ಕುಶಾಲನಗರ ತಾಲೂಕು ಹಿಂದೂ ಸಮಾಗಮ ಶೋಭಯಾತ್ರೆ

ಕುಶಾಲನಗರ:-ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ವಾಲ್ನೂರು-ತ್ಯಾಗತ್ತೂರು ಮಂಡಲದ ಆಶ್ರಯದಲ್ಲಿ ಭಾನುವಾರ ಹಿಂದೂ ಸಂಗಮ ಶೋಭಾಯಾತ್ರೆ ನಡೆಯಿತು. ಪ್ರಗತಿಪರ ಕೃಷಿ ಎಂ ಎಂ ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಜೇಶ್‌ನಾಥ್ ಗುರೂಜಿ ಆಶೀರ್ವಚನ ನೀಡಿದರು.

ರಾ.ಸ್ವ.ಸೇ ಸಂಘದ ಮಂಗಳೂರು ವಿಭಾಗ ಪ್ರಚಾರಕ ಸುರೇಶ್ ದಿಕ್ಕೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳು ಎಂ ಬಿ ದೇವಯ್ಯ, ತಕ್ಕರು, ಶ್ರೀ ಬಸವೇಶ್ವರ ದೇವಸ್ಥಾನ, ವಾಲ್ಲೂರು.ಲ, ಜಿ.ಎನ್‌ ರಾಮಪ್ಪ, ಮುಖ್ಯಸ್ಥರು, ಶ್ರೀ ಬಸವೇಶ್ವರ ದೇವಸ್ಥಾನ, ವಾಲ್ಲೂರು ಭಾಗಿಯಾಗಿದ್ದರು. ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

 

ಕೊಡಗು ನ್ಯೂಸ್

Exit mobile version