Close Menu
Kodagu News
    ಹೊಸ ಸುದ್ದಿ

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ
    • ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ
    • ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ
    • ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
    • ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
    • ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
    • ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್
    • ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಕ್ರೈಂ ನ್ಯೂಸ್»ಪೀಚೆಕತ್ತಿ ಮಾಡಿಕೊಡುತ್ತೇನೆಂದು ಹಲವರಿಗೆ ವಂಚನೆ: ಹಣ ಕೊಟ್ಟು ಏಮಾರಿದವರಿಂದ ದೂರು.
    ಕ್ರೈಂ ನ್ಯೂಸ್

    ಪೀಚೆಕತ್ತಿ ಮಾಡಿಕೊಡುತ್ತೇನೆಂದು ಹಲವರಿಗೆ ವಂಚನೆ: ಹಣ ಕೊಟ್ಟು ಏಮಾರಿದವರಿಂದ ದೂರು.

    ವಿರಾಜಪೇಟೆ: ಪೀಚೆ ಕತ್ತಿ ಸರಿ ಮಾಡಿಕೊಡುತ್ತೇನೆಂದು ಹೇಳಿ ಮತ್ತು ಹೊಸ ಪೀಚೆಕತ್ತಿಯನ್ನು ಮಾಡಿಕೊಡುತ್ತೇನೆದು ಮುಂಗಡ ಹಣ ಪಡೆದು ಕಳೆದ ಒಂದು ವರ್ಷದಿಂದ ಪೀಚೆ ಕತ್ತಿ ನೀಡದೆ ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಪೊನ್ನಂಪೇಟೆ ಬಾಡಗರಕೇರಿ ನಿವಾಸಿ ತಂಬುಕುಟಿರ ಪೂಣಚ ಎಂಬುವವರು ವಿರಾಜಪೇಟೆಯಲ್ಲಿರುವ ತಟ್ಟಂದ ಸುರೇಶ್ ಎಂಬುವವರಿಗೆ ದಿನಾಂಕ 4/10/2024 ರಲ್ಲಿ ಮಗನ ವಿವಾಹ ಸಂದರ್ಭ ಬೇಕಾಗಿರುವುದಕ್ಕಾಗಿ ಹೊಸ ಒಂದು ಕತ್ತಿ ಹಾಗೂ ಮನೆಯಲ್ಲಿದ್ದ ಮತ್ತೊಂದು ಕೊಂಡಿ ಕಳಚಿದ್ದ ಪೀಚೆಕತ್ತಿಯನ್ನು ಸರಿಪಡಿಸಿಕೊಡುವಂತೆ ಸುರೇಶ ಎಂಬಾತನಿಗೆ 32 ಸಾವಿರ ಮುಂಗಡ ಹಣವನ್ನು ನೀಡಿ ಮೂರು ತಿಂಗಳ ಸಮಯಾವಕಾಶ ಪಡೆದು ಬಂದಿರುತ್ತಾರೆ. ಆದರೆ ಮಗನ ಮದುವೆ ಸಮೀಪಿಸಿದರೂ ಆತ ಪೀಚೆ ಕತ್ತಿಯನ್ನು ನೀಡಿರಲಿಲ್ಲ. ಹಲವು ಬಾರಿ ಆತನ ಬಳಿ ಕೇಳಿದರೂ ಆತನಿಂದ ಕತ್ತಿ ಸಿಗದೇ ಮುಂಗಡ ಹಣವೂ ಇಲ್ಲದೆ ಸರಿಪಡಿಸಲು ನೀಡಿದ ಹಳೆ ಕತ್ತಿಯೂ ಸಿಗದಿದ್ದಾಗ 17/1/25 ರಂದು ವಿರಾಜಪೇಟೆ ನಗರ ಠಾಣೆಯಲ್ಲಿ ಪೂಣಚ ಆತನ ವಿರುದ್ಧ ದೂರು ನೀಡಿದ್ದಾರೆ. ಠಾಣೆಗೆ ಬಂದು ಮುಚ್ಚಳಿಕೆ ಬರೆದು ಕೊಟ್ಟ ತಟ್ಟಂಡ ಸುರೇಶ ಕಳೆದ ಜನವರಿ 24 ರ ಒಳಗಾಗಿ ಪೀಚೆ ಕತ್ತಿ ನೀಡುತ್ತೇನೆಂದು ಹೇಳಿದ್ದರು ಇಲ್ಲಿಯವರೆಗೆ ಪೀಚೆ ಕತ್ತಿ ಆತ ನೀಡದೆ ಸತಾಯಿಸುತ್ತಿರುವ ಬಗ್ಗೆ ಮತ್ತೆ ಪೂಕರು ನೀಡಿದರು ಏನು ಪ್ರಯೋಜನವಾಗದೆ ಪೂಣಚ್ಚ ಈಗ ಅಸಹಾಯಕರಾಗಿದ್ದಾರೆ. ಅಲ್ಲದೆ ಈತನ ವಿರುದ್ಧ ಇಂತಹುದೇ ವಂಚನೆ ಪ್ರಕರಣವೂ ವಿರಾಜಪೇಟೆ ಪೊಲೀಸ್ ಸ್ಟೇಷನ್ ನಲ್ಲಿದೆ.

    ಕೊಡವರ ಸಾಂಪ್ರದಾಯಕ ಗುರುತುಗಳಲ್ಲಿ ಒಂದಾದ ಪೀಚೆ ಕತ್ತಿಯನ್ನು ಆಚಾರಿಯಿಂದ ಹಿಂಪಡೆಯಲು ಸಾಹಸ ಮಾಡುತ್ತಿದ್ದು ಸಂಬಂಧಿಸಿದ ಇಲಾಖೆ ಸಹಾಯ ಮಾಡಬೇಕೆಂದು ಪೂಣಚ್ಚ ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

    Previous Articleಕೆಜಿ ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರನ್ನು ಸತ್ತ ಎಮ್ಮೆಗೆ ಹೋಲಿಸಿದ ತೆನ್ನಿರಾ ಮೈನಾ ವಿರುದ್ಧ ದೂರು
    Next Article ಗೋಹತ್ಯೆ, ಗೋಕಳ್ಳತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಯ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

    Related Posts

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ

    September 13, 2026

    ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ

    September 13, 2026

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.