18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಐಪಿಎಲ್ ಚಾಂಪಿಯಸ್ ಟ್ರೋಫಿಯನ್ನು ಗೆದ್ದ ಬೆಂಗಳೂರು ತಂಡಕ್ಕೆ ದೇಶದಾದ್ಯಂತ ಅಭಿಮಾನಿಗಳು ಶುಭಕೋರುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವಾಟ್ಸಪ್, ಫೇಸ್ ಬುಕ್, ಇನ್ಸ್ಟಾ, ಯೂಟ್ಯೂಬ್ ಎಲ್ಲದರಲ್ಲೂ ಸಂಭ್ರಮವೋ ಸಂಭ್ರಮ.

 

ಮಡಿಕೇರಿ ತಾಲೂಕಿನ ಹಾಕತ್ತೂರು ಪಂಚಾಯಿತಿಯ ಆರ್ಸಿಬಿ ಅಭಿಮಾನಿಗಳು ರಾತ್ರಿ ಸಂಭ್ರಮಿಸಿದಲ್ಲದೆ ಇಂದು ಹಾಕತ್ತೂರು ಪಂಚಾಯಿತಿಯ ಹಾಕತ್ತೂರು, ಬಿಳಿಗೇರಿ, ತೊಂಬತ್ತುಮನೆ, ಮೇಕೇರಿ ಹಾಗೂ ಕಗ್ಗೊಡ್ಲುವಿನ ಸರಕಾರಿ ಶಾಲೆಗಳಿಗೆ ತೆರಳಿ ಪ್ರಸಾದ್ ಪೂಜಾರಿ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೈಸೂರು ಪಾಕ ವಿತರಿಸಿದರು.

ಕಿರಣ್, ದಯಾ, ಪ್ರವೀಣ್, ಖಾದರ್, ಕರೀಂ, ಸುನೀಲ್, ಕೌಶಿಕ್ ಮುಂತಾದವರು ಇದ್ದರು.

Exit mobile version