ಶನಿವಾರ ನಗರದ ಸುದರ್ಶನ ವೃತ್ತದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದ ಅಕ್ಷರದೇವಿ ಮಾತೆ ಸಾವಿತ್ರಿ ಭಾಯಿ ಫುಲೆ ಅವರ 195ನೇ ಜಯಂತ್ಯೋತ್ಸವದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಶ್ರೀಮತಿ ಕಲಾವತಿ ಸಾವಿತ್ರಿ ಭಾಯಿ ಫುಲೆ ಅವರ ವಿಚಾರಗಳು ಪ್ರಪಂಚಕ್ಕೆ ಮತ್ತಷ್ಟು ಪರಿಚಯಗೊಳಿಸಬೇಕೆಂದರು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಹಮ್ಮಿಕೊಂಡು ಸಮಾಜಕ್ಕೆ ಮಾದರಿ ವಿಷಯಗಳನ್ನು ಹರಡೋಣ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎಚ್ ಎಂ ನಂದಕುಮಾರ್ ಪ್ರಸ್ತಾವಿಕ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಸೌಹಾರ್ದತೆ, ಸಹೋದರತೆ, ಸಮಾನತೆ ಮತ್ತು ಶಾಂತಿಯ ಸಂದೇಶ ಸಾರುವ ಎಲ್ಲಾ ವಿಶಿಷ್ಟ ಹಾಗೂ ವಿಶೇಷ ದಿನಗಳನ್ನು ಆಚರಿಸುವುದಾಗಿ ಹೇಳಿದರು.
ಕುಮಾರಿ ಲಾಂಚಿತ ನಂದಕುಮಾರ್ ಅವರು ಸಾವಿತ್ರಿ ಭಾಯಿ ಫುಲೆ ಅವರ ಜೀವನ, ಸಂಘರ್ಷ ಹಾಗು ಸಮಸಮಜದ ನಿರ್ಮಾಣದಲ್ಲಿನ ಅವರ ಪಾತ್ರ ಮತ್ತು ಮೊದಲ ಶಿಕ್ಷಕಿಯಾಗಿ ಅವರ ನಿಸ್ವಾರ್ಥ ಸೇವೆ ಹಾಗೂ ತ್ಯಾಗವನ್ನು ಸಭೆಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ವಾಸಂತಿ , ಸವಿತಾ ಸಮಾಜ ಕೊಡಗು ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷರು, ಶ್ರೀಮತಿ ಲತಾ ರಾಜನ್ ಹಿಂದು ಮಲಯಾಳಿ ಸಂಘ ಮಹಿಳಾ ಘಟಕ ಅಧ್ಯಕ್ಷರು ಕೊಡಗು ಜಿಲ್ಲೆ, ಶ್ರೀಮತಿ ಮುಹೀನಾ ಅಬೂಬಕರ್ ಜಮಾತೆ ಇಸ್ಲಾಮ್ ಮಹಿಳಾ ಘಟಕ ಅಧ್ಯಕ್ಷರು ಕೊಡಗು ಜಿಲ್ಲೆ, ಶ್ರೀಮತಿ ಕಾಂತಮಣಿ ಜಿಲ್ಲಾ ಅಧ್ಯಕ್ಷರು ಮಹಿಳಾ ಘಟಕ ಕುಲಾಲ ಸಂಘ ಕೊಡಗು ಇನ್ನಿತರರು ಭಾಗವಹಿಸಿದ್ದರು.
ಸಿದ್ದರಾಜು ಬೆಳ್ಳಯ್ಯ ಸರ್ವರನ್ನು ಸ್ವಾಗತಿಸಿ, ಡಾ ಸತೀಶ್ಮು ನಿರೂಪಿಸಿ ಮುತ್ತಪ್ಪ ವಂದಿಸಿದರು.


