ಬೇಸಗೂರಿನಲ್ಲಿ ಸೆರೆ ಸಿಕ್ಕ ಹುಲಿಯನ್ನು ಶಾಸಕ ಪೊನ್ನಣ್ಣ ವೀಕ್ಷಿಸಿ ಸ್ಥಳಾಂತರಿಸಲು ಸೂಚಿಸಿದರು

ಪೊನ್ನಂಪೇಟೆಯ ಬೆಸಗೂರಿನಲ್ಲಿ ನಿನ್ನೆ ಸೆರೆಸಿಕ್ಕ ಜಾನುವಾರು ಭಕ್ಷಕ ಹುಲಿಯನ್ನು ಇಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಸೌಧದ ತಮ್ಮ ಕಚೇರಿಯಲ್ಲಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ವಿಷಯ ತಿಳಿದು, ವಿಧಾನಸೌಧದಿಂದ ಮೆಟ್ರೋ ಮುಖಾಂತರ ಕೆಂಗೇರಿಗೆ ತೆರಳಿ, ಸೆರೆ ಸಿಕ್ಕ ಹುಲಿಯೊಂದಿಗೆ ಬನ್ನೇರುಘಟ್ಟಕ್ಕೆ ತೆರಳುತ್ತಿದ್ದ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹುಲಿಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕ್ಷೀಪ್ರ ಕಾರ್ಯಾಚರಣೆ ಹಾಗೂ ಜನರ ತೊಂದರೆಗೆ ಸ್ಪಂದಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version