Close Menu
Kodagu News
    ಹೊಸ ಸುದ್ದಿ

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ
    • ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ
    • ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ
    • ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
    • ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
    • ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
    • ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್
    • ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    ಅಂತರರಾಷ್ಟ್ರೀಯ

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    Screenshot

    ಮಡಿಕೇರಿ ರೋಟರಿ ವುಡ್ಸ್ ನಿಂದ  ಯೋಧನಮನ  – ಸೈನಿಕ ದಂಪತಿಗೆ ಸನ್ಮಾನ

    ಸೈನಿಕರ ದೇಶಸೇವೆ ಗುರುತಿಸಿ ಗೌರವಿಸಲು ಸಂಘಸಂಸ್ಥೆಗಳು ಮುಂದಾಗಬೇಕು – ರವೀಂದ್ರ ಭಟ್

    ಮಡಿಕೇರಿ ಜು 26 – ಭಾರತದ ರಕ್ಷಣೆಗೆ ಕಂಕಣಬದ್ದರಾಗಿರುವ ಸೈನಿಕರ ದೇಶಸೇವೆ ಗುರುತಿಸಿ ಗೌರವಿಸುವ  ನಿಟ್ಟಿನಲ್ಲಿ ರೋಟರಿ ಸೇರಿದಂತೆ  ಸಮಾಜದ ಎಲ್ಲಾ ಸಂಘಸಂಸ್ಥೆಗಳು ಒಟ್ಟಾಗಬೇಕೆಂದು ರೋಟರಿ   ಜಿಲ್ಲೆ 3181 ನ ಮಾಜಿ ಗವನ೯ರ್ ರವೀಂದ್ರ ಭಟ್ ಕರೆ ನೀಡಿದ್ದಾರೆ.

    ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ವುಡ್ಸ್ ವತಿಯಿಂದ ಆಯೋಜಿತ 5 ನೇ ವಷ೯ದ ಯೋಧ ನಮನ ಕಾಯ೯ಕ್ರಮ ಉದ್ಗಾಟಿಸಿ ರವೀಂದ್ರ ಭಟ್ ಮಾತನಾಡಿದರು.  ಓವ೯ ಪೊಲೀಸ್ 5 ಸಾವಿರ ಜನರನ್ನು ನಿಯಂತ್ರಿಸಬಲ್ಲ  ಸಾಮಥ್ಯ೯ ಹೊಂದಿದ್ದರೆ ಓವ೯ ಸೈನಿಕ 25 ಸಾವಿರ ಜನರನ್ನು ನಿಯಂತ್ರಿಸಬಲ್ಲ ಶಕ್ತಿ ಸಾಮಥ್ಯ೯ ಹೊಂದಿರುತ್ತಾನೆ. ದೇಶಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡ ಇಂಥ ಸೈನಿಕರನ್ನು  ವಷ೯ಕ್ಕೊಮ್ಮೆ ಮಾತ್ರವಲ್ಲದೇ ಪ್ರತೀ ನಿತ್ಯವೂ ಗೌರವಿಸುವ ಆರಾಧಿಸುವ ಕಾಯ೯ವಾಗಬೇಕೆಂದು ರವೀಂದ್ರ ಭಟ್ ಅಭಿಪ್ರಾಯಪಟ್ಟರು.

    ರೋಟರಿ ಜಿಲ್ಲೆ 3181 ನ ಸದಸ್ಯತ್ವ ವಿಸ್ತರಣಾ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ ಮಾತನಾಡಿ, 27 ವಷ೯ಗಳ ಹಿಂದೆ ಕಾಗಿ೯ಲ್ ನಲ್ಲಿ ನಡೆದ ಸಮರ ಭಾರತೀಯರಲ್ಲಿ ದೇಶಪ್ರೇಮವನ್ನು ತೀವ್ರವಾಗಿಸಲು ಸಹಕಾರಿಯಾಯಿತು. ಕಾಗಿ೯ಲ್ ನಲ್ಲಿ 527 ಸೈನಿಕರು ಹುತಾತ್ಮರಾಗಿದ್ದು ಅಂಥವರ ವೀರನಾರಿಯರನ್ನು ಕೂಡ ಸಮಾಜ ಗುರುತಿಸುವಂತಾಗಬೇಕೆಂದು ಸಲಹೆ ನೀಡಿದರು.  ಕಾಗಿ೯ಲ್ ಕದನ ಭಾರತೀಯ ಮನೋಸ್ಥೆಯ೯ದ ಸಮರ ಕೂಡ ಆಗಿತ್ತು ಎಂದು ನುಡಿದ ಅನಿಲ್, ಇಂದಿನ ಜೆನ್ ಜೀ ಪೀಳಿಗೆಗೆ ಹಿರಿಯರು ಕಾಗಿ೯ಲ್ ಕದನದಲ್ಲಿ ಭಾರತೀಯ ಯೋಧರ ಶ್ರಮ, ತ್ಯಾಗ, ಬಲಿದಾನವನ್ನು ತಿಳಿಸುವ ಕೆಲಸ ಮಾಡಬೇಕೆಂದೂ ನುಡಿದರು. 2 ತಿಂಗಳು 3 ವಾರ 2 ದಿನಗಳ ಕಾಗಿ೯ಲ್ ಕದನದಿಂದ ಪಾಕಿಸ್ತಾನದ ನಿಜಬಣ್ಣ ಜಗತ್ತಿಗೆ ತಿಳಿಯುವಂತಾಯಿತಲ್ಲದೇ ಭಾರತದ ಸೇನಾ ಸಾಮಥ್ಯ೯ವೂ ಕೂಡ ವಿಶ್ವದ ಅರಿವಿಗೆ ಬಂದಿತ್ತು ಎಂದೂ ಅನಿಲ್ ಮಾಹಿತಿ ನೀಡಿದರು.

