
ಸದರಿ ಪ್ರಕರಣದ ಆರೋಪಿ ಪತ್ತೆಗಾಗಿ ಶ್ರೀ ಚಂದ್ರಶೇಖರ್.ಪಿ, ಡಿಎಪಿ, ಸೋಮವಾರಪೇಟೆ ಉಪವಿಭಾಗ, ಶ್ರೀ ದಿನೇಶ್ ಕುಮರ್, ಸಿಪಿಐ, ಕುಶಾಲನಗರ ವೃತ್ತ, ಶ್ರೀ ರಾಮಚಂದ್ರ.ಎನ್, ಪಿಎಸ್‌ಐ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 19-07-2025 ರಂದು ಮೃತ ಮಂಜಣ್ಣ ರವರ ಮಗನಾದ ಆರೋಪಿ 2.4.2, 28 : 61(2), 137(2), 103(1), 238 8/2 3(5) BNS ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಮೃತ ಮಂಜಣ್ಣ ರವರ ಹಣ ಮತ್ತು ಆಸ್ತಿಯ ಸಲುವಾಗಿ ಚಂದ್ರಶೇಖರ್ ತನ್ನ ಸ್ನೇಹಿತರೊಂದಿಗೆ ಕೊಲೆ ಮಾಡುವ ಉದ್ದೇಶದಿಂದ ಮೊದಲೇ ರೂಪಿಸಿದ ಸಂಚಿನಂತೆ ದಿನಾಂಕ: 14-03-2025 ರಂದು ಅಲ್ಲೋ ಕಾರಿನಲ್ಲಿ ಕೂಡುಮಂಗಳೂರು ಗ್ರಾಮದಲ್ಲಿನ ಮನೆಯಿಂದ ಮಂಜಣ್ಣ ರವರನ್ನು ಬಲವಂತದಿಂದ ಎತ್ತಿಕೊಂಡು ಕಾರಿನಲ್ಲಿ ಕೂರಿಸಿಕೊಂಡು ಹೋಗುವಾಗ ಮಂಜಣ್ಣ ರವರು ಕೂಗಿದಾಗ ಚಂದ್ರಶೇಖರ್ & ಸ್ನೇಹಿತರು ಹಲ್ಲೆ ನಡೆಸಿದ್ದು, ಪ್ರಜ್ಞೆ ತಪ್ಪಿರುವ ಮಂಜಣ್ಣ ಮೃತಪಟ್ಟಿರುತ್ತಾನೆ ಎಂಬುದಾಗಿ ಭಾವಿಸಿ ದೇಹವನ್ನು ಚಿಕ್ಕಬೆಟ್ಟಗೇರಿಯಲ್ಲಿ ಹರಿಯುತ್ತಿರುವ ಕಾವೇರಿ ಹೊಳೆಯಲ್ಲಿ ಎಸೆದು ಸಾಕ್ಷ್ಯಾನಾಶಪಡಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುತ್ತದೆ ಹಾಗೂ ಸದರಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಶ್ರೀ ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

