ಕಾವೇರಿ ನೀರು ಬಿಡಲು ವಿರೋಧಿಸಿ ಕುಶಾಲನಗರದಲ್ಲಿ ಕರವೇ ಪ್ರತಿಭಟನೆ
ಕುಶಾಲನಗರ, ಜು.30: ಕಾವೇರಿ ಜಲ ನಿಯಂತ್ರಣ ಸಮಿತಿಯು ತಮಿಳುನಾಡಿಗೆ ಪ್ರತಿ ದಿನ 3500 ಕ್ಯೂಸೆಕ್ ನೀರು ಬಿಡಲು ಆದೇಶಿಸಿರುವುದನ್ನು ಖಂಡಿಸಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ, ಕೊಡಗು ಜಿಲ್ಲಾ ಘಟಕ ವತಿಯಿಂದ ಜು.30 ರಂದುಪ್ರತಿಭಟನೆ ನಡೆಯಿತು
ಈ ಸಂಬಂಧ ಜಿಲ್ಲಾಧ್ಯಕ್ಷ ಬಿ ಎ ದಿನೇಶ್
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ದೆಹಲಿ ಕಾವೇರಿ ಜಲ ನಿಯಂತ್ರಣ ಸಮಿತಿಯು ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ನೀರು ಬಿಡಲು ಶಿಫಾರಸು ಮಾಡಿರುವುದು ಖಂಡನೀಯ. ಈಗಾಗಲೇ ತೀವ್ರ ಬರದಿಂದ ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವುದು ರೈತರಿಗೆ ಮಾಡುವ ಘೋರ ಅನ್ಯಾಯ” ಎಂದು ಕಿಡಿಕಾರಿದರು.
” ಇದೇ ಸಂದರ್ಭ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಿ, ಅಲ್ಲಿ ಮಾನವ ಸರಪಳಿ ರಚಿಸಿ ದೆಹಲಿ ಕಾವೇರಿ ಜಲ ಮಂಡಳಿ ಧೋರಣೆಯನ್ನು ಖಂಡಿಸಲಾಗುವುದು” ಎಂದು ತಿಳಿಸಿದರು.



