
ಬಿಜೆಪಿ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅವಶ್ಯಕತೆ ಇಲ್ಲ
ಮೈಸೂರಿನಲ್ಲಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಹೇಳಿಕೆ
ಪಾರದರ್ಶಕ ತನಿಖೆ ಆಗಬೇಕು ಎಂಬುದನ್ನು ನಾವು ಹೇಳಿದ್ದೇವೆ.
ಯಾರೇ ತಪ್ಪಿತಸ್ಥರಿದ್ದರೂ ಗುರುತಿಸಿ ಶಿಕ್ಷಿಸುವ ಕೆಲಸ ಸರ್ಕಾರ ಮಾಡಲಿದೆ.
ರಾಜಕೀಯಕ್ಕಾಗಿ ಆರೋಪ ಮಾಡಿ ಇಂತ ಪ್ರಯತ್ನ ಮಾಡಿರೋದು ಸರಿಯಲ್ಲ
ಧರ್ಮಸ್ಥಳ ಪಾವಿತ್ತ್ಯತೆ ಕಾಪಾಡಿ ತನಿಖೆ ಆಗಬೇಕು ಎಂದು ಸರ್ಕಾರ ಹೇಳಿದೆ.
ಹೆಗಡೆ ಅವರೇ ಎಸ್. ಐ. ಟಿ ರಚನೆಗೆ ಸ್ವಾಗತ ಮಾಡಿದರು.
ಪೊಲೀಸರು ತನಿಖೆ ಮಾಡಿ ಬೇರೆ ಬೇರೆ ಅಂಶಗಳು ಇಂದು ಹೊರ ಬಂದಿರುವ ಸಾಧ್ಯತೆ ಇದೆ.
ದೂರು ಕೊಟ್ಟವರಿಗೂ ಜವಾಬ್ದಾರಿ ಇದೆ
ಸುಳ್ಳು ದೂರು ಕೊಟ್ಟು, ಇಂತಹ ವಾತಾವತಣ ಸೃಷ್ಟಿ ಮಾಡಿದ್ದರೆ ಅಪರಾಧ
ಅದಕ್ಕಾಗಿ ದೂರುದಾರನನ್ನು ಬಂಧಿಸಲಾಗಿದೆ.
ತನಿಖೆ ನಡೆಯುವಾಗ ದಾರಿ ತಪ್ಪಿಸುವ ಕೆಲಸ ಮಾಡಬಾರದು.
ಬಿಜೆಪಿ ಇದರಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಅವಶ್ಯಕತೆ ಇಲ್ಲ
ಇದು ಷಡ್ಯಂತ್ರ ಆಗಿದ್ರೆ ಷಡ್ಯಂತ್ರದಲ್ಲಿ ಯಾರಿದ್ದಾರೆ ಏನು ಎಲ್ಲವೂ ಕೂಡ ಹೊರಗೇ ಬರತ್ತೆ
ಎಲ್ಲರ ಮೇಲು ಕೂಡ ಕಾನೂನು ಕ್ರಮ ಆಗತ್ತೆ
ಮೈಸೂರಿನಲ್ಲಿ ಎ ಎಸ್ ಪೊನ್ನಣ್ಣ ಹೇಳಿಕೆ
*ಕೊಡಗು ನ್ಯೂಸ್*

