ಪೊನ್ನಂಪೇಟೆಯ ಕುಂದ-ಈಚೂರು ಡಾಂಬರಿಕರಣ ಘಟಕದ ವಿರುದ್ಧ ಗ್ರಾಮಸ್ಥರ ದೂರು:ಶಾಸಕ ಎ. ಎಸ್. ಪೊನ್ನಣ್ಣ ಪರಿಶೀಲನೆ

ಪೊನ್ನಂಪೇಟೆ ತಾಲೂಕು ಈಚೂರ್ ಕುಂದ ಗ್ರಾಮದಲ್ಲಿರುವ, ಖಾಸಗಿ ಡಾಂಬರಿಕರಣ ಘಟಕ ಕಂಪನಿ ಎನ್‌ಬಿಎನ್ ಕನ್ಸ್’ಟ್ರಕ್ಷನ್ ಕಾರ್ಯ ಚಟುವಟಿಕೆಗಳ ವಿರುದ್ಧ, ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ದೂರು ಈ ಹಿಂದೆ ಸಾರ್ವಜನಿಕ ವಲಯದಿಂದ ಬಂದಿತ್ತು. ಸಾರ್ವಜನಿಕರು ಪ್ರತಿಭಟನೆ ಸಹ ಮಾಡಿದರು. ಈ ಮಾಹಿತಿ ಪಡೆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರಿರ ನವೀನ್, ಹಾತ್ತೂರು ವಲಯ ಅಧ್ಯಕ್ಷರು ಕೊಕ್ಕಂಡ ರೋಷನ್, ಅರ್ವತೋಕ್ಲು ವಲಯ ಅಧ್ಯಕ್ಷ ತೀತಿಮಾಡ ಯಶ್ವಿನ್, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಪಕ್ಷದ ಪ್ರಮುಖರಾದ ಅಜ್ಜಿಕುಟ್ಟಿರ ಗಿರೀಶ್, ಕುಪ್ಪಣ್ಣಮಾಡ ಪ್ರೀತಮ್, ಕಾಳಿಮಾಡ ದೀಪು, ಕುಂಡಚ್ಚಿರ ಮಂಜು ದೇವಯ್ಯ,ಅಯೂಬ್, ಸ್ಥಳೀಯರು ಉಪಸ್ಥಿತರಿದ್ದರು.

ಕೊಡಗು ನ್ಯೂಸ್

Exit mobile version