಾತನಾಡಿದ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಚಂದನ್ ಕಾಮತ್ ಇಂದಿನ ಅಭಿವೃದ್ಧಿಗೊಳ್ಳುತ್ತಿರುವ ಜಗತ್ತಿನಲ್ಲಿ ಕೃಷಿಯೇತರ ಚಟುವಟಿಕೆ ಕೂಡದು ಎಂದರೆ ತಪ್ಪಾಗುತ್ತದೆ. ಆದರೆ ಆ ಚಟುವಟಿಕೆಗಳನ್ನು ಮಾಡುವಾಗ ಕಾನೂನಿನಂತೆ ಒಂದು ಮರ ತಡಿದರೆ 10 ಮರ ನೆಡುವ ಕಾನೂನಿದ್ದು ಅದನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ ಎಂದರು.

    ಸಾಹಿತಿ ಸಹನಾ ಕಾಂತಬೈಲು ಮಾತನಾಡುತ್ತಾ ತಾವು ಕೊಡಗಿನ ದೇವರ ಕಾಡುಗಳ ಬಗ್ಗೆ ಪುಸ್ತಕ ರಚಿಸುತ್ತಿದ್ದು ಹಲವಾರು ದೇವಾಲಯಗಳಿಗೆ ಸ್ವತಹ ಭೇಟಿ ನೀಡಿ ಅಲ್ಲಿನ ಉತ್ಸವಗಳಲ್ಲಿ ಪಾಲ್ಗೊಂಡು ದೇವರ ಕಾಡಿನ ಬಗ್ಗೆ ಸ್ಥಳೀಯ ಜನರಲ್ಲಿರುವ ದೈವಭಕ್ತಿ ಮತ್ತು ಕಾಡಿನ ರಕ್ಷಣೆ ಕುರಿತು ಇರುವ ಆಸಕ್ತಿ ಶ್ಲಾಗಿಸಿದರು.

    ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರ ಪ್ರೊ. ಸಿಜಿ ಕುಶಾಲಪ್ಪ ಮತ್ತು ಸಂಶೋಧಕ ಡಾ. ಎಂಜಿ ನಾಗರಾಜ್ ರವರನ್ನು ಸನ್ಮಾನಿಸಲಾಯಿತು.

    ‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ದೇವರ ಕಾಡಿನ ಪರಿಚಯ ಮಾಡಿಕೊಡಬೇಕು. ವಿದ್ಯಾರ್ಥಿಗಳನ್ನು ಒಂದು ದಿನದ ಮಟ್ಟಿಗೆ ಆದರೂ ದೇವರ ಕಾಡಿಗೆ ಕರೆದುಕೊಂಡು ಹೋಗಿ ಅದರ ಬಗ್ಗೆ ಮಾಹಿತಿ ಕೊಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಇದನ್ನು ಶಿಕ್ಷಣ ಇಲಾಖಾಧಿಕಾರಿಗಳು ಕಾನೂನು ರೀತಿಯಲ್ಲಿ ಆದೇಶಿಸಬೇಕು ಎಂದರು.

    ಕಾರ್ಯಕ್ರಮದಲ್ಲಿ ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ನ ಕಾರ್ಯದರ್ಶಿ ಶರಿ ಸುಬ್ಬಯ್ಯ, ಹಿರಿಯ ಪತ್ರಕರ್ತ ಬಿ.ಸಿ ದಿನೇಶ್,ಶಿವಣ್ಣ, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀಮತಿ ಶೀಲಾ ಗೋಪಣ್ಣ ನಿರೂಪಿಸಿದರು. ಗೌರವ ಕಾರ್ಯದರ್ಶಿ ಕೆ ವಿ ರಾಮಕೃಷ್ಣ ಸ್ವಾಗತಿಸಿದರು .ನಿರ್ದೇಶಕ ಟಿ ಆರ್ ವಿನೋದ್ ವಂದಿಸಿದರು. ಶ್ರೀಮತಿ ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

     

    KODAGU NEWS

    Previous Articleರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಯಾ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಎ.ಎಸ್ ಪೊನ್ನಣ್ಣ ಭಾಗವಹಿಸಿ ಶುಭ ಕೋರಿದರು
    Next Article ಪೇರೂರು ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಮಹಾಶಿವರಾತ್ರಿ ಆಚರಣೆ

    Related Posts

    ಗರ್ಭಿಣಿ ಹಾಗೂ ಗರ್ಭದಲ್ಲಿದ್ದ ಅವಳಿ ಮಕ್ಕಳ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ?: ಜಿಲ್ಲಾ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವಿರುದ್ಧ ದೂರು

    July 28, 2026

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಗರ್ಭಿಣಿ ಹಾಗೂ ಗರ್ಭದಲ್ಲಿದ್ದ ಅವಳಿ ಮಕ್ಕಳ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ?: ಜಿಲ್ಲಾ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವಿರುದ್ಧ ದೂರು

    July 28, 2026

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.