
ಬಿರುನಾಣಿ ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪವೇ ಇರುವ ಈ ಶೌಚಾಲಯ ಸಮೀಪ ಮಹಿಳಾ ಸಮಾಜ, ಒಂದು ಕಡೆ ಅಂಗನವಾಡಿ, ಇನ್ನೊಂದು ಕಡೆ ಶಾಲೆ ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಶೌಚಾಲಯದ ಸಮೀಪ ಸಾರ್ವಜನಿಕರ ಒಡನಾಟ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಗೆ ಪಟ್ಟಣದಲ್ಲಿ ಒಂದೇ ಒಂದು ಶೌಚಾಲಯವಿದ್ದು ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಗಬ್ಬೆದ್ದು ಹೋಗಿದೆ. ಸರಿಯಾಗಿ ನೀರಿಲ್ಲ ಸ್ವಚ್ಛಗೊಳಿಸುತ್ತಿಲ್ಲ ಆದ್ದರಿಂದ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುವ ಆತಂಕ ಎದುರಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಪಿಡಿಓ ಇದನ್ನು ಕಂಡರೂ ಕಾಣದಂತೆ ಬಿಟ್ಟಿರುವುದು ದುರದೃಷ್ಟಕರ. ಇನ್ನಾದರೂ ಈ ಬಗ್ಗೆ ವಿಶೇಷ ಗಮನಹರಿಸಿ ಶೌಚಾಲಯವನ್ನು ದುರಸ್ತಿಪಡಿಸಿ ಅತ್ಯಂತ ಸ್ವಚ್ಛವಾಗಿ ಇಟ್ಟುಕೊಳ್ಳಲು ಮುಂದಾಗಲಿ ಈ ಮೂಲಕ ಸಾರ್ವಜನಿಕರಿಗೂ ಬಳಸಲು ಉತ್ತಮವಾಗಿ ನಿರ್ವಹಿಸುವಂತಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
ಪೈಸಲ್ ಪದಾಯತ್


