ಶಾಸಕ ಮಂತರ್ ಗೌಡ ರವರಿಂದ 95 ಲಕ್ಷದ ಕಾಮಗಾರಿಗೆ ಚಾಲನೆ.

ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಪಟ್ಟಣ ಗ್ರಾಮಕ್ಕೆ ಮಡಿಕೇರಿ ಕ್ಷೇತ್ರ ಶಾಸಕರ ಅನುದಾನದಿಂದ ಸುಮಾರು 95 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಶಾಸಕರಾದ ಮಂತರ್ ಗೌಡರವರನ್ನು ಮಾದಪಟ್ಟದಲ್ಲಿ ವಾದ್ಯಗೋಷ್ಠಿ ಮೆರವಣಿಗೆ ಮೂಲಕ ಆರತಿ ಬೆಳಗ್ಗೆ ಸನ್ಮಾನಿಸಲಾಯಿತು.

ಮಾದಪಟ್ಟಣ ಗ್ರಾಮದ ಕಾಂಕ್ರೀಟ್ ರಸ್ತೆಗೆ 25 ಲಕ್ಷ, ಅಂಗನವಾಡಿ ಕೇಂದ್ರಕ್ಕೆ ಮೂರು ಲಕ್ಷ, ಸಮುದಾಯ ಭವನ ನವೀಕರಣಕ್ಕೆ 5 ಲಕ್ಷ ಮಾದಪಟ್ಟಣದಿಂದ ಡ್ರೀಮ್ಸ್ ಲೇಔಟ್ ತನಕ 7 ಲಕ್ಷ ಹಾಗೂ 9 ರೈತರಿಗೆ ತಲೆ 5 ಲಕ್ಷದಂತೆ 45 ಲಕ್ಷಗಳು ಸಣ್ಣ ನೀರಾವರಿ ಇಲಾಖೆಯಿಂದ ಶಾಸಕರ ಮೂಲಕ ದಾಮೋದರ್ ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಒಟ್ಟು 95 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕೊಡಗು ನ್ಯೂಸ್

Exit mobile version