    ರೋಟರಿ ವಲಯ 6 ರ ಸಹಾಯಕ ಗವನ೯ರ್ ಎಂ.ಡಿ. ರಂಗಸ್ವಾಮಿ ಮಾತನಾಡಿ, ಸಕಾ೯ರಿ ಇಲಾಖೆಗಳು ಮಾಜಿ ಸೈನಿಕರ ಅಹವಾಲನ್ನು ಮೊದಲು ಕೇಳುವಂತಾಗಬೇಕು. ಸಕಾ೯ರಿ ಕಚೇರಿಗಳಲ್ಲಿ ಮಾಜಿ ಸೈನಿಕರಿಗೆ, ಸೈನಿಕರ ಕುಟುಂಬಗಳಿಗೆ ಕೆಲಸ ಕಾಯ೯ಗಳಲ್ಲಿ ಮನ್ನಣೆ ದೊರಕಬೇಕು ಎಂದು ಒತ್ತಾಯಿಸಿದರು.

    ವಲಯ ಸೇನಾನಿ ವಸಂತ ಕುಮಾರ್ ಮಾತನಾಡಿ, ಸಮರದಲ್ಲಿ ಅಸಾದಾರಣ ಶೌಯ೯ ಮೆರೆದವರನ್ನು ಕಾಗಿ೯ಲ್  ವಿಜಯ್ ದಿವಸ್ ಸಂದಭ೯ ರೋಟರಿ ಸಂಸ್ಥೆಗಳು ಗುರುತಿಸಿ ಗೌರವಿಸುವ ಉತ್ತಮ ಸಂಪ್ರದಾಯ ಹೊಂದಿದೆ ಎಂದರಲ್ಲದೇ,  76 ದಿನಗಳ ಕಾಗಿ೯ಲ್ ಸಮರ ಭಾರತೀಯ ಸೇನೆಯ ಇತಿಹಾಸದಲ್ಲಿಯೇ ಅಜರಾಮರವಾಗಿ ದಾಖಲಾಗಿದೆ ಎಂದು ಶ್ಲಾಘಿಸಿದರು.

    ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ ಮಾತನಾಡಿ, ಕಳೆದ 5 ವಷ೯ಗಳಿಂದ ರೋಟರಿ ವುಡ್ಸ್ ವತಿಯಿಂದ ಕಾಗಿ೯ಲ್ ವಿಜಯ್ ದಿವಸ್ ನ್ನು ಯೋಧ ನಮನ ಕಾಯ೯ಕ್ಮರವಾಗಿ ರೂಿಸಿಕೊಂಡು ಬರಲಾಗಿದೆ.  ಯೋಧರನ್ನು ಗೌರವಿಸುವ ಮೂಲಕ ಸಮಾಜ ತನ್ನನ್ನು ತಾನೇ ಗೌರವಿಸಿಕೊಂಡಂತಾಗುತ್ತದ ಎಂದು ಅಭಿಪ್ರಾಯಪಟ್ಟರು.  ಡಿವೈಎಸ್ಪಿ ಐ.ಪಿ.ಮೇದಪ್ಪ,  ಪೊಲೀಸ್ ವೖತ್ತ ನಿರೀಕ್ಷಕ ಚಂದ್ರಶೇಖರ್ ವೇದಿಕೆಯಲ್ಲಿದ್ದರು.

    ರೋಟರಿ ವುಡ್ಸ್ ಕಾಯ೯ದಶಿ೯ ಸ್ಮಿತಾಚಂಗಪ್ಪ ವಂದಿಸಿದ ಕಾಯ೯ಕ್ರಮದಲ್ಲಿ ಪಿ.ರವಿ ದೇಶಭಕ್ತಿ ಗೀತೆ ಹಾಡಿ ಕಾಯ೯ಕ್ರಮಕ್ಕೆ ಮೆರುಗು ತಂದರು. ಎಸ್.ಎಸ್. ಸಂಪತ್ ಕುಮಾರ್ ನಿವ೯ಹಿಸಿದರು.

    ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ನಗರಸಭೆ ಸದಸ್ಯೆ ಅನಿತಾಪೂವಯ್ಯ, ವಲಯ ಸೇನಾನಿ ಲಲಿತಾರಾಘವನ್, ಮಿಸ್ಟಿ ಹಿಲ್ಸ್ ಸದಸ್ಯರಾದ ಮೋಹನ್ ಪ್ರಭು, ವಿನೋದ್ ಎ.ಕೆ. ರೋಟರಿ ವುಡ್ಸ್ ಮಾಜಿ ಅಧ್ಯಕ್ಷರಾದ ಹರೀಶ್ ಕಿಗ್ಗಾಲು, ಕಿರಣ್ ಕುಂದರ್,, ವುಡ್ಸ್  ಸದಸ್ಯರು ಹಾಜರಿದ್ದರು.  ಕಾಗಿ೯ಲ್ ಸ್ಮಾರಕಕ್ಕೆ ರೋಟರಿ ಸದಸ್ಯರು ಪುಪ್ಪ ನಮನ ಸಲ್ಲಿಸಿದರು.

    Previous Articleಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    Next Article ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ

    Related Posts

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.