ಕೊಡಗಿನ ಮಾಜಿ ಶಾಸಕರುಗಳನ್ನು ಸತ್ತ ಎಮ್ಮೆಗೆ ಹೋಲಿಸಿ ಅಭಿಪ್ರಾಯ ಹಂಚಿಕೊಂಡ  ತೆನ್ನಿರಾ ಮೈನಾ ಅವರ ಮೇಲೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ವಿರಾಜಪೇಟೆ ಮಾಜಿ ಶಾಸಕ ಹಾಗೂ ಮಾಜಿ ಸ್ಪೀಕರ್ ಆಗಿದ್ದು ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿಯ ಮಾಜಿ ಶಾಸಕ ಹಾಗೂ ಮಾಜಿ ಸಚಿವ ರಾದ ರಂಜನ್ ಅಪ್ಪಚ್ಚು ಅವರನ್ನು ಕಾಂಗ್ರೆಸ್ ಪಕ್ಷದ ತೆನ್ನಿರ ಮೈನಾ ಎಂಬ ವ್ಯಕ್ತಿಯು ಅವಹೇಳನ ಕಾರಿಯಾಗಿ ಸುದ್ದಿ ಪ್ರಕಟಿಸಿದ್ದಾರೆ. ಇದರಿಂದ ಕೊಡಗಿನ ಬಿಜೆಪಿ ಕಾರ್ಯಕರ್ತರ ಮನಸ್ಸಿಗೆ ತುಂಬಾ ನೋವಾಗಿದೆ.ಅದುದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇಂದು ಬಿಜೆಪಿ ಕಾರ್ಯಕರ್ತರು ವಿರಾಜಪೇಟೆ ಗ್ರಾಮಾಂತರ ಠಾಣೆ ಗೆ ಭೇಟಿ ನೀಡಿ ಅಧಿಕಾರ ಗಳಿಗೆ ಪುಕಾರು ನೀಡಿ ವಿಚಾರಣೆ ನಡೆಸುವಂತೆ ಪುಕಾರು ನೀಡಿದರು.
ಈ ಹಿಂದೆ ಕೂಡ ಸಾಮಾಜಿಕ ಜಾಲತಾಣದ ಮುಖ್ಯಸ್ಥ ರ ಮೇಲೆ ಆರೋಪ ಹೊರಿಸಿ ಅವರು ಆತ್ಮಹತ್ಯೆ ಗೆ ಕಾರಣರಾಗಿದ್ದರು.
ಮತ್ತೆ ಈ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಬಿಜೆಪಿ ಎಸ್ ಮೋರ್ಚದ ವಿರಾಜಪೇಟೆ ಮಂಡಲದ ಅದ್ಯಕ್ಷರಾದ ಅಭಿಜಿತ್ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಮಂಡಲದ ಅದ್ಯಕ್ಷರಾದ ಸುವಿನ್ ಗಣಪತಿ, ವಿರಾಜಪೇಟೆ ತಾಲ್ಲೂಕಿನ ಬಿಜೆಪಿ ಅದ್ಯಕ್ಷರಾದ ನೆಲ್ಲಿರ ಚಲನ್,ವಿರಾಜಪೇಟೆ ನಗರದ ಮಾಜಿ ಅದ್ಯಕ್ಷರಾದ ಸಚ್ಚಿನ್ ಕುಟ್ಟಯ್ಯ, ಒ.ಬಿ.ಸಿ.ಮೋರ್ಚಾದ ಅದ್ಯಕ್ಷರಾದ ಸುರೇಶ್, ಮುತ್ತಪ್ಪನ್ ಮಲೆಯಾಳಂ ಸಂಘದ ಅದ್ಯಕ್ಷರಾದ ಸುಮೇಶ್,ಬಿಜೆಪಿ ಕಾರ್ಯಕರ್ತರಾದ ಸಾಯಿನಾಥ್ ನಾಯ್ಕ,ಮಹೇಶ್, ಉನ್ನಿ,ಸ್ನೇಕ್ ಸತೀಶ್, ಕಿರಣ್,ವಿಜಯ, ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.

Exit mobile version