ಆನೆ ದಾಳಿ ವ್ಯಕ್ತಿಗೆ ಗಂಭೀರ ಗಾಯ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು

ವಿರಾಜಪೇಟೆ ತಾಲೂಕು ಬಾಡಗ ಬಾಣಂಗಾಲದ ಮಟ್ಟ ಪೈಸಾರಿ ನಿವಾಸಿ ಪೈಸಾರಿ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ಕಾಡನೆ ದಾಳಿ ನಡೆಸಿದ ಘಟನೆ ನಡೆದಿದೆ.

ಇಂದು ಬೆಳಗ್ಗೆ 10 ಗಂಟೆಯ ಅಂದಾಜಿಗೆ ಆನೆ ದಾಳಿಗೆ ಒಳಗಾದ ಅಲ್ಲಿನ ನಿವಾಸಿ ದೇವರಾಜ್ (61) ತೊಡೆ ಭಾಗಕ್ಕೆ ಗಂಭೀರ ಸ್ವರೂಪಗಳ ಗಾಯಗಳಾಗಿದ್ದು, ಗಾಯಾಳುವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಸುದ್ದಿ ತಿಳಿದು ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೊಡಗು ನ್ಯೂಸ್

Exit mobile version