ಎಫ್‌ಎಂಸಿ ಕಾಲೇಜು ಹಿಂಭಾಗ ಘಟನೆ; ಪೊಲೀಸರಿಂದ ತನಿಖೆ ಆರಂಭ

ಮಡಿಕೇರಿ: ಗುಂಡೇಟಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಎಫ್‌ಎಂಸಿ ಕಾಲೇಜಿನ ಹಿಂಭಾಗದಲ್ಲಿ ನಡೆದಿದೆ.

ಮೃತರನ್ನು ಮಿನ್ನಂಡ ರಾಜಪ್ಪ (75) ಎಂದು ಗುರುತಿಸಲಾಗಿದೆ. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಮಡಿಕೇರಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ರಾಜಪ್ಪ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿದ್ದ ಕೋವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಡಿಕೇರಿ ನಗರ ಠಾಣಾಧಿಕಾರಿ ಶ್ರೀಧರ್ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಸಾವಿನ ಹಿಂದಿನ ನಿಖರ ಕಾರಣ ತಿಳಿಯಲು ಮುಂದಾಗಿದ್ದಾರೆ.

Exit mobile version