ಪೊನ್ನಂಪೇಟೆ:-ವಿದ್ಯುತ್ ಕಂಬ ಹಾಗು ಕೇಬಲ್ ಅಳವಡಿಕೆ ಕಾಮಗಾರಿಯಿಂದ
ಕುಡಿಯುವ ನೀರು ಸರಬರಾಜು ಮಾಡುವ ಪೈಪುಗಳಿಗೆ ಹಾನಿ
ಪೊನ್ನಂಪೇಟೆ ಪಟ್ಟಣದಾದ್ಯಂತ ಕಳೆದ ಒಂದುವರೆ ತಿಂಗಳಿಂದ ನೂತನ ವಿದ್ಯುತ್ ಕಂಬ ಹಾಗು ಕೇಬಲ್ ಅನ್ನು ಅಳವಡುತ್ತಿದ್ದೂ ಈ ಸಂದರ್ಭ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಪೈಪು ದುರಸ್ತಿಗಿಡಾಗಿ ತೊಂದರೆ ಉಂಟಾಗುತಿರುವುದನ್ನು ಗಮನಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಣ್ಣೀರ ಹರೀಶ್ ರವರು ಖುದ್ದಾಗಿ ಟ್ಯಾಂಕರ್ ಮೂಲಕ ವಿವಿಧ ಭಾಗಗಳಿಗೆ ನೀರು ಸರಬರಾಜು ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.
ವಿದ್ಯುತ್ ಕಂಬ ಅಳವಡಿಸುವ ಗುತ್ತಿಗೆದಾರರು ತರತುರಿಯಲ್ಲಿ ಕಂಬಗಳನ್ನು ನೆಟ್ಟು ನೀರಿನ ಪೈಪುಗಳಿಗೆ ಹಾನಿ ಮಾಡುತ್ತಿರುವುದರಿಂದ ಸುಗಮ ನೀರು ಸರಬರಾಜಿಗೆ ಅಡಚಣೆ ಉಂಟಾಗುತ್ತಿದೆ. ಹಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ಅಳವಡಿಸಿ ಒಂದು ತಿಂಗಳಾದರೂ, ಬೀದಿ ದೀಪಗಳು ಅಳವಡಿಸದೆ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಓಡಾಡುವವರಿಗೆ ತೊಂದರೆ ಉಂಟಾಗಿದೆ. ಪಟ್ಟಣದ ಹೃದಯ ಭಾಗ ಬಸ್ ನಿಲ್ದಾಣದಲ್ಲೂ ಕೂಡ ಹೈ ಮಾಸ್ಕ್ ಬಲ್ಬುಗಳು ಹಾಗೂ ವಿದ್ಯುತ್ ದೀಪಗಳು ಉರಿಯದೆ ಇಡೀ ಪಟ್ಟಣದ ಪ್ರದೇಶ ಕತ್ತಲಲ್ಲಿ ಆವರಿಸಿದೆ. ಚೆಸ್ಕಾಂ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.


