ನಿಖರತೆ ಇಲ್ಲದ ಸುದ್ದಿಯಿಂದ ಹಲವರ ಬಗ್ಗೆ ಅನುಮಾನ:-ಜಗದೀಶ್ ರೈ ಸ್ಪಷ್ಟನೆ
ನಮಸ್ಕಾರ…
ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹನಿಟ್ರ್ಯಾಪ್ಗೆ ಸಂಬಂಧಿಸಿದ ಒಂದು ಸುದ್ದಿ ಹರಿದಾಡುತ್ತಿದೆ. ಯಾವುದೇ ನಿಖರತೆ ಇಲ್ಲದೆ, ಕೇವಲ ಊಹಾಪೋಹ ವಿಚಾರವನ್ನಿಟ್ಟುಕೊಂಡು ಮಾಡಿರುವ ಸುದ್ದಿಯಿಂದ ಅನೇಕರ ಬಗ್ಗೆ ಅನುಮಾನ ಮೂಡುವಂತಾಗಿದೆ. ನನ್ನನ್ನೂ ಸೇರಿದಂತೆ ಹಲವರು ಗುತ್ತಿಗೆದಾರರಾಗಿದ್ದುಕೊಂಡು, ಬೇರೆ ಬೇರೆ ಸಮಾಜದ ಜವಾಬ್ದಾರಿಯಲ್ಲಿದ್ದಾರೆ. ಐಶಾರಾಮಿ ವಾಹನಗಳನ್ನೂ ಹೊಂದಿದ್ದಾರೆ. ಈಗ ಹರಿದಾಡುತ್ತಿರುವ ಸುದ್ದಿಯಿಂದ ಜನ ನಮ್ಮನ್ನೆಲ್ಲ ಅನುಮಾನದಿಂದ ಕಾಣುವಂತಾಗಿದೆ.
ಹೀಗಾಗಿ ಮಾಧ್ಯಮದವರಲ್ಲಿ ವಿನಂತಿಸುತ್ತಿದ್ದೇನೆ, ಈ ಸುದ್ದಿಯಲ್ಲಿರುವ ನಿಖರತೆಯನ್ನು ಪರಿಶೀಲಿಸಿ ದಾಖಲೆ ಸಮೇತ ಯಾರು ಈ ಕೃತ್ಯದಲ್ಲಿದ್ದಾರೆಂಬುದನ್ನು ಬಹಿರಂಗಪಡಿಸಲಿ. ಕೇವಲ ಊಹಾಪೋಹದ ಸುದ್ದಿಯಿಂದ ಸಮಾಜದಲ್ಲಿ ಅನುಮಾನ ಮೂಡಿಸುವುದು ಬೇಡ. ಪೊಲೀಸ್ ಇಲಾಖೆಯ ಅಧಿಕೃತ ಹೇಳಿಕೆ ಪಡೆದು, ಯಾರ್ಯಾರು ಇದ್ದಾರೆ ಅನ್ನುವುದನ್ನು ಹೆಸರು ಸಹಿತ ಪ್ರಕಟಿಸಿದಲ್ಲಿ ಜನತೆಯಲ್ಲಿನ ಗೊಂದಲ, ಅನುಮಾನಕ್ಕೂ ಉತ್ತರ ಸಿಕ್ಕಂತಾಗುತ್ತದೆ.
ಧನ್ಯವಾದಗಳು
ಬಿ.ಡಿ. ಜಗದೀಶ್ ರೈ
PWD ಗುತ್ತಿಗೆದಾರ, ಮಡಿಕೇರಿ
ಕೊಡಗು ನ್ಯೂಸ್


