ಶ್ರೀ ಮಕ್ಕಿ ಶಾಸ್ತ್ರವು ದೇವಸ್ಥಾನಕ್ಕೆ ಇಂದು ಶಾಸಕ ಎಸ್ ಪೊನ್ನಣ್ಣನವರು ಭೇಟಿ

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ತಾಲೂಕು, ನಾಪೋಕ್ಲು ಹೋಬಳಿಯ ಬೇತು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು.

 

ಶಾಸಕರು ಸ್ಥಳೀಯರ ಕೋರಿಕೆ ಮೇರೆಗೆ ದೇವಸ್ಥಾನದ ಕೆರೆಗೆ ಭೇಟಿ ನೀಡಿ, ಬಹು ಪುರಾತನವಾದ ಈ ಕೆರೆಯು ಶಿಥಿಲಾವಸ್ತೆಗೆ ತಲುಪಿರುವುದನ್ನು ಪರಿಶೀಲಿಸಿದರು. ಭಕ್ತರ ಹಾಗೂ ಸಮಿತಿಯವರ ದುರಸ್ತಿ ಕೋರಿಕೆಯನ್ನು ಮನ್ನಿಸಿದ ಮಾನ್ಯ ಶಾಸಕರು ಅಧಿಕಾರಿಗಳೊಂದಿಗೆ ಮಾತನಾಡಿ ಈ ಕೆರೆಯ ಪುನರ್ ನಿರ್ಮಾಣಕ್ಕೆ ತಗಲುವ ವೆಚ್ಚಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಮಾಹಿತಿ ಬಂದೊಡನೆ ಕೆರೆಯ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಾನ್ಯ ಶಾಸಕರು ತಿಳಿಸಿದರು.

 

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ಕುಶಾಲಪ್ಪ, ನಾಪೋಕ್ಲು ಪಂಚಾಯಿತಿ ಅಧ್ಯಕ್ಷರು ವನಜಾಕ್ಷಿ, ಸದಸ್ಯರು ಸಾಬ, ಹೇಮಾವತಿ, ಅರುಣ್ ಬೇಬ, ದಯಾ, ಶೇರಿ ಗಿರೀಶ್, ಸಂಪನ್ ಅಯ್ಯಪ್ಪ, ಅಬ್ದುಲ್ ರೆಹಮಾನ್, ಸಿರಾಜ್ ಪರವಂಡ, ವಾಸಿಮ್, ಮಂಜು ಕುಂಡಚ್ಚಿರ, ಅಯೂಬ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

 

ಕೊಡಗು ನ್ಯೂಸ್

Exit mobile version