ರಾಷ್ಟ್ರ ಮಟ್ಟದ ಸರ್ಕಲ್ ಕಬಡ್ಡಿಗೆ ಆಯ್ಕೆ

ದಿನಾಂಕ 10/01/2026 ರಿಂದ 13/01/2026 ರ ವರೆಗೆ ಉತ್ತರಾಖಂಡದ ನೈನಿತಾಲ್ ನ ಬಾಜ್ ಪುರದ ಶ್ರೀ ಗುರುದ್ವಾರ ಸಾಹಿಬ್ ನಲ್ಲಿ ನಡೆಯುವ 19ನೇ ಸೀನಿಯರ್ ಸರ್ಕಲ್ ಸ್ಟೈಲ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಗಳಲೆ ಗ್ರಾಮದ ರವಿ ಡಿ ಆರ್ ಮತ್ತು ಜ್ಯೋತಿ ಎನ್ ಆರ್ ದಂಪತಿಯರ ಪುತ್ರ ಜ್ಞಾನೇಶ್ ಡಿ ಆರ್ ಆಯ್ಕೆಯಾಗಿರುತ್ತಾರೆ ಎಂದು ಕೊಡಗು ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಕಪಿಲ್ ಕುಮಾರ್ ಬಿ. ಡಿ. ತಿಳಿಸಿರುತ್ತಾರೆ.

 

ಕೊಡಗು ನ್ಯೂಸ್

Exit mobile version