ದಿಯಾ ಭೀಮಯ್ಯಗೆ ರಾಷ್ಟ್ರೀಯ ಮಟ್ಟದ ಜೂನಿಯರ್ ಬ್ಯಾಡ್ಮಿಂಟನ್ ಎರಡು ಚಿನ್ನದ ಪ್ರಶಸ್ತಿ ಮತ್ತು ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ

ಹೈದರಾಬಾದಿನ ಹಾರ್ಟ್ ಫುಲ್ನೆಸ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಜನವರಿ ತಿಂಗಳು 3 ರಿಂದ 10ನೇ ತಾರೀಖಿನವರೆಗೆ ನಡೆಸಲಾದ ಯೋನೆಕ್ಸ್ ಸನ್ ರೈಸ್ ಆಲ್ ಇಂಡಿಯ ಜೂನಿಯರ್ (19 ವರ್ಷದೊಳಗಿನ)ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ 2026 ರಲ್ಲಿ ಕೊಡಗಿನ ದಿಯಾ ಭೀಮಯ್ಯ

ಮಿಶ್ರ ಡಬಲ್ಸ್ ನಲ್ಲಿ ಕೇರಳದ ಜೊರ್ನ್ ಜೇಸನ್ ಜೊತೆಯಾಟದಲ್ಲಿ ಪ್ರಥಮ ಹಾಗು ಬಾಲಕಿಯರ ಡಬಲ್ಸ್ ನಲ್ಲಿ ಹರಿಯಾಣದ ಬಾರುನಿ ಪರುಸ್ವಾಲ್ ಜೊತೆಗೂಡಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಈ ವಿಜಯ ಅವರಿಗೆ ಯೋನೆಕ್ಸ್ ಡಚ್ ಜೂನಿಯರ್ ಇಂಟರ್ ನ್ಯಾಷನಲ್ 2026 25ನೇ ಫೆಬ್ರುವರಿಯಿಂದ 1ನೇ ಮಾರ್ಚ್ ವರೆಗೆ ಮತ್ತು ಯೋನೆಕ್ಸ್ ಜರ್ಮನ್ ಜೂನಿಯರ್ 2026 4ನೇ ಮಾರ್ಚ್ ರಿಂದ 8ನೇ ಮಾರ್ಚ್ ವರೆಗೆ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಒದಗಿಸಿದೆ.

Exit mobile version