ಇರಿಟ್ಟಿ: ಹದೆಗೆಟ್ಟಿರುವ ಕೂಟುಹೊಳೆ, ಪೆರುಂಬಾಡಿ ನಡುವೆ ಹದೆಗೆಟ್ಟಿರುವ 19 ಕಿಮಿ ರಸ್ತೆಯನ್ನು ಸರಿಪಡಿಸಲು ಕೋರಿ ಕೇರಳ ಇರಿಟ್ಟಿ ಪೆರವೂರ್ ನ ಕಾಂಗ್ರೆಸ್ ಶಾಸಕ ಸನ್ನಿ ಜೋಸೆಪ್ ಅವರು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಈಗ ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಶಾಸಕ ಸನ್ನಿ ಜೋಸೆಫ್, ಹದೆಗೆಟ್ಟ ರಸ್ತೆಯಿಂದ ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದ ರಸ್ತೆ ಅವಘಡಲ್ಲಿ ಕೇರಳದ ಇಬ್ಬರು ಲಾರಿ ಚಾಲಕರು ಮೃತಪಟ್ಟಿರುವ ಬಗ್ಗೆ ಪತ್ರದಲ್ಲಿ ಉಲ್ಲೇಕಿಸಿದ್ದಾರೆ. ತೀರಾ ಹದೆಗೆಟ್ಟಿರುವ ಪೆರುಂಬಾಡಿಯಿಂದ ಮೂರು ಕಿಮಿ ರಸ್ತೆಯನ್ನು ತಕ್ಷಣ ಡಾಮರೀಕರಣ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಪತ್ರ ಬರೆಯಲಾಗಿದೆ.

ಈಗಾಗಲೇ 10.6 ಕಿಮಿ ರಸ್ತೆ ದುರಸ್ತಿಗೆ 17.3 ಕೋಟಿ ಅನುದಾನ ಬಿಡುಗಡೆಗೊಂಡಿದ್ದರೂ ಅದರಲ್ಲಿ ಕೇವಲ 4 ಕಿಮಿ ಮಾತ್ರ ದುರಸ್ತಿ ಮಾಡಲು ಸಾಧ್ಯವಾಗಿದ್ದು, ಹದೆಗೆಟ್ಟ ರಸ್ತೆಯಿಂದಲೇ ಅಪಘಾತವಾಗಿ ಇಬ್ಬರು ಲಾರಿ ಚಾಲಕರು ಮೃತಪಟ್ಟಿರುವ ಬಗ್ಗೆ ಉಲ್ಲೇಕಿಸಿರುವ ಶಾಸಕ ಸನ್ನಿ ಜೋಸೆಫ್, ರಸ್ತೆಯ ಅಗಲೀಕರಣ ಕೇವಲ ವಾಹನ ಸಂಚಾರಕ್ಕೆ ಮಾತ್ರವಲ್ಲದೆ ಪ್ರಯಾಣಿಕರ ಸುರಕ್ಷತೆಗೂ ಅನಿವಾರ್ಯತೆಯಿದೆಯೆಂದು ಶಾಸಕ ಜೋಸೆಪ್ ಪತ್ರದಲ್ಲಿ ಅಭಿಪ್ರಾಯಿಸಿದ್ದಾರೆ. ಕಾಮಗಾರಿ ಶೀಗ್ರ ಮಾಡುವುದು 12.5 ಕಿಮಿ ಗೆ 31 ಕೋಟಿ ಒಳಪಡುವ ಕಾಮಗಾರಿಗಳಿಗೆ ಅಪ್ರೂವಲ್ ನೀಡುವುದು, ಅಪಾಯಕಾರಿಯಾಗಿರುವ ಮರಗಳನ್ನು ತೆರವುಗೊಳಿಸಿ ರಸ್ತೆ ಬದಿಯಲ್ಲಿ ಸುರಕ್ಷಿತ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಅಂತರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಬೇಕೆಂಬ ಮನವಿ ಪತ್ರವನ್ನು ಇರಿಟ್ಟಿ ಶಾಸಕ ಸನ್ನಿ ಜೋಸೆಪ್ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದು ಶೀಗ್ರ ಕಾಮಗಾರಿಗಳು ಆರಂಭಿಸಬೇಕೆಂದು ಪತ್ರದಲ್ಲಿ ಉಲ್ಲೇಕಿಸುವ ಮೂಲಕ ಮನವಿ ಮಾಡಿದ್ದಾರೆ.

ಈ ಬಗ್ಗೆ ಕೊಡಗು ನ್ಯೂಸ್ ಜೊತೆ ಮಾತನಾಡಿದ ಶಾಸಕ ಸನ್ನಿ ಜೋಸೆಫ್ “ಕರ್ನಾಟಕ ಮತ್ತು ಕೇರಳದ ಕಣ್ಣೂರು ಭಾಗಕ್ಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ಅಂತರಾಜ್ಯ ರಸ್ತೆ ಈ ಮಟ್ಟಕ್ಕೆ ಹದೆಗೆಟ್ಟಿರುವುದು ಅಪಘಾತಗಳಿಗೆ ಅವಕಾಶ ಕೊಟ್ಟಂತಾಗುತ್ತದೆ, ಅಲ್ಲದೆ ಈ ಅಂತರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಬೇಕೆಂದು ಅದಕ್ಕೆ ಪೂರಕವಾಗಿ ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ” ಎಂದು ಹೇಳಿದ್ದಾರೆ.

ಕೊಡಗು ನ್ಯೂಸ್

Exit mobile version