ಗೌಡ ಮಹಿಳಾ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕೊಡಗು ನ್ಯೂಸ್

Ashok madikeri✍🏽

ಮೂರ್ನಾಡು – ಗೌಡ ಮಹಿಳಾ ಒಕ್ಕೂಟದ ಸ್ಥಾಪನಾ ಸಭೆ ಮುರ್ನಾಡ್ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಕಲ್ಲುಮುಟ್ಲು ಜಶ್ಮಿ ಚಿಂತು, ಉಪಾಧ್ಯಕ್ಷರಾಗಿ ಬೈಲೋಳಿ ಮೇನಕಾ ನಂದ, ಕಾರ್ಯದರ್ಶಿಯಾಗಿ ತೆಕ್ಕಡೆ ಭವ್ಯ ಪುರುಷೋತ್ತಮ್, ಸಹ ಕಾರ್ಯದರ್ಶಿಯಾಗಿ ಮೆರ್ಕಜ್ಜೆ ಸುಷ್ಮಾ ಶಿವಪ್ರಕಾಶ್, ಖಜಾಂಚಿಯಾಗಿ ತೆಕ್ಕಡೆ ಆಶಾ ಪ್ರಸನ್ನ ಹಾಗೂ ಕಲ್ಲುಮುಟ್ಲು ಲತಾ ಬೋಪಯ್ಯ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮಾತನಾಡಿದ ಸದಸ್ಯೆ ಅಂಚೆಮನೆ ದಮಯಂತಿ ಅವರು, ನಮ್ಮ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಹಿರಿಯರಿಂದ ಕಲಿತು ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ ಎಂದರು. ಮಹಿಳೆಯರ ಶಿಕ್ಷಣ, ಆರೋಗ್ಯ, ಆರ್ಥಿಕ ಶಕ್ತೀಕರಣ ಹಾಗೂ ಕುಟುಂಬ ಕಲ್ಯಾಣಕ್ಕಾಗಿ ಒಕ್ಕೂಟ ಕಾರ್ಯನಿರ್ವಹಿಸಬೇಕು. ಎಲ್ಲ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಒಕ್ಕೂಟ ಬಲಿಷ್ಠವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಮುಕ್ಕಾಟಿ ಸುಷ್ಮಾ ದಿಲೀಪ್, ಮೆರ್ಕಜ್ಜೆ ಕೃತಿಕಾ ಪ್ರಮೋದ್, ಬೈಲೋಳಿ ದಿವ್ಯ ತೇಜ್ ಕುಮಾರ್, ಬಿಳಿಯಾರ ವನಿತಾ ಹೇಮಂತ್, ಬಿಳಿಯಾರ ಮಮತಾ, ಬಿಳಿಯಾರ ಮೌನ ವಿನೋದ್, ತೆಕ್ಕಡೆ ಅನು ಭೀಮಯ್ಯ ಸಾವಿತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

 

*✍🏻ಅಶೋಕ್ _ಮಡಿಕೇರಿ*

Exit mobile version