ಶಾಸಕ ಎ. ಎಸ್. ಪೊನ್ನಣ್ಣ ಅವರನ್ನು ಭೇಟಿಮಾಡಿದ ಜಿಲ್ಲೆಯ ನೂತನ ಎಸ್ಪಿ ಬಿಂದುಮಣಿ

ಕೊಡಗು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಬಿಂದು ಮಣಿ ರವರು ಇಂದು ವಿರಾಜಪೇಟೆಯ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಹೂಗುಚ್ಚ ನೀಡಿವುದರ ಮೂಲಕ ಅಭಿನಂದಿಸಿದರು.

ಪೊಲೀಸ್ ವರಿಷ್ಠಾಧಿಕಾರಿಯವರನ್ನು ಅಧಿಕೃತವಾಗಿ ಜಿಲ್ಲೆಗೆ ಸ್ವಾಗತಿಸಿದ ಮಾನ್ಯ ಶಾಸಕರು, ಕರ್ತವ್ಯ ಪಾಲನೆ ಹಾಗೂ ಕಾನೂನು ಕಾಪಾಡುವಲ್ಲಿ ನಿಗಾ ವಹಿಸಿ ಉತ್ತಮವಾಗಿ ಕೆಲಸ ಮಾಡಿ ಎಂದು ಶುಭ ಕೋರಿದರು.

Exit mobile version